ಕಾರವಾರ: ಡಾ. ರಾಜಕುಮಾರ ವ್ಯಕ್ತಿತ್ವ ಎಲ್ಲರಿಗೂ ಮಾದರಿ: ಹೆಗಡೆ

ಕಾರವಾರ 24:  ಕನ್ನಡ ನಾಡಿನ ಜನರ ಪ್ರೀತಿಗೆ-ಪಾತ್ರರಾದ ಡಾ. ರಾಜಕುಮಾರ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ವಿ.ಎಮ್.ಹೆಗಡೆ ಹೇಳಿದರು. ಜಿಲ್ಲಾಡಳಿತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಪದ್ಮಭೂಷಣ ಡಾ.ರಾಜಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ  ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಾಜಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ರಾಜಕುಮಾರ್ ನಡೆ ಮತ್ತು ನುಡಿ ಹಾಗೂ  ನಟನೆಯ ಮೂಲಕ ಮನೆ ಮಾತಾಗಿದ್ದರು.  ಡಾ.ರಾಜಕುಮಾರ್ ವೃತ್ತಿಬದುಕು ನಮಗೆಲ್ಲರಿಗೂ ಮಾರಿಯಾಗುವಂತಹದ್ದು. ಅವರ ಸರಳ ಜೀವನ, ಮನುಷ್ಯ ಪ್ರೀತಿ, ಜಾತ್ಯಾತೀತ ಗುಣ, ಮನುಷ್ಯಧರ್ಮದ  ಆದರ್ಶಗಳನ್ನು ತಿಳಿದು ನಮ್ಮ ಜೀವನದಲ್ಲೂ ಅನುಕರಣೆ ಮಾಡಿಕೊಳ್ಳಬೇಕಾಗಿದೆ ಎಂದರು. 

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಎಸ್. ಪುರುಷೋತ್ತಮ ಮಾತನಾಡಿ,  ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಲ್ಪಡುವ ಡಾ.ರಾಜಕುಮಾರ್ ಅವರ ಸರಳ ನಡೆ-ನುಡಿಯು ಎಲ್ಲರಿಗೂ ಮಾದರಿಯಾಗಿದೆ. ರಾಜಕುಮಾರ ಅವರಿಗೆ ಜೀವನದಲ್ಲಿ ವೈರಿಗಳೇ ಇರಲಿಲ್ಲ. ಅವರು ಎಲ್ಲರನ್ನು  ಪ್ರೀತಿಸಿದವರು. ತಮ್ಮನ್ನು ಅಪಹರಿಸಿದ ವೀರಪ್ಪನ್  ಮರಣ ಹೊಂದಿದಾಗ ನೆನೆದು ಕನಿಕರ ಪಟ್ಟಂತಹ ರಾಜಕುಮಾರ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,  ಉತ್ತಮ ನಾಗರಿಕರಾಗಿ ಬದುಕೋಣ ಎಂದು ಹೇಳಿದರು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಹಿಮಂತರಾಜು  ಪ್ರಾಸ್ತಾವಿಕವಾಗಿ ಮಾತನಾಡಿ ಬಾಲ್ಯದಲ್ಲೆ ರಂಗಪ್ರವೇಶ ಮಾಡಿ, 1954 ರಲ್ಲಿ ಬೆಡರ ಕಣ್ಣಪ್ಪ ಚಿತ್ರದಲ್ಲಿ ಚಿತ್ರನಟರಾಗಿ ಬೆಳೆದ ಡಾ. ರಾಜಕುಮಾರ ಅವರು, ಅಭಿನಯವನ್ನೇ ದೇವರು ಎಂದು ಆರಾಧಿಸುತ್ತಿದ್ದರು. ರಾಜಕುಮಾರ ಅವರ ವ್ಯಕ್ತಿತ್ವವೇ ಒಂದು ವಿಶ್ವ ವಿದ್ಯಾಲಯವಿದ್ದಂತೆ. ಮೇರು ನಟನಾಗಿ ಬೆಳೆದರೂ ಕೂಡಾ ತಾವು ಕಲಿಯುವುದು ಇನ್ನೂ ಇದೆ ಅನ್ನುತ್ತಿದ್ದರು. ಸಮಾಜ ಬದಲಾವಣೆಗೆ ಪ್ರೇರೆಪಿಸುವಂತಹ ಮತ್ತು ಧೀಮಂತ ವ್ಯಕ್ತಿತ್ವ ರಾಜಕುಮಾರ ಅವರದಾಗಿತ್ತು  ಎಂದರು. 

ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಕನರ್ಾಟಕ ರತ್ನ ಹೀಗೆ ಹಲವಾರು ಅತ್ಯುನ್ನತ ಗೌರವ-ಪ್ರಶಸ್ತಿಗಳು ಲಭಿಸಿರುವುದು ಅವರ ವೃತ್ತಿಬದುಕಿನ ಸಾಧನೆಗೆ ಕೈಗನ್ನಡಿಯಾವೆ  ಎಂದರು.

ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಶಾಖೆ ಸೇರಿದಂತೆ ವಿವಿಧ ಶಾಖೆಯ ಸಿಬ್ಬಂದಿ, ಭೂ ದಾಖಲೆಗಳ ಸಹಾಯಕ ನಿದರ್ೇಶಕ(ನಿ) ರಾಜು ಪೂಜಾರ,  ವಾತರ್ಾ ಇಲಾಖೆಯ ಲೆಕ್ಕಾಧಿಕಾರಿ ನಶೀರಾಬಿ ಶೇಖ್, ಕಚೇರಿ ಸಿಬ್ಬಂದಿ ಗೋವಿಂದ ನಾಯ್ಕ, ಕಮಲಾಬಾಯಿ ನಾಯ್ಕ  ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.