ಕೋರವಾರದಲ್ಲಿ 20ಎಕರೆ 8ಗಂಟೆಗಳಲ್ಲಿ ಕುಂಟೆ ಹೊಡೆದು ದಾಖಲೆ ನಿರ್ಮಿಸಿದ ಜೋಡಿತ್ತುಗಳು
Karwar news- 18-07
ದೇವರಹಿಪ್ಪರಗಿ 18 : ಮಾನವ ದೈಹಿಕವಾಗಿ ಸಬಲನಾಗಿ ಎಲ್ಲ ರೀತಿಯಲ್ಲಿ ಮಾನಸಿಕ ಸಾಮರ್ಥ್ಯವನ್ನು ಹೊಂದಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಆದರೆ ಪ್ರಾಣಿಗಳ ಮಾತ್ರ ತಮ್ಮ ಶಕ್ತಿ ತೋರುವಲ್ಲಿ ಎಂದೂ?ಹಿಂದೆ ಬಿದ್ದಿಲ್ಲ.ಅದಕ್ಕೆ ಪ್ರತ್ಯಕ್ಷ ಸಾಕ್ಷಿ ತಾಲ್ಲೂಕಿನ ಕೋರವಾರ ಗ್ರಾಮದ ಅಶೋಕ ನಾಯಕಲ್ ಅವರು ಶುಕ್ರವಾರ ತಮ್ಮ ಜೋಡಿ ಎತ್ತುಗಳು 20 ಎಕರೆ ಜಮೀನು 8ತಾಸಿನಲ್ಲಿ ಹೋಗಿ ಮರಳಿದ್ದು ಗ್ರಾಮದಲ್ಲಿ ಹೊಸ ದಾಖಲೆ ಮಾಡಿ ಭಲೆ ಜೋಡಿ ಎತ್ತುಗಳು ಎನಿಸಿಕೊಂಡಿವೆ.
ಅಶೋಕ ನಾಯಕಲ್ ಎಂಬುವವರ ಎತ್ತುಗಳ ತಮ್ಮ ಹೊಲದಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 3 ಗಂಟೆಯಷ್ಟೊತ್ತಿಗೆ ನಿರಂತರ ಕುಂಟೆಗಳನ್ನು ಹೆಗಲೇರಿಸಿಕೊಂಡು 20 ಎಕರೆ ಭೂಮಿಯಲ್ಲಿ ಹೊಡೆದದ್ದು ನಿಜಕ್ಕೂ ತಾಲ್ಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜೋಡಿ ಎತ್ತುಗಳು ದಿನಕ್ಕೆ ಐದು ಎಕರೆ ಕುಂಟೆ ಹೊಡೆಯುತ್ತವೆ.ಹೆಚ್ಚೆಂದರೆ 8ರಿಂದ 10 ಎಕರೆ ಎಡೆ ಹೊಡೆಯಲು ಸಾಧ್ಯ. ಆದರೆ ಈ ಎತ್ತುಗಳು ಅದರ ದ್ವಿಗುಣ ರೀತಿಯಲ್ಲಿ ಅಂದರೆ 20 ಎಕರೆ ಜಮೀನಿನಲ್ಲಿ ಕುಂಟೆ ಹೊಡೆದು ಭಲೆ ಜೋಡಿ ಎನಿಸಿಕೊಂಡಿವೆ.ಎತ್ತುಗಳ ಸಾಧನೆ ಕಂಡು ಗ್ರಾಮಸ್ಥರು ಗುಲಾಲ ಎರಚಿ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡುವ ಮೂಲಕ ತೀವ್ರ ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 