ಬಾಗಲಕೋಟೆ: ಮಹಾತ್ಮಾಗಾಂಧೀಜಿಯವರ 150ನೇ ವಷರ್ಾಚರಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ರಿಯಾಯಿತಿ ದರದಲ್ಲಿ ಖಾದಿ ಮಾರಾಟ ಮಳಿಗೆ ಆರಂಬಿಸಲಾಗಿದೆ.
ಇತ್ತೀಚೆಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಖಾದಿ ಉತ್ಪನ್ನಗಳನ್ನು ಜನರು ಅಧಿಕ ಪ್ರಮಾಣದಲ್ಲಿ ಬಳಸಬೇಕೆಂಬ ಉದ್ದೇಶದಿಂದ ಕೈಗೊಂಡ ನಿಧರ್ಾರದಿಂದ ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಮುಂದೆ ಹಾಕಿರುವ ಗದ್ದನಕೇರಿ ಖಾದಿ ಗ್ರಾಮೋದ್ಯೋಗ ಪೆಡ್ರೇಷನ್ ರಾಷ್ಟ್ರಧ್ವಜ, ಬಗೆ ಬಗೆ ಬಣ್ಣದ ಖಾದಿ ಅಂಗಿ, ಕೈಚೀಲ, ಕೈವಸ್ತ್ರ, ಸೀರೆ, ಚಾದರ, ಜಮಖಾನ ಒಳಗೊಂಡಂತೆ ಬಟ್ಟೆಗಳ ಮಾರಾಟ ಮಳಿಗೆ ಪ್ರಾರಂಭಿಸಿ ಎರಡೇ ದಿನಗಳಲ್ಲಿ ಹೆಚ್ಚಿನ ವ್ಯಾಪಾರ ನಡೆಯುತ್ತಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಸ್ವತಃ ತಾವೇ ಕಡ್ಡಾಯವಾಗಿ ವಾರದಲ್ಲಿ ಒಂದು ದಿವಸ ಖಾದಿ ಬಟ್ಟೆಯ ಉಡುಗೆ ಉಟ್ಟು ಕಚೇರಿಗೆ ಬರುವುದಲ್ಲದೇ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಪಂಚಾಯತಿ ಸಿಬ್ಬಂದಿಗಳಿಗೆ ಎಲ್ಲ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಖಾದಿ ಬಟ್ಟೆ ಉಪುಯೋಗಿಸಲು ತಿಳಿಸಿದ್ದಾರೆ.
ಈ ಮಳಿಗೆ ಕಳೆದೆರಡು ದಿನಗಳಲ್ಲಿ ಶೇಕಡಾ 35 ರಷ್ಟು ರಿಯಾಯಿತಿಯೊಂದಿಗೆ ಮಾರಾಟದ ವ್ಯವಹಾರ 26 ಸಾವಿರ ರೂ.ಗಳವರೆಗೆ ಆಗಿದ್ದು, ಇದರಿಂದ ಜನಮನ್ನಣೆ ಪಡೆದಿದೆ. ಬಾಗಲಕೋಟೆ ಜಿಲ್ಲೆ ಕೈಮಗ್ಗ ಉತ್ಪಾದನೆಗೆ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಇಲ್ಲಕಲ್ಲ, ಗುಳೇದಗುಡ್ಡ ರಬಕವಿ-ಬನಹಟ್ಟಿ, ಸೂಳೆಭಾವಿ, ಗೂಡುರ, ಕಮತಗಿ, ಗದ್ದನಕೇರಿ, ತುಳಸಿಗೇರಿ, ಸೀಮೆಕೇರಿ, ಕೆರೂರ, ಗೋವಿನಕೊಪ್ಪ, ಉಗಲವಾಟ, ಮಹಾಲಿಂಗಪೂರಗಳಲ್ಲಿ ಇಂದಿಗೂ ಕೂಡ ನೇಕಾರಿಕೆ ಪ್ರಧಾನ ಕಸಬಾಗಿದೆ. ದೇಶದಲ್ಲಿಯೇ ಬೆರಳಣಿಕೆಯಷ್ಟು ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಗಳಲ್ಲಿ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ರಾಷ್ಟ್ರಧ್ವಜ ಉತ್ಪಾದನೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಖಾದಿ ಉಪಯೋಗಿಸುವವರ ಸಂಖ್ಯೆ ಹೆಚ್ಚಾದಂತೆಲ್ಲಾ ಅಳಿವಿನ ಅಂಚಿನಲ್ಲಿರುವ ಖಾದಿ ಗ್ರಾಮೋದ್ಯಗಕ್ಕೆ ಚೇತನ್ಯ ಬಂದಂತಾಗುವದು ಎಂಬುವುದು ಮಾನಕರ ಅವರ ಚಿಂತನೆಯಾಗಿದ್ದು, ಆಡಳಿತದಲ್ಲಿ ಖಾದಿ ಉಪಯೋಗವಾಗತೊಡಗಿದಾಗ ತಂತಾನೆ ಪ್ರಚಲಿತಗೊಳ್ಳುತ್ತದೆ. ಆ ನಿಟ್ಟಿನಲ್ಲಿ ದಿಟ್ಟ ಹಾಗೂ ದೃಢನಿಧರ್ಾರ ತೆಗೆದುಕೊಳ್ಳಲಾಗುವದರ ಜೊತೆಗೆ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯನ್ನು ಹಾಗೂ ಅಪಟ್ಟ ದೇಶಿಯ ಸ್ವಾವಲಂಬಿ ಉತ್ಪನ್ನವಾಗಿರುವ ಖಾದಿಗೆ ಗೌರವ ನೀಡಿದಂತಾಗುವದು.
ಜಿಲ್ಲೆಯಲ್ಲಿ ಕೈಮಗ್ಗ ನೇಕಾರಿಕೆ ಅಭಿವೃದ್ಧಿಪಡಿಸುವದಕ್ಕಾಗಿ ಇದೇ ವೃತ್ತಿ ನಂಬಿ ಬದುಕುತ್ತಿರುವ ಅಸಂಘಟಿತ ಶ್ರಮಜೀವಿ ನೇಕಾರರಿಗೆ ಆಥರ್ಿಕ ಅಭಿವೃದ್ಧಿ ಪಡಿಸಲು ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಸಿಇಒ ಅವರು ಸುತ್ತೋಲೆಯೊಂದನ್ನು ಹೊರಡಿಸಿದ್ದು, ನವ್ಹಂಬರ್ 1 ರಂದು ರಾಜ್ಯೋತ್ಸವ ದಿನವಾಗಿದ್ದರಿಂದ ಅಂದು ಪ್ರತಿಯೊಬ್ಬರು ಕಡ್ಡಾಯವಾಗಿ ಖಾದಿ ಉಡುಗೆಯನ್ನು ತೊಟ್ಟುಕೊಳ್ಳಬೇಕೆಂಬ ಮನವಿಯಾಗಿದೆ. ಇಂತಹ ಅಪರೂಪದ ಖಾದಿಯ ಹಾದಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಹಾಗೂ ಸಿಇಒ ಗಂಗೂಬಾಯಿ ಮಾನಕರ ದಿಟ್ಟಹೆಜ್ಜೆ ಇಟ್ಟಿದ್ದು ಜಿಲ್ಲೆಯ ಜನತೆ ಮೆಚ್ಚುವಂತಾಗಿದೆ.