ಲೋಕದರ್ಶನ ವರದಿ
ಕೊಪ್ಪಳ 21: ಕಲ್ಯಾಣ ಕರ್ನಾಟಕ ಆರಾಧ್ಯ ದೇವತೆ ಎಂದೇ ಪ್ರಸಿದ್ಧಿ ಹೊಂದಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೇಮ್ಮ ದೇವಿಗೆ ಕಾರ್ತಿಕ ಮಾಸದ ಪ್ರಯುಕ್ತ ಹೂವಿನಿಂದ ಅಲಂಕಾರಗೊಳಿಸಿರುವುದು ವಿಶೇಷವಾದ ಸಂಗತಿ.
ಶ್ರೀ ಹುಲಿಗೇಮ್ಮ ದೇವಿ ಮೂತರ್ಿ ಸೇರಿದಂತೆ ಇಡೀ ದೇವಾಲಯದ ಒಳಾಂಗಣ, ಹೊರಾಂಗಣ, ದೇವಾಲಯ ಆವರಣದಲ್ಲಿ ವಿವಿಧ ತರಹ ಹೂಗಳಿಂದ ಅಲಂಕಾರ ಮಾಡಿರುವುದು ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಆಕಷರ್ಿಸುತ್ತಿದೆ.
ಪ್ರತಿ ವರ್ಷದಂತೆ ಕಾತರ್ಿಕ ಮಾಸದಲ್ಲಿ ದೇವಾಲಯದ ಗರ್ಭ ಗುಡಿ, ಮೂತರ್ಿ ಅಲಂಕಾರ ಹಾಗೂ ಪೂಜಾ ಸೇವೆಗಳು ಸಾಮಾನ್ಯವಾಗಿರುತ್ತಿದ್ದವು. ಆದರೆ, ಈ ಬಾರಿ ವಿವಿಧ ತರಹ ಬಣ್ಣಗಳ ಹೂಗಳಿಂದ ದೇವಾಲಯವನ್ನು ಅಲಂಕಾರಗೊಳಿಸಿರುವುದು ಈ ವರ್ಷ ವಿಶೇಷತೆಯಲ್ಲಿ ಒಂದಾಗಿದೆ ಎಂಬುವುದು ಸಮಿತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಚಂದ್ರಮೌಳಿಯವರ ಅಭಿಪ್ರಾಯವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಭಕ್ತನಾದ ನಾಗರಾಜ ಹೂಗಾರ ಹುಲಿಗೆಮ್ಮ ದೇವಾಲಯಕ್ಕೆ ಅಪರ್ಿಸಿದ ಹೂಗಳ ಭಕ್ತಿ ಸೇವೆಯಿಂದ ಈ ವಿಶೇಷ ಅಲಂಕಾರ ಈ ವರ್ಷ ಸಾಧ್ಯವಾಗಿದೆ. ಕಾತರ್ಿಕ ಮಾಸದ ದಿನ ಇಡೀ ದೇವಾಲಯ ಆವರಣ ಹೂಗಳ ಜೊತೆಗೆ ವಿವಿಧ ತರಹದ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸಿ ಶ್ರೀ ಹುಲಿಗೆಮ್ಮ ದೇವಾಲಯಕ್ಕೆ ಪ್ರತಿ ವರ್ಷ ಕಾರ್ತಿಕ ಮಾಸದ ವೇಳೆ ವಿವಿಧ ರಾಜ್ಯ ಹಾಗೂ ಸುತ್ತ-ಮುತ್ತಲಿನ ಜಿಲ್ಲೆಗಳಿಂದ ಬಂದಂತಹ ಭಕ್ತರನ್ನು ಹೆಚ್ಚು-ಹೆಚ್ಚು ಆಕರ್ಷಿಸುತ್ತಿದೆ. ತುಂಗಭದ್ರೆ ಮೈದುಂಬಿ ಹರಿಯುವ ಜುಳು-ಜುಳು ಸಂಗೀತ ನಾದಕ್ಕೆ ಹುಲಿಗೆಮ್ಮ ದೇವಿಯ ಹೂವಿನ ಅಲಂಕಾರ ಸಾವ್ರಜನಿಕರ ಆಕಷ್ರಿಸಣೆಯಾಗಿ ತಂಡೊಪ ತಂಡವಾಗಿ ಮಹಾತಾಯಿಯ ದರ್ಶನ ಕ್ಕೆ ಬರುತ್ತಿದ್ದಾರೆ. ಇತ್ತೀಚಿನ ವರುಷಗಳಲ್ಲಿ ಹೂವಿನ ಅಲಂಕಾರದ ಹುಲಿಗೆಮ್ಮ ದೇವಿಯ ವೈಭವ ನೋಡಲು ಎರಡು ಕಣ್ಣು ಸಾಲದು ಎಂದು ದೇವಿ ದರ್ಶನಕ್ಕೆ ಬಂದು ಬೆಂಗಳೂರಿನ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಅಧ್ಯಕ್ಷರಾದ ಸುಶೀಲ.ಎಂ.ಎಸ್. ಅವರು ಹೇಳಿದರು.