ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಟ್ಟಿಮನಿ ಕಥಿ ಹೇಳೂಣು ಸ್ಫರ್ಧೆ

 ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಟ್ಟಿಮನಿ ಕಥಿ ಹೇಳೂಣು ಸ್ಫರ್ಧೆ Kattimani Kathi telling competition at Shivananda Mahavidyalaya, Kagawada

ಲೋಕದರ್ಶನ ವರದಿ 

ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಟ್ಟಿಮನಿ ಕಥಿ ಹೇಳೂಣು ಸ್ಫರ್ಧೆ 


ಕಾಗವಾಡ 08: ಬಸವರಾಜ ಕಟ್ಟೀಮನಿ ಅವರು ಪ್ರಗತೀಶೀಲ ಸಾಹಿತ್ಯ ಕಂಡಂತಹ ಅಪರೂಪದ ಕಥೆಗಾರರಾಗಿದ್ದರು. ಅವರು ಪ್ರಗತೀಶೀಲ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದವರು ಎಂದು ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಡಿ. ಧಾಮಣ್ಣವರ ತಿಳಿಸಿದ್ದಾರೆ. 


ಅವರು ಸೋಮವಾರ ದಿ.06 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ, ಐಕ್ಯೂಎಸಿ ಅಡಿಯಲ್ಲಿ ಕರ್ನಾಟಕ ಸರ್ಕಾರದ ಬಸವರಾಜ ಕಟ್ಟೀಮನಿ ಪ್ರತಿಷ್ಟಾನದ ಸಹಯೋಗದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಟ್ಟಿಮನಿ ಕಥಿ ಹೇಳೂಣು ಸ್ಫರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಾಲೂಕ ಕಸಾಪದ ಸದಸ್ಯ ಪ್ರೊ. ಜೆ.ಕೆ. ಪಾಟೀಲ ಮಾತನಾಡಿ, ಕಟ್ಟಿಮನಿ ಅವರು ಸಮಾಜದಲ್ಲಿನ ಅನಿಷ್ಟಗಳನ್ನು ಹೋಗಲಾಡಿಸಲು ಶ್ರಮವಹಿಸಿದ್ದರು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಎಂ. ಜಕ್ಕಣ್ಣವರ ಮಾತನಾಡಿ, ಬಸವರಾಜ ಕಟ್ಟೀಮನಿ ಅವರು ತಮ್ಮ ಕಥೆಗಳಲ್ಲಿ ಅನ್ಯಾಯ, ದಬ್ಬಾಳಿಕೆ, ಅನಾಚಾರ, ಅತ್ಯಾಚಾರದ ಕುರಿತು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಟ್ಟೀಮನಿ ಅವರ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸ್ಫರ್ಧೆಯನ್ನು ಏರಿ​‍್ಡಸಲಾಗಿದೆ ಎಂದರು.  


ಸಸಿಗೆ ನೀರೇರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಅನನ್ಯ ಕುಲಕರ್ಣಿ ಪ್ರಥಮ, ಖುಷಿ ಐತವಾಡೆ ಮತ್ತು ಸಮೀಕ್ಷಾ ಸಲಗರೆ ದ್ವಿತೀಯ ಹಾಗೂ ಆರತಿ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು. ನಿರ್ಣಾಯಕರಾಗಿ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಅಮೋಲ ಪಾಟೀಲ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಎಸ್‌.ಎಸ್‌. ಫಡತಾರೆ ಕಾರ್ಯ ನಿರ್ವಹಿಸಿದರು. ಈ ವೇಳೆ ಪ್ರೊ. ಪಿ.ಎಸ್‌. ಪಟ್ಟಣಶೆಟ್ಟಿ, ಪ್ರೊ. ಮಂಜುನಾಥ ಲಮಾಣಿ, ಪ್ರೊ. ಆಯ್‌.ಎಸ್‌. ಜಮಾದಾರ, ಪ್ರೊ. ಎಸ್‌.ಎ. ಇನಾಮದಾರ, ಪ್ರೊ. ಎ.ಆರ್‌. ಅಳಗೊಂಡಿ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅನನ್ಯ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ. ಅಶೋಕ ಪಾಟೀಲ ಸ್ವಾಗತಿಸಿದರು.  ಬಿ.ಐ. ಜಗದಮನಿ ನಿರೂಪಿಸಿ, ವಂದಿಸಿದರು.