ಮುಂದಿನ ಆಯವ್ಯಯದಲ್ಲಿ ಕಾರವಾರಕ್ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮುಂಜೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನಾಗರಾಜ್ ಹರಪನಹಳ್ಳಿ
Karwar will get a super specialty hospital in the next budget: Chief Minister Siddaramaiah Nagaraj H
ಕಾರವಾರ 22 : ಕಾರವಾರಕ್ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮುಂದಿನ ಆಯವ್ಯಯದಲ್ಲಿ ಮುಂಜೂರು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕಾರವಾರದಲ್ಲಿ ರವಿವಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ ಆದ ಕಾರಣ ಜನರ ಅಲೆದಾಟ ತಪ್ಪಿಲಿದೆ ಎಂದರು . 450 ಹಾಸಿಗೆಗಳ ಜಿಲ್ಲಾ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ದೀಪಬೆಳಗಿ ಉದ್ಘಾಟಿಸಿ,ಮಾತನಾಡಿದರು. ಬಡವರು ಸರ್ಕಾರಿ ಆಸ್ಪತ್ರೆ ಗಳನ್ನು ನಂಬಿದ್ದಾರೆ. ಶ್ರೀಮಂತರು ದೊಡ್ಡ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಬಡವರು ಸರ್ಕಾರಿ ಆಸ್ಪತ್ರೆ ನಂಬಿದ್ದಾರೆ ಎಂದರು.
ಜಿಲ್ಲಾ ಮಲ್ಟಿ ಸ್ಪೆಶಾಲಿಟಿ ಮೆಡಿಕಲ್ ಕಾಲೇಜಿನ ಕಟ್ಟಡಕ್ಕೆ 200 ಕೋಟಿ ರೂ. ವೆಚ್ಚವಾಗಿದೆ. 2016ರಲ್ಲಿ ನಾನೇ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿದ್ದೆ. ಅದು ಈಗ ಕಾರ್ಯ ನಿರ್ವಹಿಸುತ್ತಿದೆ ಎಂದರು. ಬಿಜಾಪುರದಲ್ಲಿ ಸಹ ಮೆಡಿಕಲ್ ಕಾಲೇಜು ಮಾಡುತ್ತೇವೆ . ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸುವುದು ಸರ್ಕಾರದ ಒಂದು ನೀತಿಯಾಗಿದೆ ಎಂದರು. ಅಭಿವೃದ್ಧಿ ಕೆಲಸ ಆಗುತ್ತಿವೆ. ಇತ್ತೀಚಿಗೆ ಬಿಜೆಪಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಆರೋಪ ಕಡಿಮೆಯಾಗಿದೆ. ಸರಕಾರದಲ್ಲಿ ಹಣ ಇದ್ದ ಕಾರಣ ಕಾರವಾರದಲ್ಲಿ ಆಸ್ಪತ್ರೆ ಕಟ್ಟಡ, ಗಂಗಾವಳಿ ಸೇತುವೆ ಉದ್ಘಾಟನೆ ಆದದ್ದು ಎಂದರು.
ಗ್ಯಾರಂಟಿ ಗಳಿಗೆ ಹಣ ಖರ್ಚಾಗಿದೆ. ಅಭಿವೃದ್ಧಿ ಗೆ ಹಣ ಇಲ್ಲ ಎಂಬ ಆರೋಪ ಸುಳ್ಳಾಗಿಸಿದ್ದೇವೆ .ಉಳಗಾ ಕೆರವಡಿ ಸೇತುವೆಗೆ ಸಹ ಅನುದಾನ ಕೊಡುವುದಾಗಿ ಹೇಳಿದರು. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಸೌಲಭ್ಯ ಪಡೆಯಿರಿ ಎಂದರು. ಹಿರಿಯ ಶಾಸಕ ಆರಿ್ವ.ದೇಶಪಾಂಡೆ ಮಾತನಾಡಿ, 2017 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿದ್ದರು. ಈಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳೆದಿದೆ. ಕಾರವಾರ, ಹಳಿಯಾಳ, ಭಟ್ಕಳದಲ್ಲಿ ಎಂಜಿನಿಯರಿಂಗ್ ಕಾಲೇಜು ಗಳಿವೆ. ಶೈಕ್ಷಣಿಕ ಸೌಲಭ್ಯ ಜಿಲ್ಲೆಯಲ್ಲಿ ಇದೆ ಎಂದರು. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದರು.
ಬಜೆಟ್ ನಲ್ಲಿ ಸೇರಿಸಿ ಎಂದು ದೇಶಪಾಂಡೆ ವಿನಯಪೂರ್ವಕವಾಗಿ ಒತ್ತಾಯಿಸಿದರು. ಕುಣಬಿ ಜನಾಂಗ ಎಸ್ಟಿಗೆ ಸೇರಿಸಬೇಕೆಂಬ ಪ್ರಯತ್ನ ಸಾಗಿದೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ರಾಜ್ಯಕ್ಕೆ ದೊಡ್ಡ ಶಕ್ತಿಯನ್ನು ಕಾರವಾರ ನೀಡಿದ್ದೀರಿ. ಮಾಡಿದ ಕೆಲಸ ಸಾಕ್ಷಿಯಾಗಲಿವೆ. ಕಟ್ಟಡದಷ್ಟೇ ನಂಬಿಕೆ ಮುಖ್ಯ ಎಂದರು. 36 ವರ್ಷದಿಂದ ರಾಜಕೀಯದಲ್ಲಿದ್ದೇನೆ . ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದರು . ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಾರಣ. 13 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ಮೆಡಿಕಲ್ ಓದುತ್ತಿದ್ದೀರಿ.
