ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಕೋನರಡ್ಡಿ ಕಂಬನಿ

ಹುಬ್ಬಳ್ಳಿ೧೦ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಬಹುಭಾಷಾ ನಟ ಹಾಗೂ ರಂಗಭೂಮಿ ತಜ್ಞ,  ನಿದರ್ೇಶಕರೂ ಹಾಗೂ ವಿಶೇಷವಾಗಿ ಧಾರವಾಡದವರಾಗಿದ್ದ ಗಿರೀಶ್ ಕಾರ್ನಾಡ್ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ ಕಂಬನಿ ಮಿಡಿದಿದ್ದಾರೆ.

ಅವರು 1970ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ಶೈಲಿಯ ಮಾತುಗಾರಿಕೆ, ಉತ್ತರ ಕನರ್ಾಟಕದ ಭಾಷೆಯ ಸೊಗಡನ್ನು ಎತ್ತಿ ತೋರಿಸಿದ್ದು, ಇಡೀ ಪ್ರಪಂಚ ಓಡಾಡಿದರೂ, ಅವರು ಧಾರವಾಡ ನೆಲದ ಮೇಲೆ ಅಪಾರ ಪ್ರೀತಿ, ಗೌರವ ಹೊಂದಿದ್ದರು. 

ಅವರು ಧಾರವಾಡದೊಂದಿಗೆ ಯಾವಾಗಲೂ ಒಂದು ಅಭಿನಾಭಾವ ಸಂಬಂಧ ಹೊಂದಿದ್ದರು. ವಿಭೀನ್ನ ವೈಚಾರಿಕತೆ, ತತ್ವ ಸಿದ್ದಾಂತ ಪ್ರತಿಪಾದಿಸುತ್ತಿದ್ದರೂ, ಎಲ್ಲರನ್ನು ಗೌರವ, ವಿಶ್ವಾಸದಿಂದ ಕಾಣುವ ಗುಣ ಹೊಂದಿದ್ದರು.

ಅವರ ಅಗಲಿಕೆ, ಕನ್ನಡ ಸ್ವಾರಸ್ವತ ಲೋಕಕ್ಕೆ, ಕನ್ನಡ ಚಿತ್ರರಂಗಕ್ಕೆ ಹಾಗೂ ವಿಶೇಷವಾಗಿ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾಥರ್ಿಸಿಸುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.