ಕಾಶ್ಮೀರ; ಭದ್ರತಾ ಪಡೆಗಳ ಕಾರ್ಯಾಚರಣೆ ಇಬ್ಬರು ಉಗ್ರರು ಹತ್ಯೆ

ಬಂಡೀಪೋರಾ, ನ 11 :     ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ  ಮುಂಜಾನೆ   ಭದ್ರತಾ ಪಡೆಗಳು  ಹಾಗೂ ಉಗ್ರರ ನಡುವೆ  ಮತ್ತೊಂದು  ಗುಂಡಿನ ಕಾಳಗ  ನಡೆದಿರುವ  ಬಗ್ಗೆ ವರದಿಯಾಗಿದೆ.     ಈ  ಗುಂಡಿನ ಕಾಳಗದಲ್ಲಿ  ಇಬ್ಬರು  ಪಾಕಿಸ್ತಾನ ಪ್ರಚೋದಿತ ಉಗ್ರರನ್ನು ಹತ್ಯೆ ನಡೆಸಲಾಗಿದೆ.    ಬಂಡಿಪೋರಾ ಜಿಲ್ಲೆಯಲ್ಲಿ ಪಾಕಿಸ್ತಾನ   ಪ್ರಚೋದಿತ  ಉಗ್ರರು  ಅಡಗಿದ್ದಾರೆ ಎಂಬ  ಖಚಿತ  ಮಾಹಿತಿ  ಅನುಸರಿಸಿ, ಜಮ್ಮು -ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳ  ಜಂಟಿ  ತಂಡ  ಸೋಮವಾರ ಬೆಳಿಗ್ಗೆ  ಸ್ಥಳಕ್ಕೆ  ತೆರಳಿ  ಶೋಧನಾ ಕಾರ್ಯಚರಣೆ ಆರಂಭಿಸಿದತು.     ಅಡಗಿಕೊಂಡಿದ್ದ     ಉಗ್ರರು    ಏಕಾಎಕಿ ಭದ್ರತಾ ಪಡೆಗಳ  ಮೇಲೆ  ಗುಂಡಿನ ದಾಳಿ ನಡೆಸಿದರು.   ಪ್ರತಿಯಾಗಿ  ನಡೆಸಿದ  ಗುಂಡಿನ ದಾಳಿಯಲ್ಲಿ    ಇಬ್ಬರು ಉಗ್ರರು  ಸಾವನ್ನಪ್ಪಿದ್ದಾರೆ.   ಉಗ್ರರ ಬಳಿಯಿದ್ದ  ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಹತ್ಯೆಗೀಡಾದ  ಉಗ್ರರು   ಯಾವ  ಭಯೋತ್ಪಾದಕ ಸಂಘಟನೆಗೆ  ಸೇರಿದವರು  ಎಂಬುದು ಇನ್ನೂ ದೃಢಪಡಿಸಬೇಕಿದೆ.