ಮಂಗಳೂರು 14 ಮೆಡಿಕಲ್ ಕಾಲೇಜು ಇವೆ. ದೇಶದ ಯಾವ ರಾಜ್ಯದಲ್ಲಿ ಇಲ್ಲದಷ್ಟು ಮೆಡಿಕಲ್ ಕಾಲೇಜ್ ಕರ್ನಾಟಕದಲ್ಲಿ ಇವೆ. ನಾವು ದೇಶದ ,ಹೊರ ದೇಶದ ಆರೋಗ್ಯ ರಾಯಭಾರಿಗಳು ಎಂದರು. 1.11 ಕೋಟಿ ಜನರಿಗೆ ಭೂ ದಾಖಲೆ ಕೊಟ್ಟಿದ್ದೇವೆ ಎಂದರು. ಇದು ಸರ್ಕಾರದ ಕಾಂಗ್ರೆಸ್ ಸಾಧನೆ ಎಂದರು. ದುಡ್ಡು ಬ್ಲಡ್ಡು ಸರ್ಕ್ಯುಲೇಟ್ ಆಗಬೇಕು ಎಂದು ಸಾಯಿಬಾಬಾ ಮಾತನ್ನು ಡಿಕೆಶಿ ನೆನಪಿಸಿಕೊಂಡರು . ನಮ್ಮನ್ನು ಟೀಕೆ ಮಾಡಿದ ಬಿಜೆಪಿ ನಮ್ಮ ಗ್ಯಾರಂಟಿ ಅನುಕರಿಸಿದ್ದಾರೆ. ಹೆಬ್ಬಾರ್ ನಮಗೆ ,ನಮ್ಮ ಸರ್ಕಾರಕ್ಕೆ ಸಿಕ್ಕ ಗಿಫ್ಟ್ ಎಂದರು. 2000 ಕೋಟಿ ಅನುದಾನ ಉತ್ತರ ಕನ್ನಡ ಜಿಲ್ಲೆಗೆ ಹರಿದಿದೆ ಎಂದರು.
ಆರೋಗ್ಯ ಸೌಲಭ್ಯ ಹತ್ತನೇ ಗ್ಯಾರಂಟಿ ಆಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಣ್ಣಿಸಿದರು. ಬಿಜೆಪಿಗೆ ಸುಳ್ಳು ಹೇಳುವುದೊಂದೇ ಕೆಲಸ ಎಂದು ಟೀಕಿಸಿದರು. ಈ ಬಜೆಟ್ ನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಹೊನ್ನಾವರ ,ಶಿರಸಿಗೆ ಸಹ ಬರುವ ದಿನಗಳಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕೊಡಿ ಎಂದು ಮುಖ್ಯಮಂತ್ರಿ ಗಳಲ್ಲಿ ವಿನಂತಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ , ಮಲ್ಟಿ ಸ್ಪೆಶಾಲಿಟಿ ಮಾಡಲು 20 ಕೋಟಿ ಮೊತ್ತದ ಯಂತ್ರೋಪಕರಣ ಖರೀದಿಗೆ ಹಣ ನೀಡಲಾಗಿದೆ.
ಕ್ಯಾನ್ಸರ್ ಘಟಕ ಇನ್ನೆರಡು ತಿಂಗಳಲ್ಲಿ ಕೆಲಸ ಮಾಡಲಿದೆ. ಬಡವರ ಮಕ್ಕಳು ಡಾಕ್ಟರ್ ಆಗಬೇಕು ಎಂದು ಸರ್ಕಾರಿ ಮೆಡಿಕಲ್ ಕಾಲೇಜು ಮಾಡಿದ್ದೇವೆ. ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಗಳಿವೆ. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು, ಟ್ರಾಮಸೆಂಟರ್ , ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಲ್ಟಿ ಸ್ಪೆಶಾಲಿಟಿ ಮಾಡುವುದು ರಾಜ್ಯ ಸರ್ಕಾರದ ನೀತಿ ಎಂದು ಸಚಿವ ಶರಣ ಪ್ರಕಾಶ್ ಹೇಳಿದರು . ಸರ್ಕಾರಿ ಮೆಡಿಕಲ್ ಕಾಲೇಜು ನಿಂದ ಸಾಮಾನ್ಯ ಜನರಿಗೆ ಅನುಕೂಲ ಎಂಬುದು ಸಾಬೀತಾಗಿದೆ ಎಂದರು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ಸ್ವಾಗತಿಸಿದರು. ಕಾರವಾರ ಮೆಡಿಕಲ್ ಕಾಲೇಜು ಡೀನ್, ನಿರ್ದೇಶಕಿ ಡಾ. ಪೂರ್ಣಿಮಾ,ಆರೋಗ್ಯ ಇಲಾಖೆಯ ಕಮಿಷನ್ ಮೊಹೀಸೀನ್, ಕಾರ್ಯದರ್ಶಿ ಸುಜಾತ ರಾಥೋಡ್, ಸಿಇಒ ದೀಲೀಶ್ ಶಶಿ ಮುಂತಾದವರು ಉಪಸ್ಥಿತರಿದ್ದರು.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 