ಪ.ಪಂ ವತಿಯಿಂದ ಕಸ ಕಂಡ್ರೆ ಪೋಟೋ ಹಾಕಿ ಜಾಗೃತಿ: ಸುರೇಖಾ
Kasa Kandre Photo Hockey Awareness by P.P.M.: Surekha
ಪ.ಪಂ ವತಿಯಿಂದ ಕಸ ಕಂಡ್ರೆ ಪೋಟೋ ಹಾಕಿ ಜಾಗೃತಿ: ಸುರೇಖಾ
ದೇವರಹಿಪ್ಪರಗಿ 02: ಪಟ್ಟಣದ ಪ.ಪಂ ಒಂದಲ್ಲ ಒಂದು ರೀತಿಯಲ್ಲಿ ವಿನೂತನ ಅಭಿಯಾನ ಮಾಡುತ್ತ ಬಂದಿದೆ. ಈಗ ಕಸ ವಿಲೇವಾರಿಗಾಗಿ ಒಂದು ವಾಟ್ಸಪ್ ನಂಬರ್ ಮಾಡಿದ್ದು, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಕಂಡ್ರೆ ಸಾಕು, ಯಾರು ಬೇಕಾದ್ರೂ 6361645985/7760693139ಈ ನಂಬರಗೆ ಒಂದು ಪೋಟೋ ಹಾಕಿ ಲೊಕೇಶನ್ ಹಾಕಿದ್ರೆ ಸಾಕು, 24ಗಂಟೆ ಒಳಗೆ ಕಸ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳ ಆದೇಶದಂತೆ ಸಿದ್ಧತೆ ಮಾಡಿಕೊಂಡಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಹೇಳಿದರು.ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರದಂದು ಕಸ ಕಂಡರೆ ಫೋಟೋ ಹಾಕಿ ಜನ ಜಾಗೃತಿ ಜಾಥ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ದಿನನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಅನ್ನು ಬಳಸದೆ ಪರಿಸರ ಸ್ನೇಹಿ ಚೀಲ ವಸ್ತುಗಳನ್ನು ಬಳಸಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಿಬ್ಬಂದಿ ಜೊತೆ ಕೈ ಜೋಡಿಸುವ ಮೂಲಕ ಪಟ್ಟಣದ ಸೌಂದರ್ಯೀಕರಣಕ್ಕಾಗಿ ಸಹಕರಿಸಬೇಕು ಎಂದು ಹೇಳಿದರು.ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಅವರು ಮಾತನಾಡಿ, ಪಟ್ಟಣದ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಸಾರ್ವಜನಿಕರು ಎಲ್ಲಾದರೂ ಕಸ ಕಂಡರೆ ಫೋಟೋ ಹಾಕಿ 24 ಗಂಟೆಯೊಳಗೆ ಪ.ಪಂ ಕಾರ್ಮಿಕರು ಎಲ್ಲಾ ಕ್ಲೀನ್ ಮಾಡಿ ನಿಮಗೆ ಫೋಟೋ ಕಳಿಸುತ್ತಾರೆ. ಪಟ್ಟಣದ ಸ್ವಚ್ಛತೆಗೆ ಕಾರ್ಮಿಕರ ಜೊತೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ನಾಮನಿರ್ದೇಶಿತ ಸದಸ್ಯರಾದ ಸುನಿಲ್ ಕನಮಡಿ, ಹುಸೇನ ಕೊಕಟನೂರ, ಸಿಬ್ಬಂದಿಗಳಾದ ಮುತ್ತು ಹಿರೇಮಠ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 