ಕೊಪ್ಪಳ 24: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಸುಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಕೊನೆಯ ದಿನವಾದ ಇಂದು ಹಾಗೂ ಅಮವಾಸ್ಯೆ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಭಕ್ತ ಸಾಗರ ಹರಿದು ಬಂತು.
ಶುಕ್ರವಾರದಂದು ಬೆಳಗ್ಗೆಯಿಂದಲೇ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಶ್ರೀಗವಿಸಿದ್ದೇಶ್ವರ ದೇವರ ದರ್ಶನ ಪಡೆದರು.
ಜನವರಿ 12ರಂದು ಶ್ರೀ ಗವಿಮಠದ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರಾರಂಭವಾದ ಜಾತ್ರೆ ಇಂದು ಅಮವಾಸ್ಯೆಗೆ ಮುಕ್ತಾಯವಾಗಲಿದೆ. ಮಹಾದಾಸೋಹದಲ್ಲಿ ಭಕ್ತರಿಗೆ ಊಟಕ್ಕೆ ಗೋದಿ ಪಾಯಸ,ವಿವಿಧ ತರಕಾರಿ ಪಲ್ಯೆ, ಅನ್ನ ಸಾಂಬಾರ್, ಉಪ್ಪಿನಕಾಯಿ, ಕಡಲೆ ಚಟ್ನಿ ನೀಡಲಾಯಿತು.
ದಾಸೋಹದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಶರಣಪ್ಪ ಗಿಣಿಗೇರಾ, ಶ್ರೀನಿವಾಸ ಪೂಜಾರ್, ವಿರೇಶ ಇಂದರಗಿ ಸೇರಿದಂತೆ ಇತರರು ಸೇವೆ ಸಲ್ಲಿಸಿದರು.