ಖಗ್ರಾಸ್ ಚಂದ್ರಗ್ರಹಣ: ಆಗಸದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ: ಎಐಡಿವೈಒ
Khagras lunar eclipse: A natural process taking place in the sky: AIDYO
ಕೊಪ್ಪಳ 07: ನಿನ್ನೆ ನಡೆದಖಗ್ರಾಸ್‌ಚಂದ್ರಗ್ರಹಣ ವನ್ನು ಕೊಪ್ಪಳದ ಕಾಳಿದಾಸ ನಗರದಲ್ಲಿರುವ ವೃತ್ತಿ ಪರ ಹಾಸ್ಟೆಲ್ ನಲ್ಲಿ ಎ ಐ ಡಿ ವೈ ಒ ಸಂಘಟನೆಯಿಂದ ವೀಕ್ಷಣೆಕಾರ್ಯಕ್ರಮ ವನ್ನು ಅಮ್ಮಿಕೊಳ್ಳಲಾಗಿತ್ತು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಲ್ಲದೆ, ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕತೆ ಇತರ ವಿಷಯಗಳ ಕುರಿತು ಒಳ್ಳೆಯ ಚರ್ಚೆ ನಡೆಯಿತು.
ಎ ಐ ಡಿ ವೈ ಒ ಜಿಲ್ಲಾ ಕಾರ್ಯದರ್ಶಿಯಾದ ಶರಣು ಪಾಟೀಲ್ ಮಾತನಾಡಿ, ನಮ್ಮ ಸೌರ ಮಂಡಲದಲ್ಲಿ ಸೂರ್ಯ ಮತ್ತುಚಂದ್ರ ನಡುವೆ ಭೂಮಿ ಅಡ್ಡ ಬಂದು ಒಂದೇರೇಖೆಯಲ್ಲಿ 3 ಆಕಾಶ ಕಾಯಗಳು ಬಂದು ಸೇರಿದರೆಚಂದ್ರಗ್ರಹಣ ವಾಗುತ್ತದೆ. ಬಾನಂಗಳದಲ್ಲಾಗುವ ಸುಂದರ ವಿದ್ಯಮಾನವನ್ನುಎಲ್ಲರೂ ನೋಡಿ ಸವಿಬೇಕೆಂದು ಹೇಳುತ್ತಾ, ಸೂರ್ಯೋದಯ, ಸೂರ್ಯಸ್ಥರೀತಿ ಸೂರ್ಯಗ್ರಹಣಚಂದ್ರಗ್ರಹಣ ಆಗಸದಲ್ಲಿ ಸಹಜ ಪ್ರಕ್ರಿಯೆ.ತದ್ವಿರುದ್ಧವಾಗಿಜ್ಯೋತಿಷ್ಯ ಶಾಸ್ತ್ರ ಹೇಳುವುದೆಲ್ಲ ಮಿತ್ಯ, ಜ್ಯೋತಿಷ್ಯಶಾಸ್ತ್ರಗರ್ಭಿಣಿಯರನ್ನು ಹೊರಗೆ ಬರಬಾರದೆಂದು, ಏನು ತಿನ್ನಬಾರದೆಂದುಎಂದು ಹೇಳುತ್ತದೆ. ಗ್ರಹಣ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಏನು ಮಾಡಬೇಕೆಂದು ಪ್ರಶ್ನಿಸಿದರು. ಜ್ಯೋತಿಷ್ಯ ಶಾಸ್ತ್ರವುಗ್ರಹಣ ಮುಗಿದ ಮೇಲೆ ಮನೆಯ ನೀರನ್ನಚೆಲ್ಲಿಎಂದು ಹೇಳುತ್ತದೆ.ಆಗದ್ರೆ ಸಮುದ್ರದ ನೀರು, ಕೆರೆಯ ನೀರು, ಹೊಳೆಯ ನೀರನ್ನು, ಎಲ್ಲಿಚೆಲ್ಲುವುದುಎಂದು ಪ್ರಶ್ನಿಸಿದರು. ಇದೇ ರೀತಿ ಚರ್ಚೆ ಮುಂದುವರೆದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಎ ಐ ಡಿ ವೈ ಒ ಜಿಲ್ಲಾಧ್ಯಕ್ಷರಾದಆರ್, ವಿ, ಕಾಮನೂರ್, ಸದಸ್ಯರಾದ ಸುಭಾನ್, ವಿದ್ಯಾರ್ಥಿಗಳಾದ ಉದಯ್, ಶಿವು, ಅಣ್ಣಪ್ಪ, ಮಲ್ಲೇಶ್, ಅಭಿ, ಮುಂತಾದವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 