ಜ್ಞಾನವು ಒಂದು ಅದ್ಭುತ ಶಕ್ತಿ: ರವಿ ಕುಲಕರ್ಣಿ

ಧಾರವಾಡ 28: ವಿದ್ಯಾಥರ್ಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹುಬ್ಬಳ್ಳಿ ಮತ್ತು ಗುಲಬಗರ್ಾ ವಲಯದ ರೆಡ್ ಎಫ್.ಎಮ್ ರೇಡಿಯೋ ಕೇಂದ್ರದ ನಿದರ್ೇಶಕ ರವಿ ಕುಲಕರ್ಣಿ ಹೇಳಿದರು. 

ಅವರು ನಗರದ ಕನರ್ಾಟಕ ವಿಜ್ಞಾನ ಮಹಾವಿದ್ಯಾಲಯದ ಬಿಸಿಎ ಅಡಿಟೋರಿಯಂನಲ್ಲಿ ಆಯೋಜಿಸಿದ 'ವಿಜ್ಞಾನ ಸಂಘ'ದ 2019-20ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಜ್ಞಾನವು ಒಂದು ಅದ್ಭುತ ಶಕ್ತಿಯಾಗಿದ್ದು, ಜ್ಞಾನವನ್ನು ಹೊಂದಿದ ವ್ಯಕ್ತಿಗೆ ಜಗತ್ತಿನ ಎಲ್ಲಿಯಾದರೂ ಗೌರವ, ಘನತೆ ದೂರಕುತ್ತದೆ ಎಂದರು. ಇಂದಿನ ಯುವಜನರಲ್ಲಿ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯಾಥರ್ಿಗಳು ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ತಕ್ಕಂತೆ ಅನೇಕ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆಯಬೇಕಾದರೆ ಅವರಲ್ಲಿ ವಿನಯ, ವರ್ತನೆ ಮತ್ತು ಉತ್ತಮವಾದ ಪ್ರವೃತ್ತಿಯ ಜೊತೆಗೆ ಸಂವಹನದ ಕೌಶಲ್ಯಗಳು ಬಹಳ ಮುಖ್ಯ ಎಂದರು. ಕಲಿಕೆ ನಿರಂತರವಾಗಿದ್ದು ಇಂದು ಕಠಿಣ ಪರಿಶ್ರಮ, ಧೃಡ ನಿಧರ್ಾರ ಗುರಿಯೊಂದಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಎಫ್.ಮೂಲಿಮನಿ ಮಾತನಾಡಿ ವಿದ್ಯಾಥರ್ಿಗಳಿಗೆ ವ್ಯಕ್ತಿತ್ವ ಬಹಳ ಮುಖ್ಯವಾಗಿದ್ದು, ಅದನ್ನು ಬೆಳಸಿಕೊಳ್ಳಬೇಕು ಎಂದ ಅವರು ಕನರ್ಾಟಕ ವಿಜ್ಞಾನ ಕಾಲೇಜಿನಿಂದ ಅನೇಕ ಸಾಧಕರು ಈ ದೇಶಕ್ಕೆ ರಾಜ್ಯ ಕೂಡುಗೆ ನೀಡಿದ್ದಾರೆ ಎಂದರು.

ಕಾಲೇಜಿನ ವಿಜ್ಞಾನ ಸಂಘದ ಅಧ್ಯಕ್ಷ ಡಾ. ಎಲ್.ಟಿ ನಾಯಕ ಮತ್ತು ಕಾಲೇಜಿನ ಪ್ರಾಧ್ಯಾಪಕ ಡಾ. ಸಿ.ಜಿ.ಪಾಟೀಲ್, ಡಾ. ಎಸ್.ಎಮ್.ತುವಾರ್, ಡಾ. ಲಲಿತಾ ನಾಯಕ, ಡಾ ರಾಮದಾಸ್, ಡಾ. ಜಿ.ಎನ್.ಕುಮ್ಮಾರ್, ಡಾ. ಜ್ಯೋತಿ ದೊಡಮನಿ, ಡಾ. ಜೆ.ಟಿ.ಗುಡಗೂರ್, ಡಾ. ಎ.ಎಸ್.ಬೆಲ್ಲದ ಹಾಗೂ ವಿದ್ಯಾಥರ್ಿ ಕಾರ್ಯದಶರ್ಿ ವಿಶಾಕಾ ಪವಾರ್ ಮತ್ತು ಮಹಮ್ಮದ ಖಲೀಲ್ ಸೇರಿದಂತೆ ವಿದ್ಯಾಥರ್ಿಗಳು ಹಾಜರಿದ್ದರು.