ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಪ್ರೊ. ಶಿವಾನಂದ ಪಟ್ಟಣಶೆಟ್ಟರರಿಗೆ ಸನ್ಮಾನ

ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಪ್ರೊ. ಶಿವಾನಂದ ಪಟ್ಟಣಶೆಟ್ಟರರಿಗೆ ಸನ್ಮಾನ  Kayakayogi Awardee Prof. Shivananda Pattanashettar felicitated

ಗದಗ  25: ಸಮಾಜಮುಖಿ ಪರ ಕಾಯಕ ರಂಗದಲ್ಲೇ ತಮ್ಮ ಜೀವನ ಪಥವನ್ನು ಸಾರ್ಥಕತೆಯಿಂದ ಸಾಗಿಸಿಕೊಂಡು ಬಂದಿರುವ ಗದುಗಿನ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಅವರ ಸೇವಾ ಕೈಂಕರ್ಯದ ಹೆಜ್ಜೆ ಗುರುತುಗಳು ಅನುಪಮವಾಗಿವೆ. ಅವರ ಜೀವನದ ಪ್ರತಿಯೊಂದು ಅಧ್ಯಾಯದಲ್ಲೂ ಕಾಯಕದ ಮಕರಂದ, ಸೇವೆಯ ಉಪಾಸನೆ, ಸುವಾಸನೆ, ಮಾನವೀಯತೆಯ ಮಧುರತೆ ಬೀರಿವೆ. ಮನಭಾವದಲ್ಲಿ ಶಿಕ್ಷಣದ ಬೆಳಕು ತುಂಬಿಕೊಂಡಿವೆ ಎಂದು ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಜಿ.ಡಿ.ದಾಸರ ಹೇಳಿದರು.   

ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರಿಗೆ ದೊಡ್ಡಬಳ್ಳಾಪುರದ ಕನಾ9ಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಕಾಯಕಯೋಗಿ-2026 ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಅಭಿಮಾನದಿಂದ ಶಾಲು ಹೊದಿಸಿ ಸನ್ಮಾನಿಸಿ  ಮಾತನಾಡಿದ ಅವರು, ಇಂತಹ ಮಹಾನ್ ಶಿಕ್ಷಣ ತಪಸ್ಸಿಗೆ ಕಾಯಕಯೋಗಿ ಪ್ರಶಸ್ತಿ ಸಂದಿರುವುದು ನಿಜಕ್ಕೂ ಪ್ರಶಸ್ತಿಯ ಗೌರವವನ್ನೇ ಹೆಚ್ಚಿಸಿದೆ ಅಲ್ಲದೇ ಶಿಕ್ಷಣ ಕ್ಷೇತ್ರಕ್ಕೆ ಸಂದ ಅಪರೂಪದ ಗೌರವವಾಗಿದೆ.ಈ ಸುದ್ದಿ ಕೇಳಿದ ಕ್ಷಣದಿಂದಲೇ ಮನಸ್ಸಿನಲ್ಲಿ ಅಪಾರ ಸಂತೋಷ, ಗೌರವ ಮತ್ತು ಅಭಿಮಾನ ಮೂಡಿತು ಎಂದರು.      ಪ್ರೊ.ಶಿವಾನಂದ ಪಟ್ಟಣಶೆಟ್ಟರ ಸರ್ ಎಂದರೆ ಕೇವಲ ಶಿಕ್ಷಕರಲ್ಲ, ಅವರು ಶಿಕ್ಷಣವನ್ನು ಸಮಾಜ ಪರಿವರ್ತನೆಯ ಸಾಧನವೆಂದು ನಂಬಿದ ಕಾಯಕಯೋಗಿ. ಅವರ ಜೀವನ ಶೈಲಿ, ಸರಳತೆ, ಸೇವಾಭಾವ, ಶಿಕ್ಷಣದ ಮೇಲಿನ ಅಪಾರ ಪ್ರೀತಿ ಹಾಗೂ ಸಮಾಜದ ಕುರಿತು ಹೊಂದಿರುವಕಾಳಜಿ ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.  

