ಖಾಸ್ಗತ ಅಜ್ಜನ ಜಾತ್ರೆ: ವಿಶೇಷ ಪ್ರಸಾದ ವ್ಯವಸ್ಥೆ
Khasgateshwar Jatra Mahotsava
ತಾಳಿಕೋಟಿ 08: ಪಟ್ಟಣದ ಐತಿಹಾಸಿಕ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಕೊನೆಯ ದಿನದ ಮಹಾ ರಥೋತ್ಸವ ಹಾಗೂ ಆನೆ ಅಂಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಮಾನಸಿಂಗ್ ಗೆಳೆಯರ ಬಳಗ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ವಿಶೇಷ ಬಜ್ಜಿ(ಬಜಿ) ಹಾಗೂ ಹುಳಿ ಚಟ್ನಿಯ ಪ್ರಸಾದದ ವ್ಯವಸ್ಥೆಯನ್ನು ಮಂಗಳವಾರ ಮಾಡಲಾಯಿತು.
ಪ್ರಸಾದ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖಂಡ ಮಾನಸಿಂಗ್ ಕೊಕಟನೂರ ಅವರು ಕಳೆದ 18 ವರ್ಷಗಳಿಂದ ನಿರಂತರವಾಗಿ ಅಜ್ಜನ ಜಾತ್ರೆಯಲ್ಲಿ ಪ್ರಸಾದ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಪ್ರತಿ ವರ್ಷವೂ ವಿಶಿಷ್ಟವಾದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತೇವೆ. ಈ ಬಾರಿ ಎಲ್ಲರೂ ಇಷ್ಟಪಡುವ ಬಜಿ ಹಾಗೂ ಹುಳಿ ಚಟ್ನಿಯನ್ನು ಸಿದ್ಧಪಡಿಸಲಾಗಿತ್ತು. ಸುಮಾರು 5,000 ಭಕ್ತಾದಿಗಳಿಗೆ ಸಾಕಾಗುವಷ್ಟು ಪ್ರಸಾದ ವ್ಯವಸ್ಥೆ ಇರುತ್ತದೆ. ಖಾಸ್ಗತ ಅಜ್ಜ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಆನೆ ಅಂಬಾರಿಯಲ್ಲಿ ಖಾಸ್ಗತ ಹಾಗೂ ವಿರಕ್ತ ಅಜ್ಜನವರ ಭವ್ಯ ಮೂರ್ತಿಗಳ ಮೆರವಣಿಗೆಗೆ ಸ್ವಾಗತ ಕೋರಿ ಮುಖಂಡ ಮಾನಸಿಂಗ್ ಕೊಕಟನೂರ ಅವರು ಸಂಘದ ವತಿಯಿಂದ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ತರುಣ ಸಂಘದ ಪ್ರಕಾಶ ಹಜೇರಿ, ಮಹಾಂತೇಶ ಮರಾಳ, ಅಶೋಕ ಬಳಗಾನೂರ, ಶಿವಶಂಕರ ಹಿರೇಮಠ, ಇಬ್ರಾಹಿಂ ಮನ್ಸೂರ್, ಹಣಮಗೌಡ ಢವಳಗಿ, ತಿಪ್ಪಣ್ಣ ಸಜ್ಜನ್, ಮಲ್ಲು ಭಟ್, ಬಸವರಾಜ ಹೊಟ್ಟಿ, ಅಶೋಕ ಚಿನಗುಡಿ, ಅನಿಲ್ ಕುಂಬಾರ, ಸುಭಾಸ ಮಹೀಂದ್ರಕರ, ಸಂತೋಷ್ ಗ್ಯಾರಿ, ಸುಭಾಷ ಸಜ್ಜನ್, ಅನಿಲ್ ಕಸ್ತೂರಿ ರಮೇಶ ಮಾಲಿ ಪಾಟೀಲ, ಶಿವು ಲಿಂಗದಳ್ಳಿ ಮತ್ತಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 