ಒಬ್ಬರನ್ನೊಬ್ಬರು ಅರಿತು ಸಹಬಾಳ್ವೆ ಮಾಡಿ: ಶಾಸಕ ವಿಠ್ಠಲ ಕಟಕಧೋಂಡ
Know each other and live together: MLA Vitthala Katakadhonda
ಆರು ನವಜೋಡಿಗಳಿಗೆ ಸಾಮೂಹಿಕ ವಿವಾಹ
ಚಡಚಣ 08: ಗುರುಪೂರ್ಣಿಮೆ ಪ್ರಯುಕ್ತ ಚಡಚಣ ತಾಲೂಕಿನ ತದ್ದೇವಾಡಿಯ ಶ್ರೀಗುರು ಚಂದ್ರಶೇಖರ ಸಂಸ್ಥಾನ ಮಠದಲ್ಲಿ ಸರಳ ಸಾಮೂಹಿಕ ವಿವಾಹ ಸೋಮವಾರ ನೆರವೇರಿತು. ಆರು ಜೋಡಿ ನವವಿವಾಹಿತರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಗುರು ಗುರುಪಾದೇಶ್ವರ ಶಿವಾಚಾರ್ಯರು ಹಾಗೂ ಗುರುಬಾಳೇಶ್ವರ ಶಿವಾಚಾರ್ಯರು, ತದ್ದೇವಾಡಿಯ ರೇಣುಕ ದೇವರ ಸಾನ್ನಿಧ್ಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆರು ನವಜೋಡಿಗಳಿಗೆ ಮಾಂಗಲ್ಯಧಾರಣೆ ಮತ್ತು ಅಕ್ಷತೆ ಕಾರ್ಯಕ್ರಮ ನಡೆಯಿತು.
ತದ್ದೇವಾಡಿಯ ರೇಣುಕ ದೇವರು ಮಾತನಾಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆರು ಜೋಡಿ ನವವಿವಾಹಿತರು ಧರ್ಮೋಚಿತವಾಗಿ ವಿವಾಹ ಬದ್ಧರಾಗಿದ್ದು, ದಾಂಪತ್ಯ ಜೀವನಕ್ಕೆ ಸುವರ್ಣಪ್ರಾರಂಭ ಮಾಡಲಿದ್ದಾರೆ,ಇದರಲ್ಲಿ ಭಾಗವಹಿಸಿದ್ದಕ್ಕೆ ಈ ರೀತಿಯ ಸಾಮೂಹಿಕ ವಿವಾಹಗಳು ಪಡಿತರ ದಾರಿದ್ರ್ಯತನ, ದುಡುಕಿನ ವೆಚ್ಚವನ್ನು ತಡೆಯುವಂತೆ ಮಾಡುತ್ತವೆ ಹಾಗೂ ಕುಟುಂಬಗಳ ನಡುವೆ ಒಕ್ಕಟ್ಟನ್ನು ಉತ್ತೇಜಿಸುತ್ತವೆ ಎಂದರು. ಈ ಕಾರ್ಯಕ್ರಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಉಪಸ್ಥಿತಿಯಲ್ಲಿ ನಡೆಯಬೇಕಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಬರಲಿಕ್ಕಾಗಲಿಲ್ಲ ಎಂದರು.
ಸಮಾರಂಭದಲ್ಲಿ ಹಳೆ ಪರಂಪರೆ, ಸಂಸ್ಕೃತಿ ಮತ್ತು ಸಮಾಜಸೇವೆಯ ಸಮ್ಮಿಳನ ಕಂಡುಬಂದಿದೆ, ವಿವಾಹಿತರಿಗೆ ಮಠಾಧೀಶರು, ಕುಟುಂಬಸ್ಥರು, ಬಂಧುಬಳಗ, ಮತ್ತು ಗ್ರಾಮಸ್ಥರು ಶುಭಾಶಯಗಳ ಸುರಿಮಳೆ ಸುರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಸ್ತ್ರೀಯ ಮಂಗಲ ವಾದ್ಯಗಳು, ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಾಹ ಸಂಪನ್ನವಾಯಿತು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ನವ ಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಪುಣ್ಯವಂತರಿಗೆ ಈ ಭಾಗ್ಯ ಲಭಿಸುತ್ತದೆ ದೇವರ ಸನ್ನಿಧಿಯಲ್ಲಿ ಈ ಭಾಗ್ಯ ನಿಮಗೆ ದೊರಕಿದ್ದು ಪೂರ್ವಜನ್ಮದ ಪುಣ್ಯದ ಫಲದಿಂದಾಗಿ ಎಂದರು. ಸತಿ-ಪತಿಗಳಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ಸಹಬಾಳ್ವೆ ನೆಮ್ಮದಿಯಿಂದ ಜೀವನ ಮಾಡುವದರ ಮುಖಾಂತರ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಕಾರ್ಯಕ್ರಮವನ್ನು ತದ್ದೇವಾಡಿಯ ಶ್ರೀಗುರು ಚಂದ್ರಶೇಖರ ಸಂಸ್ಥಾನ ಮಠದಲ್ಲಿ ಪ್ರತಿವರ್ಷ ತಪ್ಪದೆ ಆಯೋಜಿಸುತ್ತ ಬಂದಿರುವದು ಸಮಾಜದಲ್ಲಿ ಸಮಾನತೆ ಮತ್ತು ಸಂಸ್ಕೃತಿಯ ಉಳಿವಿಗೆ ಶ್ರೇಷ್ಠ ಉದಾಹರಣೆ ನೀಡಿದೆ ಎಂದರು.
ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಆರ್. ಪಾಟೀಲ ಮಾತನಾಡಿ ಮದುವೆ ಆಡಂಬರವಾಗಬಾರದು ಸರಳತೆ ಇರಬೇಕು. ಜೀವನ ಎಂದರೆ ಸುಖ ದುಖಃಗಳ ಸಂಗಮ, ಸುಖ ಬಂದಾಗ ಹಿಗ್ಗದೆ ಕಷ್ಟ ಬಂದಾಗ (ಕುಗ್ಗದೆ)ಎದೆಗುಂದದೆ ಜೀವನದಲ್ಲಿ ಸುಖ-ದುಖಃವನ್ನು ಸಮಾನವಾಗಿ ಸ್ವೀಕರಿಸಿ ಬಾಳ್ವೆ ಮಾಡಬೇಕು ಎಂದರು.
ಗುಡ್ಡಾಪುರದ ಗುರುಬಾಳೇಶ್ವರ ಶಿವಾಚಾರ್ಯರು, ಮಹಾಂತೇಶ ಹಿರೇಮಠ, ಮಹಾದೇವ ಸಾಹುಕಾರ ಭೈರಗೊಂಡ, ಸಾಹೇಬಗೌಡ ಪಾಟೀಲ, ಗಿರಿಮಲ್ಲಯ್ಯ ಹಿರೇಮಠ, ಡಿ.ಎಲ್. ಚವ್ಹಾಣ, ಇಲಿಯಾಸ ಬೋರಾಮಣಿ, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 