ಜ್ಞಾನಕ್ಕೆ ಯಾವುದೇ ಜಾತಿ, ಧರ್ಮ ಹಾಗೂ ಗಡಿಗಳ ಹಂಗಿಲ್ಲ : ಶ್ರೀರಾಮ್ ಭಟ್
Knowledge knows no caste, religion or borders: Shriram Bhat
ಲೋಕದರ್ಶನ ವರದಿ
ಧಾರವಾಡ 29 : ಜ್ಞಾನ ಒಂದು ಶಕ್ತಿ. ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನಕ್ಕೆ ಯಾವುದೇ ಜಾತಿ, ಧರ್ಮ ಹಾಗೂ ಗಡಿಗಳ ಹಂಗಿಲ್ಲ ಎಂದು ಧಾರವಾಡದ ವಿದ್ವಾಂಸರಾದ ಶ್ರೀರಾಮ್ ಭಟ್ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ‘ಪ್ರೊ.ಎಸ್.ಎಲ್. ಸಂಗಮ ದತ್ತಿ’ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮಾಲೆ 10 ರಲ್ಲಿ ‘ಭಾರತೀಯ ಜ್ಞಾನ ಪರಂಪರೆ ಸಾಗಿ ಬಂದದಾರಿ’ ಕುರಿತು ಮಾತನಾಡುತ್ತಿದ್ದರು.
ಭಾರತೀಯ ಜ್ಞಾನ ಪರಂಪರೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ವೇದಗಳು, ಉಪನಿಷತ್, ಖಗೋಳಶಾಸ್ತ್ರ, ಇತಿಹಾಸ, ರಾಮಾಯಣ, ಮಹಾಭಾರತ, ಯೋಗ, ಗಣಿತಗಳೆಲ್ಲವೂ ಸಮಗ್ರವಾದ ಜ್ಞಾನದ ಭಂಡಾರಗಳಾಗಿವೆ. ಉಪನಿಷತ್‌ನ್ನು ಜ್ಞಾನದ ಶಿಖರವೆಂದೇ ಕರೆಯಲಾಗಿದೆ. ಜ್ಞಾನ ಪವಿತ್ರವಾದದ್ದು. ಅದನ್ನು ಯಾರೂ ಮುಚ್ಚಿಡಬಾರದು. ಹಾಗೆ ಮಾಡಿದರೆ ಅದೊಂದು ಪಾಪ ಎನ್ನಲಾಗುತ್ತಿದೆ. ನಮ್ಮ ವಿಚಾರಗಳು ಜ್ಞಾನ ಪರಂಪರೆಗೆದಾರಿ ಮಾಡಿಕೊಡುತ್ತವೆ. ಜ್ಞಾನವು ಸಾಗರದಷ್ಟು ವಿಶಾಲ ದಾರಿ ಮಾಡಿಕೊಡುತ್ತದೆ. ಜ್ಞಾನವು ಸಾಗರದಷ್ಟು ವಿಶಾಲವಾದುದು. ಜ್ಞಾನ ಸಂಪಾದನೆಗೆ ಬಹಳ ಶ್ರದ್ಧೆ ಬೇಕು. ಜ್ಞಾನಕ್ಕೆ ಮೈಲಿಗೆ ಎಂಬುದಿಲ್ಲ. ಯೋಗ ವಿದ್ಯೆಯೂಜ್ಞಾನದ ಒಂದು ಮೂಲ. ಅದು ಮನಸ್ಸಿಗೆ ಏಕಾಗ್ರತೆ ಉಂಟು ಮಾಡುತ್ತದೆ.
ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದಿರಬಹುದು. ಆದರೆ ಭಾರತದ ಜ್ಞಾನ ಪರಂಪರೆಗೆ ಎಂದೂ ಅನ್ಯಾಯ ಮಾಡಲಿಲ್ಲಾ. ಬದಲಾಗಿ ನಮ್ಮ ಜ್ಞಾನ ಪರಂಪರೆಯನ್ನು ಮೆಚ್ಚಿ ಅಧ್ಯಯನ ಮಾಡಿದರು. ಮೈಸೂರ ಮಹಾರಾಜರು ಮೈಸೂರಲ್ಲಿ ಸ್ಥಾಪಿಸಿದ್ದ ಮೈಸೂರ ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್‌ಗೆ ಗ್ರಂಥಪಾಲಕರನ್ನಾಗಿ ಆರ್. ಶಾಮಾಶಾಸ್ತ್ರೀಯನ್ನು ನೇಮಕ ಮಾಡಿದ್ದರು. ಶಾಮಾ ಶಾಸ್ತ್ರಿಗಳು ಸಹಸ್ರಾರು ಹಸ್ತ ಪ್ರತಿಗಳಲ್ಲಿ ಕೌಟಿಲ್ಯನಅರ್ಥಶಾಸ್ತ್ರ ಹಸ್ತಪ್ರತಿ ಪತ್ತೆ ಹಚ್ಚಿಅದನ್ನು ಸಂಸ್ಕೃತ ಹಾಗೂ ಆಂಗ್ಲ ಭಾಷೆಗೆ ಅನುವಾದಿಸಿದರು. ಇಡೀ ವಿಶ್ವವೇಕೌಟಿಲ್ಯನ ಅರ್ಥಶಾಸ್ತ್ರ ಅಧ್ಯಯನ ಮಾಡುವಂತೆ ಸಾಧ್ಯವಾಯಿತುಎಂದು ಹೇಳಿದರು.
ಗ್ರಂಥಾಲಯಾಧಿಕಾರಿಗಳಾಗಿ ನಿವೃತ್ತರಾದ ಡಾ.ವಿನಾಯಕ ಬಂಕಾಪೂರ ಅವರನ್ನು ದತ್ತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಪ್ರೊ.ಎಸ್.ಎಲ್. ಸಂಗಮ ದತ್ತಿ ಆಶಯ ಕುರಿತು ಮಾತನಾಡಿದರು. ಕ.ವಿ.ವ.ಸ ಸಂಘದಗೌರವ ಉಪಾಧ್ಯಕ್ಷರಾದ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ ಜ್ಞಾನ ಪರಂಪರೆಯ ಮಹತ್ವ ಮತು ಅವಶ್ಯಕತೆ ಕುರಿತು ಮಾತನಾಡಿದರು.
ವೀರಣ್ಣ ಒಡ್ಡೀನಸ ಸ್ವಾಗತಿಸಿದರು, ಡಾ.ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಜಿ.ಸಿ.ತಲ್ಲೂರ, ಶಶಿಕಲಾ ಸಂಗಮ, ಡಾ. ಎಸ್.ಬಿ. ಪಾಟೀಲ, ದತ್ತು ಪಾಟೀಲ, ಸತ್ಯಭೋದ ಸವಣೂರ, ಜಯದೇವ ಹಿರೇಮಠ, ಎಸ್.ಸಿ.ಪಾಟೀಲ, ಭರತ ಅಲಸಂದಿ, ಪ್ರೊ.ಎಸ್.ಕೆ.ಕುಂದರಗಿ, ಸೇರಿದಂತೆ ಸಂಗಮ ಅವರ ಹಿಂದಿನ ವಿದ್ಯಾರ್ಥಿಗಳು, ಪರಿವಾರದವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 