ಖಾಸ್ಗತೇಶ್ವರ ಜಾತ್ರಾ ಮಹೋತ್ಸವ: ಶ್ರಮದಾನ
Khasgateshwar Jatra Festival: Shramadaan
ತಾಳಿಕೋಟೆ 01: ಪಟ್ಟಣದ ಆರಾದ್ಯ ದೈವವೆನ್ನಿಸಿರುವ ಖಾಸ್ಗತೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಂಗಸ್ಥಳ ಜರುಗುವ ಭೀಮನಭಾವಿಯನ್ನು ಸ್ವಚ್ಛಗೊಳಿಸುವ ಕಾರ್ಯ ಭಾನುವಾರ ಜರುಗಿತು.
ಪೊಲೀಸ್ ಇಲಾಖೆ, ನಿವೃತ್ತ ಸೈನಿಕರ ಸಂಘ, ಹಸಿರು ಸಂಪದ ಬಳಗ ಹಾಗೂ ಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು. ಇಡೀ ಭಾವಿಯನ್ನು ಆವರಿಸಿದ್ದ ಜಾಲಿಮುಳ್ಳುಗಳ ಕಂಟಿಗಳನ್ನು ಭಾವಿಯ ಪಕ್ಕದ ನಿವಾಸಿ ಮಾಳಿಂಗರಾಯ ಪೂಜಾರಿ ಶನಿವಾರದಂದೇ ಕತ್ತರಿಸಿ ಒಳಗೆ ಹೋಗಲು ಅನುವು ಮಾಡಿಕೊಟ್ಟಿದ್ದರು.
ಪುರಸಭೆ ಸದಸ್ಯ ಜೈಸಿಂಗ ಮೂಲಿಮನಿ, ಪಿಎಸೈ ಆರ್.ಎಸ್.ಭಂಗಿ ಅವರು ಭಾವಿಯ ನೀರಿಗೆ ಇಳಿದು ಬಾವಿಯ ನೀರಲ್ಲಿ ತುಂಬಿದ್ದ ಜೊಂಡನ್ನೆಲ್ಲ ಬಳಿದರು. ಬಾವಿಯ ತುಂಬ ತುಂಬಿದ್ದ ದುರ್ವಾಸ ಬೀರುತ್ತಿದ್ದ ಜೊಂಡು, ಜಬ್ಬಲವನ್ನು ಕಿತ್ತು, ಒಳಗೆ ತುಂಬಿದ್ದ ಮುಳ್ಳುಪೊದೆಗಳನ್ನು ಕಿತ್ತು ಭಾವಿಯ ಹೊರಗೆ ಹಾಕಲಾಯಿತು.
ಮೆಟ್ಟಿಲುಗಳ ಮೇಲೆ ಎಲ್ಲೆಂದರಲ್ಲಿ ಬಿದ್ದಿದ್ದ ಮದ್ಯದ ಬಾಟಲಿಗಳು, ಪಾನಿಯದ ಬಾಟಲುಗಳನ್ನು ಎತ್ತಿ ಹಾಕಿ, ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸಲಾಯಿತು. ಪಿಎಸೈ ರಾಮನಗೌಡ ಸಂಕನಾಳ, ಎಎಸ್‌ಐ ಚಂದ್ರಶೇಖರ ಭಂಗಿ, ಎಂ.ಎಲ್.ಪಟ್ಟೇದ, ಬಸವರಾಜ ಬಲಕಲ್ಲ, ಬಸವರಾಜ ದೊಡಮನಿ, ಶಶಿಧರ ರಡ್ಡಿ, ಸಂತೋಷ ಭೋವಿ, ಪ್ರಭಯ್ಯ ಪೂಜಾರ, ಎಸ್.ಎಸ್. ಗಿರಿಸಾಗರ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾಲ ಸಂಗ್ಮಿ, ಶಿವಪ್ಪ ಅಂಗಡಿ, ಬಾಪುಗೌಡ ಪಾಟೀಲ, ಬಿ.ಎಸ್.ಹರನಾಳ, ಕೆ.ಟಿ.ಸಜ್ಜನ, ಬಸನಗೌಡ ಪಾಟೀಲ ಇದ್ದರು.
ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿಅವರು, ಕೈಗವಸು, ಸ್ಯಾನಿಟೈಸರ್ ಒದಗಿಸಿದರು. ಬಳಗದ ಡಾ.ಶ್ರೀಶೈಲ ಹುಕ್ಕೇರಿ, ಡಾ.ಅನಿಲಕುಮಾರ ಇರಾಜ, ಶಫೀಕ ಇನಾಮದಾರ, ನಂದು ಘಾಟಗೆ, ಅನಿಲ ಕಮ್ಮಾರ, ಕೃಷ್ಣಾ ಕಮ್ಮಾರ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು., ಹಸಿರು ಸಂಪದ ಬಳಗದ ಸಂಚಾಲಕ ಎಸ್.ಎಸ್.ಗಡೇದ ವಂದಿಸಿದರು.
ಖಾಸ್ಗತೇಶ್ವರಮಠದ ಪೀಠಾಧಿಪತಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಪಿಎಸೈ ಹುದ್ದೆಯಿಂದ ಸಿಪಿಐ ಹುದ್ದೆಗೆ ಪದೋನ್ನತಿ ಹೊಂದಿದ ರಾಮನಗೌಡ ಸಂಕನಾಳ ಅವರನ್ನು ಶ್ರೀಮಠದ ವತಿಯಿಂದ ಗೌರವಿಸಲಾಯಿತು. ಶ್ರಿಮಠದ ಆಡಳಿತಾಧಿಕಾರಿ ಮುರುಘೇಶ ವಿರಕ್ತಮಠ ಉಪಸ್ಥಿತರಿದ್ದರು.
ಮೂರು ಗಂಟೆಗಳಿಗೂ ಅಧಿಕ ಕಾಲ ಸ್ವಚ್ಛತಾ ಕಾರ್ಯ ನಡೆಯಿತು. ಭೀಮನಭಾವಿಯ ಒಳಗೆ ಸುಲಭವಾಗಿ ಇಳಿದು ಹೋಗಿ ಪೂಜಾ ಕಾರ್ಯ ನೆರವೇರಿಸಲು ಅನುವುಮಾಡಿಕೊಡಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 