ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕರವೇ ಕಾರ್ಯಕರ್ತರು ಶ್ರಮಪಡಬೇಕು - ಜ್ಞಾನಸುಂದರ
Karya activists should work hard for the all-round development of the village - Gyanasundara
ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕರವೇ ಕಾರ್ಯಕರ್ತರು ಶ್ರಮಪಡಬೇಕು - ಜ್ಞಾನಸುಂದರ
ಕೊಪ್ಪಳ 07 : ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕರವೇ ಕಾರ್ಯಕರ್ತರು ಶ್ರಮಪಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಕರೆನೀಡಿದರು. ಅವರು ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಹೊರತಟ್ನಾಳ ಗ್ರಾಮ ಶಾಖೆಯ ಪದಾಧಿಕಾರಿಗಳ ಆಯ್ಕೆ ಸಭೆಯ ನೇತೃತ್ವವಹಿಸಿ ಮಾತನಾಡಿದರು.ಕನ್ನಡ ನಾಡು ನುಡಿ, ನೆಲ ಜಲ, ಗಡಿ ಬಾಷೆಯ ಸಂಸ್ಕೃತಿ ಜೋತೆಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕಾಗಿ ಜನಪರ ಹೋರಾಟವನ್ನು ರೂಪಿಸಿ ಪರಿಹಾರ ಕಂಡುಕೊಳ್ಳಬೇಕು. ಹಳ್ಳಿ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾದಂತೆ ಆ ನಿಟ್ಟಿನಲ್ಲಿ ನೂತನವಾಗಿ ನೇಮಕವಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು.ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ ವಹಿಸಿದ್ದರು.
ಹೊರತಟ್ನಾಳ ಗ್ರಾಮ ಶಾಖೆಯ ನೂತನ ಅಧ್ಯಕ್ಷರಾಗಿ ಆನಂದ ಗೌಡರ, ಉಪಾಧ್ಯಕ್ಷರಾಗಿ ಗುರುರಾಜ ಅಂಗಡಿ, ಮುತ್ತಣ್ಣ ಕುಟುಗನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಭೀಮಪ್ಪ ಕುಟಗನಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಮುತ್ತಣ್ಣ ಅರಕೇರಿ, ಅಮರೇಶ ಕಿಟಗೇರಿ, ಕಾರ್ಯದರ್ಶಿಯಾಗಿ ಈರಣ್ಣ ಓಜನಳ್ಳಿ, ಹನುಮಪ್ಪ ಕಿಟಗೇರಿ, ಖಜಾಂಚಿಯಾಗಿ ಗವಿಸಿದ್ದಪ್ಪ ಕೊಪ್ಪಳ ಅವರು ನೇಮಕವಾದರು. ನೂತನ ಪದಾಧಿಕಾರಿಗಳಿಗೆ ಶಾಲು ಮತ್ತು ಕನ್ನಡದ ಬಾವೂಟ ನೀಡುವ ಮುಖಾಂತರ ಸಂಘಟನೆಗೆ ಸ್ವಾಗತಿಸಲಾಯಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 