ಲೋಕದರ್ಶನವರದಿ
ಹಾವೇರಿ : ಮಕ್ಕಳನ್ನು ಕೇವಲ ಪಠ್ಯ ಚಟುವಟಿಕೆಗೆ ಮಾತ್ರ ನಿಮೀತವಾಗಿಸದೇ ಪಠ್ಯೇತರ ಚಟುವಟಿಗಳಲ್ಲೂ ಭಾಗವಹಿಸಿ ಅವರಲ್ಲಿನ ಬಹುಮುಖ ಪ್ರತಿಭೆಯನ್ನು ಹೊರಹಾಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್.ಎಚ್ ಮಜೀದ್ ತಿಳಿಸಿದರು.
ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾವೇರಿ, ಎಸ್.ಜೆ.ಎಂ. ಅಂಗವಿಕಲರ ವಸತಿಯುತ ಶಾಲೆ ಹಾವೇರಿ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ನಗರದ ಎಸ್.ಜೆ.ಎಂ. ಅಂಗವಿಕಲರ ವಸತಿಯುತ ಶಾಲೆ,ಮಕ್ಕಳಿಗೆ ವಿವಿಧ ಸ್ಪಧರ್ೆ ಹಾಗೂ ಮಕ್ಕಳ ಸ್ನೇಹಿ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವತೋಮುಖ ವಿಕಾಸ ಹಾಗೂ ಅವರಲ್ಲಿನ ಕ್ರಿಯಾಶೀಲತೆಯನ್ನು ಹೊರಹಾಕಲು ಸಕಾರಾತ್ಮಕ ಸ್ಪಧರ್ೆಗಳು ಅತಿ ಅವಶ್ಯಕ.ಈಗಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಧರ್ಿಗಳು ಕೆವಲ ವಿದ್ಯಾಭ್ಯಾಸವನ್ನಷ್ಟೆ ಅಲ್ಲದೇ ಸ್ಪಧರ್ಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ವಿಶೇಷ ಚೇತನ ಮಕ್ಕಳಿಗಾಗಿ ಸಕರ್ಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.ಇಂತಹ ವಿಶೇಷ ಚೇತನ ಮಕ್ಕಳಿಗೆ ಅನುಕಂಪ ತೋರುವುದಕ್ಕಿಂತ ಅವಕಾಶ ಕಲ್ಪಿಸಿಕೊಡುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಭಾಗವಹಿಸಿ ಬಸವ ಶಾಂತಲಿಂಗ ಮಹಾಸ್ವಾಮಿ ಮಾತನಾಡಿ ನಾವೆಲ್ಲರೂ ಮಕ್ಕಳ ಭವಿಷ್ಯವನ್ನು ಪಂಚಾಗದಲ್ಲಿ ಅಲ್ಲ. ಅವರ ನೇತ್ರಗಳಲ್ಲಿ ಕಾಣಬೇಕು ಎಂಬ ಮಾತಿನಂತೆ ಮಕ್ಕಳನ್ನು ಅವರ ಇಷ್ಟದಂತೆ ಬೆಳೆಯಲು ಅವಕಾಶ ಮಾಡಿಕೊಡಬೇಕು. ಪ್ರತಿಯೊಂದು ಮಗುವು ತನ್ನ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕು. ಸರಿ-ತಪ್ಪುಗಳನ್ನರಿಯದ ಮಕ್ಕಳು ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಬಗ್ಗೆ ಬರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೆ ಮಕ್ಕಳ ಸಹಾಯವಾಣಿಯು ತಕ್ಷಣದಲ್ಲಿ ಸ್ಪಂದಿಸಿ ಮಕ್ಕಳ ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಹಾಗೂ ಮಕ್ಕಳೇ ಅಂತಹ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವಂತೆ ಮಕ್ಕಳಲ್ಲೂ ಧೈರ್ಯದ ಮನೋಭಾವನೆಯನ್ನು ಮೂಡಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಶಿವರಾಜ ವಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಮಂಗಳಾ ಅಳಗುಂಡಗಿ,ಮಹಾಂತೇಶ ಬಸವನಾಯ್ಕರ, ಮುಖ್ಯೋಪಾಧ್ಯಾಯರಾದ ಎಫ್.ಎನ್.ಕರೇಗೌಡ್ರ, ಮಾರುತಿ, ಜ್ಯೋತಿ ಆನಿಶೆಟ್ಟರ್.ಶಿವಾನಂದ ಅನೇಕರಿದ್ದರು.