ನವದೆಹಲಿ, ಮೇ 3,ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಡಿಯಲ್ಲಿ ಯುವ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದ ರೀತಿಯಲ್ಲಿ ಹಾಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಸೀಮಿತ ಓವರ್ ಗಳ ಉಪನಾಯಕ ರೋಹಿತ್ ಶರ್ಮ, ತಂಡಕ್ಕೆ ಬರುವ ಯುವ ಆಟಗಾರರ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ನಿರೀಕ್ಷೆ ಇದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ರೋಹಿತ್ ಶರ್ಮ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಗಂಭೀರ್, ಧೋನಿ ಅವರು ತಂಡದಲ್ಲಿದ್ದರೂ ಮತ್ತು ಹೊರಗಿದ್ದರೂ ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಹೊಂದಿದ್ದರು ಮತ್ತು ಧೋನಿಯ ಬೆಂಬಲವು ಅಂತಿಮವಾಗಿ ಅವರು ವಿಶ್ವದ ಅತ್ಯುತ್ತಮ ಬಿಳಿ ಚೆಂಡಿನ ಕ್ರಿಕೆಟಿಗರಲ್ಲಿ ಒಬ್ಬರಾಗಲು ಕಾರಣವಾಯಿತು, ಎಂದು ಹೇಳಿದ್ದಾರೆ.''ಪ್ರಸ್ತುತ ಪೀಳಿಗೆಯ ಯುವ ಕ್ರಿಕೆಟಿಗರಾದ ಶುಬ್ಮನ್ ಗಿಲ್ ಅಥವಾ ಸಂಜು ಸ್ಯಾಮ್ಸನ್ ಆಗಿರಲಿ, ಇದೇ ರೀತಿಯ ಬೆಂಬಲವನ್ನು ಪಡೆಯಬೇಕು, "ಎಂದು ಗಂಭೀರ್ ನುಡಿದಿದ್ದಾರೆ.ಪ್ರಸ್ತುತ ರೋಹಿತ್ ಹಿರಿಯ ಆಟಗಾರನಾಗಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ಆತ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಒಬ್ಬ ಆಟಗಾರ ಹೇಗೆ ವಿಶ್ವದ ದರ್ಜೆಯ ಆಟಗಾರನಾಗಿ ಬೆಳೆಯಬಹುದೆಂಬ ಉದಾಹರಣೆಗೆ ರೋಹಿತ್ ತಾಜಾ ನಿದರ್ಶನ ಎಂದು ಇದೇ ವೇಳೆ ಗಂಭೀರ್ ಹೇಳಿದ್ದಾರೆ