ಕಾರವಾರ ೦೮ : ನಗರದ ಗ್ರೀನ್ ಸ್ಟ್ರೀಟ್ನಲ್ಲಿರುವ ಸಲ್ಮೀನ್ ಆಕರ್ೆಡ್ ಕಟ್ಟಡದ 2 ನೇ ಮಹಡಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಭಾರತೀಯ ಜನತಾ ಪಾಟರ್ಿಯ ಕಾಯರ್ಾಲಯವನ್ನು ಹಾಗೂ ಭಾರತೀಯ ಜನತಾ ಪಾಟರ್ಿಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ ಭಾರತೀಯ ಜನತಾ ಪಕ್ಷ ನಮ್ಮ ಮಾತೃಪಕ್ಷ. ನಾವು ಅಭ್ಯಥರ್ಿಯ ಹಿಂದೆ ಓಡದೆ ಪಕ್ಷವನ್ನು ಜೊತೆಗೆ ಕರೆದೊಯ್ದು, ಪಕ್ಷ ಅಜರಾಮರವಾಗುವಂತೆ ಮಾಡೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯಥರ್ಿಯಾದ ಅನಂತಕುಮಾರ ಹೆಗಡೆಯನ್ನು ಬಹುಮತಗಳಿಂದ ಗೆಲ್ಲಿಸಬೇಕಿದೆ. ಮೋದಿರವರ ಹೊಸ ಶಕೆ ಮತ್ತೆ ಆರಂಭವಾಗುವಂತೆ ಮಾಡೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಜೀವನ ಬೆಲ್ಲದಂತೆ ಸಿಹಿ ಇರಲಿ. ಮೋದಿಜಿರವರನ್ನು ಗೆಲ್ಲಿಸಿ ದೇಶಕ್ಕೆ ಯುಗಾದಿಯ ಸಿಹಿ ಉಡುಗೊರೆ ನೀಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ರಾಜೇಶ ನಾಯಕ, ನಗರಾಧ್ಯಕ್ಷರು ಮನೋಜ ಭಟ್, ನಯನಾ ನಿಲಾವರ, ಮಾರುತಿ ನಾಯ್ಕ, ರಾಜೇಶ ನಾಯ್ಕ ಸಿದ್ಧರ, ಪ್ರಸಾದ ಕಾರವಾರಕರ, ಕಿಶನ ಕಾಂಬ್ಳೆ, ಪ್ರಧಾನ ಕಾರ್ಯದಶರ್ಿಗಳು, ನಗರ ಸಭೆಯ ಬಿಜೆಪಿ ಸದಸ್ಯರು, ಬಿ.ಜೆ.ಪಿ ಪದಾಧಿಕಾರಿಗಳು, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.