ಜು. 6 ರಂದು ಕಿಟ್ ಹಾಗೂ ಶಿಷ್ಯವೇತನ ವಿತರಣಾ ಸಮಾರಂಭ : ಫಕ್ಕೀರಪ್ಪ ಹೆಬಸೂರ

ಜು. 6 ರಂದು ಕಿಟ್ ಹಾಗೂ ಶಿಷ್ಯವೇತನ ವಿತರಣಾ ಸಮಾರಂಭ : ಫಕ್ಕೀರಪ್ಪ ಹೆಬಸೂರ  Kit and scholarship distribution ceremony on July 6: Fakirappa Hebasura

ಗದಗ 04 : ಕಾಳಿದಾಸ, ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಬೆಂಗಳೂರ, ಕರ್ನಾಟಕ ಪ್ರದೇಶ ಕುರುಬರ ಸಂಘ ಗದಗ ಜಿಲ್ಲಾ ಶಾಖೆ,  ರಾಕೇಶ ಸಿದ್ದರಾಮಯ್ಯ ಟ್ರಸ್ಟ ಗದಗ,  ಕಾಳಿದಾಸ ಶಿಕ್ಷಣ ಸಮಿತಿ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಅಲ್ಪಾವಧಿ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಕಿಟ್ ವಿತರಣೆ ಹಾಗೂ   ರಾಕೇಶ ಸಿದ್ದರಾಮಯ್ಯ ಶಿಷ್ಯವೇತನ ವಿತರಣಾ ಸಮಾರಂಭವು ಇದೇ ಜು. 6 ರವಿವಾದಂದು ಮದ್ಯಾಹ್ನ 1 ಗಂಟೆಗೆ ನಗರದ ಶ್ರೀ ಕನಕ ಭವನದಲ್ಲಿ ಜರುಗಲಿದೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರ​‍್ಪ ಹೆಬಸೂರ ಅವರು ಹೇಳಿದರು. 

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ  ಸಮಾರಂಭದಲ್ಲಿ 2023-24 ್ಘ 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ 90ಅ ಕ್ಕಿಂತ ಹೆಚ್ಚು ಅಂಕ ಪಡೆದ ಒಟ್ಟು 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ,  2023-24 ್ಘ 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ 75ಅ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆ, 2023-24 ್ಘ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ 75ಅ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆ ಸೇರಿದಂತೆ ಒಟ್ಟು 300 ಕ್ಕೂ ಹೆಚ್ಚು ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಹಾಗೂ ಸ್ವತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಅಲ್ಪಾವಧಿ ಕೌಶಲ್ಯಾಧಾರಿತ ಕೋರ್ಸುಗಳ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಆಯ್ದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ/ ಬ್ಯೂಟೀಷಿಯನ್ ಕಿಟ್‌/ ಕೌಶಲ್ಯಾಧಾರಿತ ಕಿಟ್ ವಿತರಣೆ ಮಾಡಲಾಗುವುದು ಎಂದು ಹೇಳಿದರು. 

ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯರವರು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಹಿರಿಯ ಮಾಜಿ ಶಾಸಕರಾದ  ಡಿ.ಆರ್ ಪಾಟೀಲ, ರೋಣ  ಶಾಸಕ ಜಿ.ಎಸ್ ಪಾಟೀಲ,   ಶಿರಹಟ್ಟಿ  ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ  ಎಸ್‌.ವ್ಹಿ ಸಂಕನೂರ, ಮಾಜಿ ಸಚಿವರಾದ  ಬಿ.ಆರ್ ಯಾವಗಲ್, ಮಾಜಿ ಶಾಸಕರುಗಳಾದ ಜಿ.ಎಸ್ ಗಡ್ಡದೇವರಮಠ,  ರಾಮಕೃಷ್ಣ ದೊಡ್ಡಮನಿ, ಯುವ ಧುರೀಣರಾದ  ಕೃಷ್ಣಗೌಡ  ಪಾಟೀಲ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರ, ವ್ಯವಸ್ಥಾಪಕ ನಿರ್ದೇಶಕರಾದ  ನಟರಾಜ ಜಿ. ಆರ್‌., ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ  ಎಂ. ಎಂ. ತುಂಬರಮಟ್ಟಿ, ರಾಜ್ಯ ಸಂಘದ ನಿರ್ದೇಶಕರುಗಳಾದ  ಕಳಕನಗೌಡ ಗೌಡರ, ಶ್ರೀಮತಿ ಚನ್ನಮ್ಮ ಹುಳಕಣ್ಣವರ, ಜಿಲ್ಲಾ, ತಾಲೂಕು ಸಂಘದ ಪದಾಧಿಕಾರಿಗಳು, ಸ್ಥಳೀಯ ಮುಖಂಡರುಗಳು  ಹಾಗೂ ಸಮಾಜದ ಗಣ್ಯ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ  ಫಕೀರ​‍್ಪ ಹೆಬಸೂರ ಅವರು ಹೇಳಿದರು. 

ಈ ಸುದ್ದಿಗೋಷ್ಠಿಯಲ್ಲಿ  ಬಿ.ಬಿ.ಭಾವಿಕಟ್ಟಿ, ವೈ.ಡಿ.ಗುರಿಕಾರ,  ಆರ್‌.ಎಂ. ನಿಂಬನಾಯ್ಕರ, ನಾಗಪ್ಪ ಗುಗ್ಗರಿ, ರಾಮಕೃಷ್ಣ ರೊಳ್ಳಿ, ನೀಲಕಂಠ ಮರಡಿ, ಶಿವಣ್ಣ ಸಿಂಗಟಾಲಕೇರಿ, ವೈ.ಡಿ.ಜಡದೆಲಿ, ಕೆ.ಬಿ.ಕಂಬಳಿ, ಎಸ್‌.ಎಸ್‌.ಕರಡಿ,  ಬಿ.ಎಚ್‌.ಹ್ಯಾಟಿ, ಚನ್ನಮ್ಮ  ಹುಳಕಣ್ಣವರ, ರೇಖಾ ಜಡಿ, ರವಿ ಹುಡೇದ, ಕುಮಾರ ಮಾರನಬಸರಿ, ರಾಮು ಜಡಿ ಸೇರಿದಂತೆ ಮುಂತಾದವರು  ಉಪಸ್ಥಿರಿದ್ದರು.