ರೋಗ ವನ್ನು ದೂರವಿಡಿ ರೋಗಿಯನ್ನಲ್ಲಾ: ಡಾ.ಕರ್ಪೂರಮಠ

ಲೋಕದರ್ಶನವರದಿ

ಧಾರವಾಡ: ಕ್ಷಯ ರೋಗಕ್ಕೆ ತುತ್ತಾದ ರೋಗಿಗೆ ದೊರೆತರೆ ರೋಗ ನಿವಾರಣೆ ಸಾಧ್ಯ ಆದ ಕಾರಣ ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ದೂರವಿಡಬೇಡಿ ರೋಗವನ್ನು ದೂರವಿಡಿ ಪ್ರತಿವರ್ಷ ದೇಶದಲ್ಲಿ 2 ರಿಂದ 3 ಲಕ್ಷ ಜನರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಟಿ.ಬಿ ಎಂದು ತಿಳಿಯಲು ನಮಗೆ 50 ವರ್ಷ ಬೇಕಾಯಿತು, 1884 ಮಾರ್ಚ 24 ರಂದು ಈ ರೋಗದ ಬಗ್ಗೆ ನಮಗೆ ತಿಳಿಯಿತು. ಈ ರೋಗಕ್ಕೆ ಮುಖ್ಯ ಕಾರಣ, ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು, ಸ್ವಚ್ಚತೆ ಇಲ್ಲದೇ ಇರುವುದು, ವಾಯು ಮಾಲಿನ್ಯ. ಅನಾರೋಗ್ಯ ಪ್ರಾರಂಭವಾಗುವುದೇ ಅಡುಗೆ ಮನೆಯಿಂದ ಎಂದು ಜೆ.ಎಸ್.ಎಸ್. ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ರರ ಅಧ್ಯಯನ ಕೇಂದ್ರದ ಯುವ ರೆಡ್ ಕ್ರಾಸ್, ಮತ್ತು ರೆಡ್ ಕ್ರಾಸ್ ಸಂಸ್ಥೆ, ಧಾರವಾಡ ಸಹಯೋಗದೊಂದಿಗೆ ಕ್ಷಯ ರೋಗದ ಬಗ್ಗೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕತಿಯಾಗಿ ಡಾ. ವ್ಹಿ.ಡಿ ಕರ್ಪೂರಮಠ ಹೇಳಿದರು.

      ಪೌಷ್ಠಿಕ ಆಹಾರ, ವ್ಯಾಯಾಮ, ದ್ಯಾನ ಮುಂತಾದ ಚಟುವಟಿಕೆಗಳು ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ನೀಡುತ್ತವೆ. ಈ ರೋಗಕ್ಕೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು

    ಇಂದಿನ ಆಹಾರ ಪದ್ಧತಿ ಹಲವಾರು ರೋಗಗಳ ಉತ್ಪತ್ತಿಗೆ ಕಾರಣವಾಗಿದೆ. ಆಹಾರ ಪದಾರ್ಥಗಳಲ್ಲಿ ಕೆಂಡದಂತೆ ಇಡುವ ವಿಷಕಾರಿ ವಸ್ತುಗಳು ಯುವಕರಲ್ಲಿ ಹೊಸ ಹೊಸ ರೋಗಗಳನ್ನು ಸೃಷ್ಟಿಸುತ್ತಿದೆ. ಬಡತನ, ಅಪೌಷ್ಟಿಕತೆ, ಗಾಳಿ ಪ್ರದೂಷಣೆ, ಬೀಡಿ ಸಿಗರೇಟ, ಗಾಂಜಾ ಆಪೀಮು ಸೇವನೆಯಿಂದಾಗಿ ಕ್ಷಯ ರೋಗ ಬರುತ್ತದೆ. ಸಮಯ, ಆರೋಗ್ಯ ನೈತಿಕತೆ ಮಾರುಕಟ್ಟೆಯಲ್ಲಿ ದೊರೆಯುವ ವಸ್ತುಗಳಲ್ಲ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. 

      ರೋಗದ ಬಗ್ಗೆ ತಿಳುವಳಿಕೆ ಇಲ್ಲದಿರುವುದೇ ರೋಗದ ಉಲ್ಬಣಕ್ಕೆ ಕಾರಣ ಬಿ.ಎಡ್ ಶಿಕ್ಷಣ ಪಡೆಯುತ್ತಿರುವ ವಿದ್ಯಾಥರ್ಿಗಳಾದ ತಾವು ಈ ರೋಗದ ತಿಳುವಳಿಕೆ, ಚಿಕಿತ್ಸೆ ಬಗ್ಗೆ ವ್ಯಾಪಕ ಪ್ರಚಾರ ನೀಡಿದಲ್ಲಿ ಕ್ಷಯ ರೊಗ ನಿವಾರಣೆಗೆ ತಮ್ಮ ಕೊಡುಗೆ ನೀಡಿದಂತಾಗುತ್ತದೆ. ಈ ರೋಗಕ್ಕೆ ಬೇಕಾಗುವ ಔಷಧಗಳ ಬೆಲೆ ಸಾಕಷ್ಟು ಕಡಿಮೆ ಮಾಡಿ ಸರಕಾರ ಬಡವರಿಗೂ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಕ್ಷಯರೋಗವನ್ನು ಪತ್ತೆ ಹಚ್ಚಿ ಹಲವಾರು ಜೀವಗಳಿಗೆ ಜೀವದಾನ ಮಾಡಿಜ ಡಾ. ರಾಬರ್ಟರವರನ್ನು ನಾವು ನೆನೆಯುವುದು ಸೂಕ್ತ ಎಂದು ಹೇಳಿದರು.

      ಪ್ರಾರಂಭದಲ್ಲಿ ಕು. ಸನಾ ಕರಿಕಟ್ಟಿ ಪ್ರಾಥರ್ಿದರು, ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪರಶುರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು. ಎ.ಡಬ್ಲೂ ಜಾನ್ ವಂದಿಸಿದರು, ಡಾ. ಸುಕನ್ಯಾ ಅಪ್ಪೋಜಿ ನಿರೂಪಿಸಿದರು.