ಕವಿ ಸನದಿಯ ಹೃದಯದಲ್ಲಿದ್ದ ಪಂಪ

* ನಾಗರಾಜ ಹರಪನಹಳ್ಳಿ 

ಕಾರವಾರ 31: ಕವಿ ಬಾಬಾ ಸಾಹೇಬ.ಎ.ಸನದಿ ಅವರು ಇನ್ನಿಲ್ಲ. ಅವರಿಗೆ 87 ವರ್ಷಗಳಾಗಿದ್ದವು. ಕುಮಟಾದಲ್ಲಿನ ಅವರ ಮನೆಯಲ್ಲಿ ಬೆಳಗಿನ 5.30ಕ್ಕೆ ಹೃದಯಾಘಾತದಿಂದ ಸನದಿ ಅವರು ಇಹಲೋಕ ತ್ಯಜಿಸಿದ್ದಾರೆ. ಪಂಪ ಪ್ರಶಸ್ತಿವಿಜೇತರಾಗಿದ್ದ ಸನದಿ ಅವರು ಮುಂಬೈ ಆಕಾಶವಾಣಿಯಿಂದ ನಿವೃತ್ತಿಯಾದ ನಂತರ ಅವರ ಪತ್ನಿಯ ಊರಾದ ಕುಮಟಾದಲ್ಲಿ ನೆಲಸಿದ್ದರು. ಕಳೆದ ಎರಡು ದಶಕ್ಕೂ ಹೆಚ್ಚು ಕಾಲದಿಂದ ಅವರು ಕುಮಟಾದ ಹೆರವಟ್ಟಾದಲ್ಲಿದ್ದರು. ಕವಿ ಸನದಿ ಅವರ ನಂಟು ಕಾರವಾರದ ಜೊತೆ  ಇತ್ತು. ಇದೇ ವರ್ಷದ 

ಫೆ.16 ರಂದು ಕಾರವಾರದಲ್ಲಿ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕಲ್ಲೂರು ಎಜುಕೇಶನ್ ಟ್ರಸ್ಟನ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಸಮಾರಂಭ. ಅಲ್ಲಿಂದ ಅವರು ಸ್ವಗ್ರಾಮ ಬೆಳಗಾವಿಯ ಸಿಂಧೊಳ್ಳಿಗೆ ತೆರಳಿದ್ದರು. 

ಕಾರವಾರದ ಆ ಸಮಾರಂಭದಲ್ಲಿ ಕವಿ ಬಾಬಾ ಸಾಹೇಬ ಸನದಿ ಅವರು ಮಾತುಗಳು ಹೀಗಿದ್ದವು...

``ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡ ನಮ್ಮನ್ನು ತಲೆತಗ್ಗಿಸುವಂತೆ ಮಾಡಿದೆ. ಮನುಷ್ಯರು ಇನ್ನಾದರೂ ದ್ವೇಷ ಬಿಟ್ಟು ಜನರನ್ನು ಪ್ರೀತಿಸುವುದನ್ನು ಕಲಿಯಬೇಕು. ಕನ್ನಡದ ಆದಿ ಕವಿ ಪಂಪ ಮನುಷ್ಯ ಕುಲಂ ತಾನೊಂದೇ ವಲಂ ಎಂದಿದ್ದಾನೆ. ಪಂಪನ ಒಂದು ವಾಕ್ಯ ಇಡೀ ವಿಶ್ವದ ಮೇಲಿನ ಮನುಷ್ಯರಿಗೆ ಸಂಬಂಧಿಸಿದ್ದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು  ಹೇಳಿದರು. ನಮ್ಮ ಕನ್ನಡ ನಾಡು ಇಡೀ ವಿಶ್ವದ ಮಾನವತೆಯ ಕುರಿತು ಮಾತನಾಡಿದೆ. ಇದನ್ನು ನಾವು ದಿನನಿತ್ಯ ನೆನಪಿಸಿಕೊಳ್ಳಬೇಕಿದೆ ಎಂದು ಕವಿ ಸನದಿ ಹೇಳಿದ್ದರು. 

ಮನುಷ್ಯರೆಲ್ಲಾ ಒಂದೇ ಒಂದೇ ಕನರ್ಾಟಕ ಒಂದೇ, ಭಾರತ ಒಂದೇ ಎಂದು ಕವಿ ಬೇಂದ್ರೆ ಹಾಡಿದ್ದಾರೆ. ಮನುಜ ಮತ, ವಿಶ್ವಪಥ ಎಂದು ವಿಶ್ವಕ್ಕೆ ಸಂದೇಶ ನೀಡಿದ ಸಂಸ್ಕೃತಿ ಕನ್ನಡದ್ದು, ಕನ್ನಡದ ಸಾಂಸ್ಕೃತಿಕ ನೆಲ ವಿಶ್ವದ ಮನುಷ್ಯರೆಲ್ಲಾ ಒಂದೇ ತಾಯಿ ಮಕ್ಕಳು ಎಂದು ಸಾರಿದೆ. ಇದನ್ನು ಉಳಿಸಿಕೊಳ್ಳಬೇಕಾದ ಸನ್ನಿವೇಶ ಈಗ ನಿಮರ್ಾಣವಾಗಿದೆ.''

ಪಂಪ ಪ್ರಶಸ್ತಿ ಘೋಷಣೆಯಾದ ಸಮಯ.

