ತ್ರಿಸೂರ್, ಫೆ 1 - ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿರುವ ಕೇರಳದ ವಿದ್ಯಾರ್ಥಿನಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ರೋಗಿಯ ಆರೋಗ್ಯ ಸ್ಥಿರವಾಗಿದ್ದು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಗುರುವಾರ ದೇಶದ ಮೊದಲ ಸೋಂಕು ಪ್ರಕರಣ ದೃಢಪಟ್ಟಿರುವುದನ್ನು ಪ್ರಕಟಿಸಿದ್ದರು.
ಈ ನಡುವೆ, 15 ಶಂಕಿತರ ರಕ್ತದ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.
ಆರೋಗ್ಯ ಸಚಿವರು ತ್ರಿಸೂರ್ ನಲ್ಲಿಯೇ ನೆಲೆಸಿದ್ದು, ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆ ಜನರಿಗೆ ಆತಂಕ ಪಡದಿರುವಂತೆ ಮನವಿ ಮಾಡಿದೆ.