   ಮಾತೃ ಹೃದಯಿ ಈ ಮಹನೀಯರಿಗೆ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಮೊನ್ನೆ ತಮ್ಮ ಒಡನಾಡಿ ಸ್ನೇಹಿತ ಎಂ.ಎಚ್‌.ಸವದತ್ತಿ ಅವರೊಂದಿಗೆ ಬೆಳಿಗ್ಗೆ 8 ಗಂಟೆ ಸಮಾರಿಗೆ ಪ್ರೊ.ಪಟ್ಟಣಶೆಟ್ಟರ ಅವರ ಮನೆಗೆ ಭೇಟಿ ನೀಡಲು ಹೋದಾಗ ಅವರು ಮನೆಯಲ್ಲಿರಲಿಲ್ಲ. ಅಗ ಅವರಿಗೆ ಪೋನ್ ಮಾಡಿದಾಗ, "ನಾನು ಮಲ್ಲಸಮುದ್ರದ ಶಾಲೆಯಲ್ಲಿ ಇದ್ದೇನೆ. ಮಕ್ಕಳಿಗಾಗಿ ಬೋರ್ ವೆಲ್ ಕೆಲಸ ನಡೆಯುತ್ತಿದೆ. ನೀವು ಸಂಜೆ ಬನ್ನಿ" ಎಂದರು. ಅಗ ಮರಳಿ ನಮ್ನ ಕಚೇರಿಗೆ ತೆರಳಿ ರಾತ್ರಿ 8-30 ಕ್ಕೆ ಮತ್ತೊಮ್ಮೆ ಕರೆ ಮಾಡಿದಾಗಲೂ, "ನಾನು ಇನ್ನೂ ಶಾಲೆಯಲ್ಲೇ ಇದ್ದೇನೆ ಸರ್‌. ಬೋರ್ ವೆಲ್ ಕೆಲಸ ಮುಗಿದಿಲ್ಲ. ನಾಳೆ ಬನ್ನಿ" ಎಂದು ನಮ್ರತೆಯಿಂದ ಹೇಳಿ ಪೋನ್ ಇಟ್ಟರು. ಅಗ ತಮಗೆ ಒಂದು ಸತ್ಯ ಸ್ಪಷ್ಟವಾಯಿತು. ಕೆ

ಲವರು ಕೆಲಸ ಮಾಡುತ್ತಾರೆ, ಆದರೆ ಕೆಲವರು ಕೆಲಸವನ್ನೇ ಜೀವನವನ್ನಾಗಿಸಿಕೊಳ್ಳುತ್ತಾರೆ. ಪ್ರೊ.ಪಟ್ಟಣಶೆಟ್ಟರ ಗುರುಗಳು ಆ ಎರಡನೇ ವರ್ಗಕ್ಕೆ ಸೇರಿದ ಮಹನೀಯರು. ಬೆಳಿಗ್ಗೆಯಿಂದ ತಡರಾತ್ರಿವರೆಗೆ ಶಾಲೆಯಲ್ಲೇ ಇದ್ದು ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುವ ಅವರ ನಿಷ್ಕಲ್ಮಶ, ಪ್ರೀತಿ, ವಿಶ್ವಾಸವುಳ್ಳ ನಿಷ್ಟೆ ನೋಡಿದಾಗ " ಕಾಯಕವೇ ಕೈಲಾಸ " ಎಂಬ ಬಸವಣ್ಣನವರ ವಚನ ಜೀವಂತವಾಗಿ ಕಾಣಿಸಿತು ಎಂದು ತಮ್ಮ ಭಾವನೆಗಳನ್ನು ಡಯಟ್ ಉಪನ್ಯಾಸಕ ಜಿ.ಡಿ.ದಾಸರ ಮಾಮಿ9ಕವಾಗಿ ಹಂಚಿಕೊಂಡರು.        ಪ್ರೊ.ಪಟ್ಟಣಶೆಟ್ಟರ ಅವರು ತೋಂಟದ ಲಿಂಗೈಕ್ಯ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರನ್ನು ತಮ್ಮ ಹೃದಯ ಮಂದಿರದಲ್ಲಿ ಆರಾಧಿಸುತ್ತಾ, ಬಸವ ತತ್ವದರ್ಶನದಡಿಯಲ್ಲಿ ಜೀವನ ಸಾಗಿಸುತ್ತಿರುವ ಅಜಾತಶತ್ರು. ಯಾವುದೇ ರಾಜಕೀಯ ಪ್ರಭಾವಳಿಗಳಿಗೆ ಒಳಗಾಗದೆ, " ತನ್ನ ಕಾಯಕ - ತನ್ನ ಧರ್ಮ " ಎಂಬ ತತ್ವದೊಂದಿಗೆ ಬದ್ದತೆಯಿಂದ ಬದುಕುತ್ತಿರುವ ಅಪರೂಪದ ವ್ಯಕ್ತಿತ್ವ ಅವರದ್ದು. ಸರಳತೆ ಅವರ ಅಲಂಕಾರ, ಸೇವಾಭಾವ ಅವರ ಶಕ್ತಿ, ಮಾನವೀಯತೆ ಅವರ ಗುರುತು ಅಗಿದೆ ಎಂದರು.     