13.1.2017 ರಂದು ಕಾರವಾರ ತಾಲೂಕಿನ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಇಲ್ಲಿನ ಸಕರ್ಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಬಿ.ಎ.ಸನದಿ ಅವರ ಸಾಹಿತ್ಯದ ಹಾದಿ ಮೆಲುಕು ಹಾಕಲೆಂದು  ಅವರ ಜೊತೆ  ಸಂವಾದ ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದೆ. ಆ ಸಮಾರಂಭದಲ್ಲಿ ಸನದಿ ಅವರು ತಮ್ಮ ಬದುಕಿನ ಹಾದಿಯನ್ನು ವಿದ್ಯಾಥರ್ಿಗಳ ಜೊತೆ ತೆರೆದಿಟ್ಟಿದ್ದರು. ಆ ಸಮಾರಂಭದ ನೆನಪುಗಳನ್ನು ಅವರ ಮನದಾಳದ ಅಲೆಗಳು ಕೃತಿಯಲ್ಲಿ ಸನದಿ ಅವರು ಸ್ಮರಿಸಿಕೊಂಡಿದ್ದಾರೆ. ಆ ಸಮಾರಂಭದ ನೆನಪಿಗಾಗಿ ನಾನು ಮತ್ತು ವಾತರ್ಾಧಿಕಾರಿ ಶಫಿ ಸಾದುದ್ದೀನ್ ಅವರು ಸೇರಿ ಪಂಪನ ಹಾದಿಯಲ್ಲಿ ಕೃತಿ ತಂದೆವು. ಅದರಲ್ಲಿ ಸನದಿ ಅವರು ಸಂವಾದದಲ್ಲಿ ಹೊರ ಹೊಮ್ಮಿದ ಮಾತುಗಳನ್ನು ಹಾಗೂ ಅಂದು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದವರ ಕವಿತೆಗಳನ್ನು ಸೇರಿಸಲಾಗಿದೆ. 

ಕವಿ ಸನದಿ ಅವರ ತುಳಸೀಕಟ್ಟೆ ಕವಿತೆ ಸಹ ಪಂಪನ ಹಾದಿಯಲ್ಲಿ ಕೃತಿಯಲ್ಲಿದೆ. ಬೆಳಗಾವಿಯ ಸಿಂಧೊಳ್ಳಿ ಗ್ರಾಮದ ಸನದಿ ಅವರು ಕುಮಟಾಕ್ಕೆ ಬಂದು ನೆಲಸಲು ಕಾರಣ ಸಮುದ್ರ ದಂಡೆಯ ಶಾಂತ ವಾತಾವರಣದ ಊರು. ಮೇಲಾಗಿ ಅವರ ಪತ್ನಿಯ ಊರು. ಅವರಿಗೆ 86 ತುಂಬಿ, 87 ನೇ ವರ್ಷಕ್ಕೆ ಕಾಲಿಟ್ಟಿದ್ದರು. 2019 ಅಗಸ್ಟ ತಿಂಗಳು ಬಂದರೆ ಅವರು 87ನ್ನು ಪೂರ್ಣಗೊಳಿಸುತ್ತಿದ್ದರು.

2017 ರಿಂದ ಅವರು ಕಾರವಾರ, ಬನವಾಸಿ ಮತ್ತು 2019 ರಲ್ಲಿ ಕಾರವಾರದಲ್ಲಿ ಮಾತನಾಡಿದ ಸಮಾರಂಭಗಳಲ್ಲಿ ಪಂಪ ಅವರ ಹೃದಯವನ್ನು ತುಂಬಿ ಕೊಂಡಿದ್ದ. ಪಂಪ ಅವರ ನಾಲಿಗೆಯ ಮೇಲೆ ಸದಾ ನಲಿದಾಡುತ್ತಿದ್ದ. ಅನುವಾದ, ಮಕ್ಕಳ ಸಾಹಿತ್ಯ, ವಿಮಶರ್ೆ, ಪ್ರವಾಸ ಸಾಹಿತ್ಯ, ಸಂಪಾದನೆಯ ಕೃತಿಗಳನ್ನು ನೀಡಿದ್ದರೂ, ಅವರು ಕವಿ. ಕವಿ ಮನಸ್ಸಿನ ಪ್ರತೀಕವಾಗಿ ಅವರ 18 ಕವನ ಸಂಕಲನಗಳು ನಮ್ಮ ಮುಂದಿವೆ.  

ಸೂರ್ಯಪಾನ, ಮರುಭೂಮಿ ಅವರ ಪ್ರಮುಖ ಕವನ ಸಂಕಲನ. ಆಶಾಕಿರಣ (ಸುನೀತಗಳು), ನೆಲಸಂಪಿಗೆ, ತಾಜಮಹಲ್, ಹಿಮಗಿರಿಯ ಮಡಿಲಲ್ಲಿ, ವೀರ ಕಂಕಣ, ಧ್ರುವಬಿಂದು, ಪ್ರತಿಬಿಂಬ, ಸೀಮಾಂತರ, ಮುಂಬೈ ಮಳೆ, ಮನೆಮನೆಗೆ ಬೇಲಿ, ಗೀತ ಗುಂಜನ, ಸಂಭವ, ಥಸ್ಟರ್ಿ ವಡ್ರ್ಸ(ಇಂಗ್ಲೀಷ್ ಗೀತೆಗಳು), ಹೊಸ ಶಬ್ದಸಂಸಾರ, ಬಾನಾಡಿ, ಮಾಯಾನಗರಿ, ಬದುಕಿನ ಬೇರು ಅವರ ಕವನ ಸಂಕಲನಗಳು.