ಕಸಾಪ ವಿಜಯಪುರ ಅವರಿಂದ ರಮೇಶ ಬಿರಾದಾರಗೆ ಸನ್ಮಾನ
Kasapa Vijayapura felicitates Ramesh Biradar
ಚಡಚಣ 15: ರವಿವಾರ ದಿ.14ರಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ವಿವಿಧ ದತ್ತಿನಿಧಿ ಗೋಷ್ಠಿಯಲ್ಲಿ ಚಡಚಣ ತಾಲೂಕ ಕಾನಿಪ ಘಟಕದ ನೂತನ ಹಾಗೂ 2025-2028 ನೇ ಅವಧಿಗೆ ಎರಡೆನೇಬಾರಿ ಮರು ಆಯ್ಕೆಯಾದ ಅಧ್ಯಕ್ಷ ರಮೇಶ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಸುರೇಶ ಕಾಗಲಕರ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ಕಾನಿಪ ಘಟಕದ ನೂತನ ಅಧ್ಯಕ್ಷರಾದ ಬಸವನಬಾಗೇವಾಡಿಯ ರಾಜು ಗಣಾಚಾರಿ, ಮುದ್ದೇಬಿಹಾಳದ ಡಿ ಬಿ ವಡವಡಗಿ, ಇಂಡಿಯ ಅಬುಶಾಮ ಹವಾಲ್ದಾರ, ತಾಳಿಕೋಟಿಯ ಮೈಬೂಬಸುಬಾನಿ ಶಿರಸಗಿ, ನಿಡಗುಂದಿಯ ಬಸವರಾಜ ಹೆರಕಲ್, ತಿಕೋಟಾದ ಸಾತಲಿಂಗಯ್ಯ ಸಾಲಿಮಠ, ಕೊಲ್ಹಾರದ ಅರುಣಕುಮಾರ ಓರಸಂಗ, ಆಲಮೇಲದ ಅವಧೂತ ಬಂಡಗಾರ ಅವರಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎ.ಕಾಲೇಬಾಗ, ವಿಜಯಪುರದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ, ತಿಕೋಟಾ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಶರಣ ಚಿಂತಕಿ ಚೈತನ್ಯ ಮುದ್ದೇಬಿಹಾಳ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಶಿಧರ ಸಂಕಣ್ಣನವರ, ಭಾಗೀರಥಿ ಸಿಂಧೆ, ಆಶಾ ಬಿರಾದಾರ, ಶಶಿಕಲಾ ಬಿರಾದಾರ, ರಾಜಶೇಖರ ಡೋಣಜಮಠ, ಪರಶುರಾಮ ಚಲವಾದಿ, ಡಾ. ಜಾಫರ್ ಸಾಧೀಕ್, ಸಿದ್ದಾ ಬೀಳಗಿ, ಡಾ ಚಿರಂಜೀವಿ ಬಂಗಾ. ಮಹಾದೇವ ಮೋಪಗಾರ ಶ್ರೀಕಾಂತ ನಾಡಗೌಡ ಎಂ ಎ ವಾಲೀಕಾರ ಮುಂತಾದವರು ಉಪಸ್ಥಿತರಿದ್ದರು.
ದಿಪರತ್ನಶ್ರೀ ಮುದ್ದೇಹಹಾಳ ಪ್ರಾರ್ಥಿಸಿದರು.ವಿಜಯಪುರ ತಾಲೂಕಾ ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಸ್ವಾಗತಿಸಿ ಗೌರವಿಸಿದರು. ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಯಮನಪ್ಪ ನಿರೂಪಿಸಿದರು. ಶಿಕ್ಷಕ ಎಸ್.ಬಿ.ರೆಡ್ಡಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 