ಬೆಂಗಳೂರು, ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ಗಾಯಕ್ ವಾಡ್ (77) ಅವರಿಗೆ ನಡೆಸಿದ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ
ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದ, ರಜನಿಕಾಂತ್ ಅವರು ಗುರುವಾರ ಆಸ್ಪತ್ರೆಗೆ ನೀಡಿ ಶೀಘ್ರ ಗುಣಮುಖರಾಗುವಂತೆ ಸಹೋದರನಿಗೆ ಹಾರೈಸಿದರು
ಬೆಂಗಳೂರಿನಲ್ಲಿಯೇ ಬೆಳೆದ ರಜನಿಕಾಂತ್ ಯಾವುದೇ ಮಾಹಿತಿ ನೀಡದೆ ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿರುತ್ತಾರೆ ಗುರುವಾರವೂ ಸಹ ಯಾರಿಗೂ ತಿಳಿಸದೆ ಸಹೋದರನ ಭೇಟಿಗೆ ಬಂದಿದ್ದರಾದರೂ, ಯಾವುದೋ ಮೂಲದಿಂದ ಭೇಟಿಯ ಬಗ್ಗೆ ತಿಳಿದುಕೊಂಡ ಅನೇಕ ಅಭಿಮಾನಿಗಳು ಶೇಷಾದ್ರಿಪುರಂ ನಲ್ಲಿರುವ ಆಸ್ಪತ್ರೆಗೆ ಆಗಮಿಸಿ ಸೂಪರ್ ಸ್ಟಾರ್ ನನ್ನು ಭೇಟಿಯಾದರು
ಶಸ್ತ್ರಚಿಕಿತ್ಸೆಗೆ ಒಳಗಾದ ಗಾಯಕ್ ವಾಡ್ (77) ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಳೆಚಿಕಿತ್ಸಕ ಕಿರಣ್ ಚೌಕಾ ಮಾಹಿತಿ ನೀಡಿದ್ದಾರೆ. 'ಮಂಡಿ ಚಿಪ್ಪಿನ ಬದಲಿ ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ನಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ನಟನ ಸಹೋದರನಿಗೆ ಮೊಣಕಾಲಿನಲ್ಲಿ ತೀವ್ರವಾದ ಅಸ್ಥಿ ಸಂಧಿವಾತವಿತ್ತು.