ಕಾರವಾರ: 19 ಮತ್ತು 20 ರಂದು ಕೌಶಲ್ಯ ತರಬೇತಿ, ಬೃಹತ್ ಉದ್ಯೋಗ ಮೇಳ

ಕಾರವಾರ 16 : ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರತಿಭಾವಂತ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ದೃಷ್ಠಿಯಿಂದ ನಗರದ ಸೆಂಟ್ ಮೈಕಲ್ ಶಾಲಾ ಆವರಣದಲ್ಲಿ ಜ.19 ಮತ್ತು 20 ರಂದು  ಕೌಶಲ್ಯ ತರಬೇತಿ ಮತ್ತು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಹೇಳಿದರು.

ನಗರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಶಾಸಕಿ ರೂಪಾಲಿ ನಾಯ್ಕ ಅವರ ನೇತ್ರತ್ವದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳಕ್ಕೆ ಆನ್ಲೈನ್ ಮೂಲಕ ದಾಖಲೆಯ ಅಭ್ಯಥರ್ಿಗಳು ಹೆಸರು ನೊಂದಣಿ ಮಾಡಿಸಿಕೊಂಡಿದ್ದಾರೆ. ಹೆಸರು ನೊಂದಣಿಗೆ ಜ.15 ಕೊನೆಯ ದಿನವಾಗಿತ್ತಾದರೂ ಜ.18 ಕ್ಕೆ ಮುಂದುವರಿಸಲಾಗಿದೆ. ಅಲ್ಲದೇ ಉದ್ಯೋಗ ಮೇಳಕ್ಕೆ ಬರುವ ಹೆಸರು ನೊಂದಣಿ ಮಾಡದ ಅಭ್ಯಥರ್ಿಗಳನ್ನು ಸ್ಥಳದಲ್ಲಿಯೇ ನೊಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದರು.

ಇನ್ಸಿಗ್ನೇಯಾ ಇವೆಂಟ್ನ ಮುಂದಾಳತ್ವ:

ಉದ್ಯೋಗ ಮೇಳದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇನ್ಸಿಗ್ನೇಯಾ ಇವೆಂಟ್ನ ಮುಖ್ಯಸ್ಥ ರಾಜೇಶ ನಾಯ್ಕ ಮಾತನಾಡಿ,ಉದ್ಯೋಗ ಮೇಳದ ಸಂಪೂರ್ಣ ಖಚರ್ು-ವೆಚ್ಚಗಳನ್ನು ಶಾಸಕಿ ರೂಪಾಲಿ ನಾಯ್ಕ ಭರಿಸಲಿದ್ದಾರೆ. ಅಭ್ಯಥರ್ಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ.ಈಗಾಗಲೇ ಆನ್ಲೈನ್ ಮೂಲಕ 8000 ಅಭ್ಯಥರ್ಿಗಳು ಉದ್ಯೋಗಕ್ಕಾಗಿ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಉದ್ಯೋಗ ಮೇಳವು ಎರಡು ಹಂತಗಳಲ್ಲಿ ನಡೆಯಲಿದೆ. ಪ್ರಥಮ ಹಂತದಲ್ಲಿ ಜ.19 ರಂದು ಅಭ್ಯಥರ್ಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು.ಇದಕ್ಕೋಸ್ಕರ ನಾಲ್ವರು ತರಬೇತಿದಾರರು ಆಗಮಿಸಲಿದ್ದಾರೆ.ತರಬೇತಿ ಸಂದರ್ಭದಲ್ಲಿ ಸಂದರ್ಶನ ಎದುರಿಸುವ ಬಗೆ,ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ವೃತ್ತಿ ಮಾರ್ಗದರ್ಶನ,ಮೌಲ್ಯಮಾಪನ ನಡೆಯಲಿದೆ ಎಂದರು.

ದ್ವಿತೀಯ ಹಂತದಲ್ಲಿ ನೇರ ಉದ್ಯೋಗ ಸಂದರ್ಶನ, ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಖಾತ್ರಿ ಪತ್ರ ವಿತರಿಸಲಾಗುವುದು. ಈ ಸಂದರ್ಭದಲ್ಲಿ ಬೆಂಗಳೂರಿನ ಇನ್ಫೋಸಿಸ್ ಸೇರಿದಂತೆ, ಹುಬ್ಬಳ್ಳಿ, ಬೆಳಗಾವಿ, ಗೋವಾ ಮುಂತಾದೆಡೆಯಿಂದ 100 ಕ್ಕೂ ಹೆಚ್ಚಿನ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಮೇಳದಲ್ಲಿ ಭಾಗವಹಿಸುವ ಅಭ್ಯಥರ್ಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಶಾಲೆ ಬಿಟ್ಟವರು, ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಜೆಓಸಿ, ಪದವೀಧರರು, ಸ್ನಾತಕೋತ್ತರ ಪದವೀಧರರು ಉದ್ಯೋಗಕ್ಕಾಗಿ ಮೇಳದಲ್ಲಿ ಭಾಗವಹಿಸಬಹುದು. ಒಟ್ಟಾರೆ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಸೂಕ್ತ ಉದ್ಯೋಗ ಸಿಗದೇ ನಿರಾಶರಾಗಿ ವಾಪಸ್ ಬರುವ ಅಭ್ಯಥರ್ಿಗಳಿಗೆ ಅನುಕೂಲ ಮಾಡಿಕೊಡುವ ವಿನೂತನ ಪ್ರಯತ್ನ ಇದಾಗಿದೆ ಎಂದರು.

