ಕೆಂಪೇಗೌಡ ಠಾಣೆ ಪೊಲೀಸ್ ಸಿಬ್ಬಂದಿಗೆ ಸನ್ಮಾನ

ಬೆಂಗಳೂರು, ಮೇ 07, ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ವೈದ್ಯರು, ಶುಶ್ರೂಷಕಿಯರು, ವಿಜ್ಞಾನಿಗಳು, ಪೌರ ಕಾರ್ಮಿಕರು ಸೇರಿದಂತೆ ಅನೇಕ ಮಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ.ಸೋಂಕು ಪೀಡಿತರನ್ನು ತಡೆಗಟ್ಟಲು, ಪತ್ತೆ ಹಚ್ಚಲು, ಲಾಕ್ ಡೌನ್ ನಿಯಮ ಉಲ್ಲಂಘಿಸುವವರಲ್ಲಿ ಜಾಗೃತಿ ಮೂಡಿಸುವಲ್ಲಿ ಪೊಲೀಸರ ಶ್ರಮ ಅಪಾರ.ಇಂತಹ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ಬಿಜೆಪಿ ನಾಯಕಿ ಹಾಗೂ ನಟಿ ತಾರಾ ಅನುರಾದ ಧನ್ಯವಾದ ಸಲ್ಲಿಸಿದ್ದಾರೆ.ನಟಿ ತಾರಾ ಅವರು, ಇಂದು ನಗರದ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಅಲ್ಲಿನ ಎಲ್ಲಾ ಸಿಬ್ಬಂದಿಗೆ ದಿನಸಿ ನೀಡಿ ಹೂಮಳೆ ಸುರಿಯುವ ಮೂಲಕ ಸನ್ಮಾನಿಸಿದ್ದಾರೆ.