ಸೀಮೆ ಎಣ್ಣೆ ದರ ಗಗನಕ್ಕೆ : ದರ ಇಳಿಸಲು ನಾಡ ದೊಣಿ, ಸಾಂಪ್ರದಾಯಿಕ ಮೀನುಗಾರರಿಂದ ಮನವಿ

ಸೀಮೆ ಎಣ್ಣೆ ದರ ಗಗನಕ್ಕೆ : ದರ ಇಳಿಸಲು ನಾಡ ದೊಣಿ, ಸಾಂಪ್ರದಾಯಿಕ ಮೀನುಗಾರರಿಂದ ಮನವಿ Kerosene prices skyrocket: Nada Doni, traditional fishermen appeal to reduce prices

 ಕಾರವಾರ 21 : ತಾಲ್ಲೂಕ ನಾಡ ದೊಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಸೀಮೆ ಎಣ್ಣೆ ದರ 117 ರೂ.ಗೆ ಹೆಚ್ಚಾಗಿರುವುದನ್ನು ಪ್ರತಿಭಟಿಸಿದರು. ದರ ಇಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಮೀನುಗಾರರನ್ನು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉಳ್ವೇಕರ್ ಅನಾಧಿಕಾಲದಿಂದ ಮೀನುಗಾರರು ಸೀಮೆ ಎಣ್ಣೆ ಆಧಾರಿತ  ಸಂಪ್ರದಾಯಿಕ ದೋಣಿ ಬಳಸಿ, ಜೀವನ ನಿರ್ವಹಣೆ ಮಾಡುತ್ತಾ ಬಂದಿರುತ್ತಾರೆ. ಬಂಡವಾಳ ಶಾಹಿಗಳು ರಾತ್ರಿ ಸಮಯದಲ್ಲಿ ಲೈಟ್ ಫಿಶಿಂಗ್ ಮತ್ತು ಬುಲಟ್ರೋಜ್ ಫಿಶಿಂಗ್ ಮಾಡುತ್ತಾರೆ.

ಬಡವಾಳ  ಶಾಹಿಯವರು ನೈಟ ಫಿಶ್ಶಿಂಗ್ ಗೆ ಡಿಸೈಲನ್ನು ಉಪಯೋಗಿಸುತ್ತಾರೆ. ಇವರಿಗೆ ಡಿಸೈಲ್ ದರ ರೂ. 78 ಪಡೆಯುತ್ತಲಿದ್ದಾರೆ. ಅದೇ ರೀತಿ ನಾಡ ಹೊಣಿ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರಿಗೆ ಸಿಮೆ ಎಣ್ಣೆ ಉಪಯೋಗಿಸಿ ದೋಣಿ ನಡೆಸುತ್ತಾರೆ.  ನೈಟ್ ಫಿಶಿಂಗ್ ಮಾಡುವದರಿಂದ ನಾಡ ದೊಣಿ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರಿಗೆ ಸರ್ಮಪಕವಾದ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಬಂಡವಾಳಶಾಹಿ ಯಾಂತ್ರಿಕ ಮೀನುಗಾರಿಕೆಯಿಂದ  ಯಾವದೇ ರೀತಿಯ ಆದಾಯ ಸಹ ಇರುವದಿಲ್ಲ. ಮತ್ತು ಸೀಮೆ ಎಣ್ಣೆ ದರ ಈಗ ರೂ. 117 ಗೆ ಸರ್ಕಾರ ಏರಿಸಿದೆ. ಇದರಿಂದ ನಾಡ ದೊಣಿ ಮತ್ತು ಸಾಂಪ್ರದಾಯಿಕ ಮಿನುಗಾರಿಕೆ ಅರಿಕೆ ಮಾಡುವವರಿಗೆ ಜೀವನ ನಡೆಸುವುದು ಕಷ್ಟದಾಯಕವಾಗಿರುತ್ತದೆ ಎಂದು ಉಳ್ವೇಕರ್ ಹೇಳಿದರು.

ಸಿಮೆ ಎಣ್ಣೆ ದರವನ್ನು ಕನಾರ್ಟಕ ರಾಜ್ಯ ಮೀನುಗಾರರ ಮುಖಂಡರ ಗಮನಕ್ಕೆ ತರದೆ ಏಕಾ ಏಕಿ ಸೀಮೆ ಎಣ್ಣೆ ದರ ಏರಿಸಿದ್ದು ಬಡ ಮೀನುಗಾರರಿಗೆ ಅನ್ಯಾಯವಾಗಿದೆ. ಈ ಮೊದಲು ರೂ. ಸೀಮೆ  ಎಣ್ಣೆಗೆ ರೂ. 35 ಇತ್ತು.  ತದನಂತರ ರೂ. 60 ತದನಂತರ 64 ಗೆ ಏರಿತು.  ಈಗ ಏಕಾ ಏಕಿಯಾಗಿ ಸೀಮೆ ಎಣ್ಣೆ  ದರ ರೂ. 117 ಕ್ಕೆ ಏರಿಸಿದ್ದು , ಇದರಿಂದ ಬಡ ಮೀನುಗಾರರಿಗೆ ಮತ್ತು ಸಾಂಪ್ರಾದಾಯಕ ಮೀನಗಾರಿಕೆ ಮಾಡುವವರಿಗೆ ತುಂಬಾ ಆಘಾತವಾಗಿದೆ.  ಅವರ ಜೀವನ ನಡೆಸುವುದು ಕಷ್ಟದಾಯಕವಾಗಿದೆ ಎಂದು ಉಳ್ವೇಕರ್ ಆರೋಪಿಸಿದರು.

ಬಂಡವಾಳಿ ಶಾಹಿಗಳಿಗೆ ನೀಡುವ ಡಿಸೈಲ್ ದರ ರೂ. 78 ಇದೆ.  ಹಾಗೆಯ ಬಡ ಮೀನುಗಾರರು ಸೀಮೆ ಎಣ್ಣೆ ಉಪಯೋಗಿಸುವದರಿಂದ ಸದರಿ ದರವನ್ನು ರೂ. 35ಕ್ಕೆ ನೀಡಲು ಆಗ್ರಹಿಸಿದರು. 7 ದಿವಸದ ಒಳಗೆ ಸೀಮೆ ಎಣ್ಣೆ  ದರ ರೂ.60  ನೀಡದೆ ಇದಲ್ಲಿ,  ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಧರಣಿ ಮಾಡಲಾಗಯವುದು  ಎಂದು ಎಚ್ಚರಿಸಿದರು. ನಂತರ ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಮನವಿ ನೀಡಲಾಯಿತು. ಮೀನುಗಾರರ ಮುಖಂಡರು ಉಪಸ್ಥಿತರಿದ್ದರು .