ವ್ಯಕ್ತಿ ಅಪಹರಣ ? 5ಕೋಟಿ ಹಣಕ್ಕೆ ಬೇಡಿಕೆ

ವ್ಯಕ್ತಿ ಅಪಹರಣ ? 5ಕೋಟಿ ಹಣಕ್ಕೆ ಬೇಡಿಕೆ Kidnapping? Demand for Rs 5 crore

ವ್ಯಕ್ತಿ ಅಪಹರಣ ? 5ಕೋಟಿ ಹಣಕ್ಕೆ ಬೇಡಿಕೆ

ಲೋಕದರ್ಶನ ವರದಿ 

ಹೂವಿನಹಡಗಲಿ 11  : ಬೆಳಿಗ್ಗೆ ವಾಕಿಂಗ್ ಹೋಗಿದ್ದ ವ್ಯಕ್ತಿಯನ್ನು ಅಪಹರಣ ಮಾಡಿ 5ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟ ಘಟನೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಪಹರಣವಾದ ವ್ಯಕ್ತಿ ಮಂಜುನಾಥ ಶೇಜವಾಡಕರ್  ತಂದೆ ನಾಗೇಶ್ ಶೇಜವಾಡಕರ್ 58ವರ್ಷ,        ಶುಕ್ರವಾರ ಪ್ರತಿದಿನ ಬೆಳಿಗ್ಗೆ ಎದ್ದು 5.30ಕ್ಕೆ ಮೈಲಾರ ರಸ್ತೆಯಲ್ಲಿನ ಸಾಧನ ಶಾಲೆಯವರೆಗೂ ವಾಕಿಂಗ್ ಹೋಗಿ 6.30ಕ್ಕೆ ಮರಳಿ ಮನೆಗೆ ಬರದಿದ್ದಾಗ ಮನೆಯವರು ಗಾಬರಿ ಗೊಂಡು  ಅಕ್ಕಪಕ್ಕದ ವರನ್ನು ವಿಚಾರಿಸಿದ್ದಾರೆ.ನಂತರ ಮಂಜುನಾಥ ಇವರ ಮೊಬೈಲ್ ನಿಂದ ಅಪಹರಣಕಾರರು ದಾವಣಗೆರೆಯಲ್ಲಿರುವ ವೈದ್ಯರಾದ ಮಂಜುನಾಥ ಇವರ ಹಿರಿಯ ಸಹೋದರಿ ಡಾ. ಮಂಜುಳಾ ಇವರಿಗೆ ವಾಟ್ಸ ಅಪ್ ಕಾಲ್ಮಾಡಿ ಮಂಜುನಾಥ ಇವರ ಕಡೆಯಿಂದ ಮಾತನಾಡಿಸಿದ್ದಾರೆ. ಈವೆಳೆ ಮಂಜುನಾಥ ನನ್ನನ್ನು ಯಾರೋ ಕಾರಲ್ಲಿ ಅಪಹರಣ ಮಾಡಿ ಕಟ್ಟಿಹಾಕಿದ್ದಾರೆ 5ಕೋಟಿ ಹಣ ಕೊಡಬೇಕೆಂದು ಎಂದು ಹೇಳಿದ್ದಾರೆ.ನಮ್ಮಗೆ ಯಾವುದೇ ದ್ವೇಷ ಇಲ್ಲ ಹಣ ಕೊಡಿ ಎಂದಾಗ ಸಹೋದರಿ ಡಾ.ಮಂಜುಳಾ  ಅಷ್ಟೊಂದು ಹಣ ನಮ್ಮಿಂದ ನೀಡಲು ಆಗುವುದಿಲ್ಲಾ ಒಂದು ಲಕ್ಷ ಕೊಡುವುದಾಗಿ ಹೇಳಿದಾಗ ಹಣ ನೀಡದಿದ್ದರೆ ಬಾಡಿ ಸಿಗಲ್ಲ ಎಂದು ಎದುರಿಸಿದ್ದಾರೆ. ಮೂಲತಃ ಬಂಗಾರ ಆಭರಣಾ ತಯಾರಿಕೆ ಮತ್ತು ಮಾರಾಟ ಮಾಡುತ್ತಿದ್ದ ಇವರು ಹಲವು ವರ್ಷಗಳಿಂದ ವ್ಯಾಪಾರವನ್ನು ನಿಲ್ಲಿಸಿದ್ದರು.ವಿಷಯ ತಿಳಿದ ಕೂಡಲೇ ಹಿರೇಹಡಗಲಿ ಪಿ.ಎಸ್‌.ಐ ಭರತ್ ಪ್ರಕಾಶ ಇವರು ಕಾರ್ಯನ್ಮುಖರಾಗಿ ಮೈಲಾರ ರಸ್ತೆಯಲ್ಲಿರುವ ಸಿ.ಸಿ ಕ್ಯಾಮರಗಳನ್ನು ಪರೀಶೀಲಿಸಿದ್ದು ಸಾಕ್ಷಿ ಸಿಗದಿದ್ದಾಗ ಸ್ಥಳಕ್ಕೆ ಹೂವಿನಹಡಗಲಿ ಸಿಪಿಐ ದೀಪಕ್ ಭೂಸರೆಡ್ಡಿ ಬೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.