ಅಧ್ಯಕ್ಷರಾಗಿ ಕಾಶೀಮಪಟೇಲ, ಉಪಾಧ್ಯಕ್ಷರಾಗಿ ಕಾಶಿನಾಥ ದೇಸಾಯಿ ಆಯ್ಕೆ
Kashima Patel elected as President, Kashinath Desai as Vice President
ಅಧ್ಯಕ್ಷರಾಗಿ ಕಾಶೀಮಪಟೇಲ, ಉಪಾಧ್ಯಕ್ಷರಾಗಿ ಕಾಶಿನಾಥ ದೇಸಾಯಿ ಆಯ್ಕೆ
ತಾಳಿಕೋಟಿ: ತಾಲೂಕಿನ ಹರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಶೀಮಪಟೇಲ ಹುಸೇನಪಟೇಲ ಪಾಟೀಲ, ಉಪಾಧ್ಯಕ್ಷರಾಗಿ ಕಾಶಿನಾಥ ಬಸನಗೌಡ ದೇಸಾಯಿ ಆಯ್ಕೆಯಾದರು. ಶುಕ್ರವಾರ ಸಂಘದ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಶೀಮಪಟೇಲ ಹುಸೇನ ಪಟೇಲ ಪಾಟೀಲ ಹಾಗೂ ನಿಂಗಪ್ಪ ಶಿವಪ್ಪ ನಾಗೂರ ನಾಮಪತ್ರ ಸಲ್ಲಿಸಿದ್ದರು. ಸಂಘದ ಒಟ್ಟು 12 ನಿರ್ದೇಶಕರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಕಾಶೀಮಪಟೇಲ ಪಾಟೀಲ ಇವರಿಗೆ 8 ಮತಗಳು ಹಾಗೂ ನಿಂಗಪ್ಪ ನಾಗೂರ ಇವರಿಗೆ 4 ಮತಗಳು ಬಂದವು. 8 ಮತಗಳನ್ನು ಪಡೆದ ಕಾಶೀಮಪಟೇಲ ಪಾಟೀಲ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಶಿನಾಥ ಬಸನಗೌಡ ದೇಸಾಯಿ ಅವರ ಒಂದೇ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಅವರು ಘೋಷಿಸಿದರು. ಸಂಘದ ಕಾರ್ಯನಿರ್ವಣಾಧಿಕಾರಿ ಕೆ.ಡಿ.ಪಾಟೀಲ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಕಾಶೀಮ ಪಟೇಲ ಪಾಟೀಲ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ ಅವರೆಲ್ಲರ ಸಹಕಾರ ಪಡೆದುಕೊಂಡು ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು.
ಚುನಾವಣಾ ಫಲಿತಾಂಶದ ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ನಿರ್ದೇಶಕರಾದ ಹಣಮಂತ್ರಾಯ ಹೂಗಾರ, ನಾಗಮ್ಮ ಹೂಕ್ರಾಣಿ(ಹಾದಿಮನಿ), ಅಲ್ಲಿಪಟೇಲ ಮಕಾಶಿ, ದುರ್ಗಪ್ಪ ದೊಡಮನಿ, ಮಹಾದೇವಪ್ಪಗೌಡ ಪಾಟೀಲ, ಮುಖಂಡರಾದ ಶಿವರಾಜ ಗುಂಡಕನಾಳ (ನಾಗೂರ), ಮಹಮ್ಮದಪಟೇಲ ಬಿರಾದಾರ,ಸಾಹೇಬಗೌಡ ಬಿರಾದಾರ,ಸಂಗನಗೌಡ ದೇಸಾಯಿ, ರಾಜಾಪಟೇಲ ಬಿರಾದಾರ, ಹೈದರಾಲಿ ಬಿರಾದಾರ(ಹಗರಗುಂಡ), ನಿರಂಜನಶಾ ಮಕಾನದಾರ, ಮೈನು ಮಕಾಶಿ, ಫಯಾಜ್ ಉತ್ನಾಳ, ಶಿವಪ್ಪ ಗೋನಾಳ ಹಾಗೂ ಅಭಿಮಾನಿಗಳು ಇದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರಿ್ಡಸಲಾಗಿತ್ತು. ಪಿ.ಎಸ್.ಐ.ಜ್ಯೋತಿ ಖೋತ್ ಸ್ಥಳದಲ್ಲಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 