ಬೆಂಗಳೂರು, ಜ 29 “ಗಾಂಧಿಯನ್ನು ಕೊಂದವರೆ.. ಗೌರಿಯನ್ನು ಕೊಂದವರೆ.. ಕೊಲ್ಲ ಬಲ್ಲಿರಿ ನನ್ನನ್ನೂ. ಕೊಲ್ಲಬಲ್ಲಿರಿ ನನ್ನನ್ನೂ..ನನ್ನಂತ ಇನ್ನೂ ಹಲವರನ್ನೂ. ಆದರೆ, ಕೊಲ್ಲಲಾರಿರಿ.. ನಮ್ಮ ಮನಃಸಾಕ್ಷಿಯನ್ನು..ನಮ್ಮ ಸಂವಿಧಾನವನ್ನು..ಎಲ್ಲರನ್ನೊಳಗೊಂಡ ಭಾರತೀಯತೆಯನ್ನು..” ಎಂದು ಟ್ವಿಟ್ ಮಾಡುವ ಮೂಲಕ ನಟ ಪ್ರಕಾಶ್ ರಾಜ್ ಬೆದರಿಕೆ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.ಇದೇ ತಿಂಗಳು 24ರಂದು ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರ ಮಠಕ್ಕೆ ದಾವಣಗೆರೆಯ ಅಪರಿಚಿತ ವ್ಯಕ್ತಿಯೋರ್ವನಿಂದ ಬೆದರಿಕೆ ಪತ್ರವೊಂದು ರವಾನೆಯಾಗಿತ್ತು. ಪತ್ರದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ನಮೂದಾದ ಹಿನ್ನೆಲೆಯಲ್ಲಿ ಇಂದು ಅವರು ಟ್ವಿಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ಆ ಪತ್ರದಲ್ಲಿ ನಿಜಗುಣಾನಂದ ಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ನಟ ಪ್ರಕಾಶ್ ರಾಜ್ , ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್, ನಿಡುಮಾಮಿಡಿ ಮಠದ ವೀರಭದ್ರ ಸ್ವಾಮೀಜಿ, ನಟ ಚೇತನ್ ಕುಮಾರ್, ಬಿ.ಟಿ ಲಲಿತಾ ನಾಯಕ್, ಮಹೇಶ್ ಚಂದ್ರಗುರು, ಪ್ರೊ. ಭಗವಾನ್, ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ಪತ್ರಕರ್ತ ಅಗ್ನಿ ಶ್ರೀಧರ್, ಬೃಂದಾ ಕಾರಟ್ ಸೇರಿ ಒಟ್ಟು 15 ಜನರನ್ನು ಈ ತಿಂಗಳ ಅಂತ್ಯದೊಳಗೆ ಸಂಹಾರ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.