ಪರಿಸರವಾದಿಗಳನ್ನು ತರಾಟೆಗೆ ತೆಗೆದುಕೊಂಡರು :

ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗಕ್ಕೆ ವಿರೋಧ ವ್ಯಕ್ತ ಮಾಡಿದ ನಾಲ್ವರು ಪರಿಸರವಾದಿಗಳ ವಿರುದ್ಧ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೆಲ ಎನ್ಜಿಓಗಳನ್ನು ಕಟ್ಟಕೊಂಡು ಜಿಲ್ಲೆಯ ಕರಾವಳಿ ಭಾಗದ ಅಭಿವೃದ್ಧಿಗೆ ಕೆಲವರು ಅಡ್ಡಿಯಾಗುತ್ತಿದ್ದಾರೆ. ಇವರ ಆದಾಯ, ಇವರ ಹಣದ ಮೂಲ ಕುರಿತು ಇನ್ಕಂ ಟ್ಯಾಕ್ಸ ಮತ್ತು ಇಡಿ ಇಲಾಖೆಗಳಿಗೆ ದೂರು ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ. ರಾಷ್ಟ್ರೀಯ ಭದ್ರತಾ ಪಡೆ ವಿಭಾಗದಿಂದ ಇವರ ಕುರಿತು ತನಿಖೆ ಮಾಡಬೇಕಾದ ಸಂದರ್ಭ ಬರಬಹುದು. ಐಎನ್ಎಸ್ ಕದಂಬ ನೌಕಾನೆಲೆಗೆ ರೈಲ್ವೆ ಸಂಪರ್ಕ ಮಾಡಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪರಿಸರವಾದಿಗಳಿಗೆ ಏನು ಗೊತ್ತಿದೆ. ಅವರು ಬಾಯ್ಮುಚ್ಚಿ ಕುಳಿತುಕೊಳ್ಳಲಿ ಎಂದು ರಾಜೇಶ್ ನಾಯಕ್ ಕಟುವಾಗಿ ಎಚ್ಚರಿಕೆ ನೀಡಿದರು. 

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರು ಚಕಾರವೆತ್ತುತ್ತಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಬಿಜೆಪಿ ಮಹಾನ್ ನಾಯಕ ಮಾಜಿ ಪ್ರಧಾನಿ ದಿ.ಅಟಲ್ಬಿಹಾರಿ ವಾಜಪೇಯಿಯವರು ಶಂಕು ಸ್ಥಾಪನೆ ಹಾಕಿದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಬಿಜೆಪಿ ಬದ್ಧವಾಗಿದೆ. ಪರಿಸರವಾದ ಬೆದರು ಬೊಂಬೆ ಇಟ್ಟುಕೊಂಡು ನಾಗೇಶ ಹೆಗಡೆ,ಗಿರಿಧರ್ ಕುಲಕಣರ್ಿ,ಅನಂತಹೆಗಡೆ ಆಶೀಸರ ನಂತಹ ಕೆಲ ಢೋಂಗಿ ಪರಿಸರವಾದಿಗಳು ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ರೈಲ್ವೆ ಬಗ್ಗೆ ವಿವಿಧ ಸಂಘಟನೆಗಳು ಜ.17 ರಂದು ನಡೆಸುವ ಪಕ್ಷಾತೀತ ಹೋರಾಟಕ್ಕೆ ಬೆಂಬಲ ಇದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ರಾಜೇಶ ನಾಯಕ ಇದೇ ವೇಳೆ ಪ್ರತಿಕ್ರಿಯಿಸಿದರು. 

ಅಂಕೋಲಾ ಪೋಸ್ಟ ಆಫೀಸ್ನಲ್ಲಿ :

ಜಿಲ್ಲಾ ಕೇಂದ್ರ ಕಾರವಾರದಲ್ಲಿ  ಪಾಸ್ಪೋಟರ್್ ಕಚೇರಿ ತೆರೆಯುವ ಉದ್ದೇಶ ಮೊದಲಿತ್ತು. ಆದರೆ ಕಾರಣಾಂತರಗಳಿಂದ ಜನರ ಅನುಕೂಲಕ್ಕಾಗಿ ಅಂಕೋಲಾದ ಹೆಡ್ಪೋಸ್ಟ್ ಆಫೀಸಿನಲ್ಲಿ ಪಾಸ್ಪೋಟರ್್ ಕಚೇರಿ ತೆರೆಯಲು ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಪ್ರಯತ್ನದಿಂದ ಸಾಧ್ಯವಾಗಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ  ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಕಿಶನ್ ಕಾಂಬಳೆ, ನಗರ ಅಧ್ಯಕ್ಷ ಮನೋಜ್ ಭಟ್ಟ, ಗ್ರಾಮೀಣ ಅಧ್ಯಕ್ಷ ಮಾರುತಿ ನಾಯ್ಕ, ಗಿರೀಶ್ ನಾಯ್ಕ,ಚೆಂದನ್ ಸಾವಂತ್, ಗುರುಪ್ರಸಾದ್, ಪ್ರತಿಮಾ ಲೊಟ್ಲೇಕರ ಇದ್ದರು.