ಸಂಖ್ಯಾಶಾಸ್ತ್ರದ ಜ್ಞಾನ ಪ್ರತಿಯೊಬ್ಬರಿಗೂ ಅತ್ಯಗತ್ಯ: ಪ್ರೊ. ಹರ್ಷಿತ ವೈ. ಆರ್
Knowledge of Numerology is essential for everyone: Prof. Harshit Y. R
ಗದಗ 07: ಸಂಖ್ಯಾಶಾಸ್ತ್ರವು ಸಾಮಾಜಿಕ ವಿಜ್ಞಾನಗಳ ವ್ಯಾಪ್ತಿಯಲ್ಲಿ ಬರುವ ಅರ್ಥಶಾಸ್ತ್ರ, ಸಮಾಜಶಾಸ್ತ್ರ,ರಾಜ್ಯಶಾಸ್ತ್ರ,ಭೂಗೋಳಶಾಸ್ತ್ರ,ಮಾನವಶಾಸ್ತ್ರ,ಶಿಕ್ಷಣಶಾಸ್ತ್ರ ಹಾಗೂ ಇತರ ವಿಷಯಗಳ ಅಧ್ಯಯನವನ್ನು ಸರಳಗೊಳಿಸುತ್ತದೆ.
ಇವತ್ತಿನ ಚಲನಾತ್ಮಕ ಯುಗದಲ್ಲಿ ಸಂಖ್ಯಾಶಾಸ್ತ್ರದ ಜ್ಞಾನ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದು ಶ್ರೀ.ಜ.ಫ.ಸ.ಪ್ರ.ದ ಕಾಲೇಜು ಶಿರಹಟ್ಟಿಯ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ. ಹರ್ಷಿತ ವೈ. ಆರ್ ಹೇಳಿದರು. ಮುಂದುವರೆದು ಅವರು ದಿನಾಂಕ 07 ನವಂಬರ 2025 ರಂದು ಗದಗದ ಪ್ರತಿಷ್ಠೀತ ಕೆ ಎಲ್ ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ “ಸಮಾಜ ವಿಜ್ಞಾನಗಳಲ್ಲಿ ಸಂಖಾಶಾಸ್ತ್ರದ ಬಳಕೆ ್ಘ ಪ್ರಯೋಜನ ” ವಿಷಯದ ಕುರಿತು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿಕೊಂಡು ಇಂತಹ ಕಾರ್ಯಾಗಾರ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಮೂರಶಿಳ್ಳಿಯವರು ಸಮಾಜ ವಿಜ್ಞಾನಗಳಲ್ಲಿ ಸಂಖಾಶಾಸ್ತ್ರದ ಬಳಕೆ ಸಂಬಂಧಿಸಿದಂತೆ ಪ್ರಾಯೋಗಿಕ ಸಮಸ್ಯೆಗಳನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರರಾದ ಡಾ. ಎ.ಕೆ.ಮಠ ರವರು ಮಾತನಾಡುತ್ತಾ ಸಮಾಜ ವಿಜ್ಞಾನ ವಿಷಯಗಳ ಸಂಶೋಧನಾ ಕ್ಷೇತ್ರದಲ್ಲಿ ಸಂಖ್ಯಾಶಾಸ್ತ್ರದ ಬಳಕೆಯು ಅಧ್ಯಯನವನ್ನು ಕರಾರುವಕ್ಕಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ,ಆದ್ದರಿಂದ ಇಂತಹ ಕಾರ್ಯಾಗಾರಗಳ ಸದುಪಯೋಗವನ್ನು ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕು ಎಂದು ಹೇಳಿದರು. ರಾಜು ಯಲಬುರ್ಗಿ ಸ್ವಾಗತಿಸಿದರು, ಐ ಬಿ ಪಾಟೀಲ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 