ಕೊಂಕಣ ಮರಾಠರು ಉಪ ಜಾತಿಯ ಕಾಲಂನಲ್ಲಿ ಕುಣಬಿ ಬರೆಸಲು ಕರೆ
Konkan Marathas call for writing Kunabi in sub-caste column
ಕಾರವಾರ 19 : ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಜಿಲ್ಲೆಯ ಕೊಂಕಣ ಮರಾಠ ಸಮಾಜದವರು ಜಾತಿಯನ್ನು ಕೊಂಕಣ ಮರಾಠ ಮತ್ತು ಉಪ ಜಾತಿಯನ್ನು ಕುಣಬಿ ಎಂದು ನಮೂದಿಸಬೇಕು ಎಂದು ಸಮಾಜದ ಧುರೀಣ ಜನಾರ್ಧನ ಗಾಂವ್ಕರ ಕರೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಂಕಣ ಮರಾಠ ಸಮಾಜವು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸ್ವಾಗತಿಸುತ್ತದೆ ಎಂದ ಅವರು ಮರಾಠಿ ಕುಣಬಿಗಳ ಭಾಷೆ ಮರಾಠಿ ಎಂದು ಬರೆಸಿ ಎಂದರು. ಈ ಹಿಂದೆ ಸರಕಾರವು ಮರಾಠ ಸಮುದಾಯ ಹಾಗೂ ಅದರ ಒಳ ಪಂಗಡಗಳಿಗೆ ಮೀಸಲಾತಿ ನೀಡಲು ಎನ್. ಶಂಕರಾ್ಪ ಅಧ್ಯಯನ ಆಯೋಗವನ್ನು ರಚಿಸಿತ್ತು. ಆದರೆ ಆಯೋಗವು ಕೊಂಕಣ ಮರಾಠ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ನಮ್ಮ ಸಮಾಜ ಪ್ರವರ್ಗ 3 (ಬಿ) ದಲ್ಲಿ ಇರುವ ಕಾರಣ ಸರಕಾರದ ಯಾವುದೆ ಸವಲತ್ತು ಸಿಗುತ್ತಿಲ್ಲ. ಹೀಗಾಗಿ ಸಮದಾಯದ ಜನಸಂಖ್ಯೆಯನ್ನು ನಿಖರವಾಗಿ ಸರಕಾರಕ್ಕೆ ತಿಳಿಸಲು ಕೊಂಕಣ ಮರಾಠ ಸಮಾಜದ ಪ್ರತಿಯೊಬ್ಬರು, ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಮಿಕ್ಷೆಯಲ್ಲಿ ಭಾಗವಹಿಸಬೇಕು ಎಂದರು. ಮುಖಂಡರಾದ ಗಜಾನನ ಆನಂದು ರಾಣೆ, ಅರುಣ ಗಾಂವ್ಕರ, ಆನಂದು ಗಾಂವ್ಕರ ಹಾಗೂ ರಾಹುಲ ನಾಯ್ಕ ಇದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 