    2019-20 ರ ಅವಧಿಯಲ್ಲಿ ಜಿಲ್ಲೆಯ ಸಮಾನ ಮನಸ್ಕ ಅಧಿಕಾರಿಗಳು ಮತ್ತು ಶಿಕ್ಷಕರ ಬಳಗ ಸೇರಿ ಒಂದು ಉತ್ತಮ ವೇದಿಕೆಯನ್ನು ನಿಮಿ9ಸಿದ್ದಾಗ, ಗದಗದ ಶ್ರೀ ಜ.ತೋ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು 150 ವಿಜ್ಞಾನ ಶಿಕ್ಷಕರಿಗೆ "ಕಡಿಮೆ ವೆಚ್ಚದಲ್ಲಿ ವಿಜ್ಞಾನ ಉಪಕರಣಗಳನ್ನು ಬಳಸಿ ಪಾಠ ಬೋಧನೆ" ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದ ಊಟದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ ಪಟ್ಟಣಶೆಟ್ಟರ ಸರ್ ಅವರ ಉದಾತ್ತ ಗುಣ ಇಂದಿಗೂ ನಮ್ಮ ನೆನಪಿನಲ್ಲಿ ಅಚ್ಚೊತ್ತಿದಂತಿದೆ. ನಾವು ಸರ್, ಅದನ್ನು ನಾವೇ ನೋಡಿಕೊಳ್ಳುತ್ತೇವೆ ಎಂದಾಗ, ನೀವು ನಿಮ್ಮ ಸ್ವಂತ ಖಚಿ9ನಲ್ಲಿ ಇಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.ಇದರಲ್ಲಿ ನನ್ನದೂ ಒಂದು ಸೇವೆಯಾಗಲಿ ಎಂದು ಮಮತೆಯಿಂದ ಹೇಳಿದ ಅವರ ಮಾತುಗಳು ಅವರ ದೊಡ್ಡ ಮನಸ್ಸಿಗೆ ಸಾಕ್ಷಿಯಾಗಿದೆ ಎಂದು ಜಿ.ಡಿ.ದಾಸರ ಸ್ಮರಿಸಿಕೊಂಡರು.       

ಸಹೋದ್ಯೋಗಿಗಳ ಸಮಸ್ಯೆಗಳನ್ನು ತಮ್ಮದೇ ಸಮಸ್ಯೆಯಂತೆ ಕಂಡು, ಸಾಧ್ಯವಾದಷ್ಟು ಪರಿಹಾರ ನೀಡಿದ ಅನೇಕ ಘಟನೆಗಳು ಅವರ ವ್ಯಕ್ತಿತ್ವದ ಉಜ್ವಲ ಮುಖವನ್ನು ತೋರಿಸುತ್ತವೆ. ಬೆಲ್ಲವನ್ನು ಯಾವ ಕಡೆಯಿಂದ ಕಡೆಯಾದರೂ ಸಿಹಿ ಸಿಗುವಂತೆ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅವರ ಸುದೀರ್ಘ ಸೇವಾ ಕಾಯಕದ ಪಯಣ ಸಮಾಜಕ್ಕೆ ಸವಿಧಾರೆ ಎರೆದಿದೆ ಎಂದು ಬಣ್ಣಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಪಟ್ಟಣಶೆಟ್ಟರ ಅವರ ಸೇವೆ ಇನ್ನೂ ಅನೇಕ ಪೀಳಿಗೆಗಳಿಗೆ ದಾರೀದೀಪವಾಗಲಿ.ಅವರ ಸಾಧನೆಗೆ ಇನ್ನೂ ಹತ್ತು ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಲಿ.ಸೇವಾಭಾವ ಸಂತೋಷ ಹೀಗೆಯೇ ಅವರಲ್ಲಿ ಮಿನುಗುತ್ತಿರಲಿ ಎಂಬ ಆಶಯದೊಂದಿಗೆ ಶುಭ ಹಾರಿಸಿದರು.ಪೋಟೋ :  ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಹಾಗೂ ಜತೋ ವಿದ್ಯಾಪೀಠ ಮತ್ತು ಆಲಮಟ್ಟಿ ಎಸ್‌.ವಿ.ವಿ.ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅವರಿಗೆ ರಾಜ್ಯ ಮಟ್ಟದ ಕಾಯಕಯೋಗಿ 2026 ಪ್ರಶಸ್ತಿ ಲಭಿಸಿದ ಪ್ರಯುಕ್ತ ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕರಾದ ಜಿ.ಡಿ.ದಾಸರ ಸಿಹಿ ತಿನಿಸುವ ಮೂಲಕ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು.