ಕಾರವಾರ 20: ಚುನಾವಣೆಗೆ ನಿಲ್ಲುವ ಅಭ್ಯಥರ್ಿಗಳು ವಿದೇಶದಲ್ಲಿನ ಆಸ್ತಿ ಮತ್ತು ವಹಿವಾಟಿನ, ವಿದೇಶದಲ್ಲಿನ ಸಾಲದ ವಿವರಗಳನ್ನು ಸಹ ನೀಡಬೇಕೆಂಬ ಹೊಸ ಸಂಗತಿಯನ್ನು ಚುನಾವಣಾ ಆಯೋಗ ತಿಳಿಸಿದೆ. ಇದನ್ನು ಚುನಾವಣಾ ಕಣಕ್ಕೆ ಇಳಿಯುವ ಅಭ್ಯಥರ್ಿಗಳು ಗಮನಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಡಾ.ಹರೀಶ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಹಿನ್ನೋಟದ ಮಾಹಿತಿಯ ಕಿರುಪುಸ್ತಕವನ್ನು ಬುಧುವಾರ ಬಿಡುಗಡೆ ಮಾಡಿ ಮಾತನಾಡಿದರು. ಚುನಾವಣೆಗೆ ನಿಲ್ಲುವ ಅಭ್ಯಥರ್ಿಗಳು ನಾಮಪತ್ರ ಕೊಟ್ಟ ಕ್ಷಣದಿಂದ ಚುನಾವಣಾ ಲೆಕ್ಕಗಳನ್ನು ನೀಡಬೇಕು. ಪತ್ರಿಕೆ, ದೃಶ್ಯ ಮಾಧ್ಯಮ, ಇ-ಪತ್ರಿಕೆಗಳಿಗೆ ನೀಡುವ ಜಾಹೀರಾತಿನ ಲೆಕ್ಕ ಪತ್ರ ನೀಡಬೇಕು. ಸಾರ್ವಜನಿಕ ಸಭೆ, ಸಮಾರಂಭ, ಪ್ರಚಾರಕ್ಕೆ ಬಳಸುವ ವಾಹನಗಳ ಕುರಿತು ಒಂದು ದಿನ ಮೊದಲೇ ಮಾಹಿತಿ ನೀಡಿ, ಚುನಾವಣಾ ಶಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಪ್ರಚಾರವನ್ನು ಫೆಸ್ಬುಲ್, ಯೂಟೂಬ್ಗಳಲ್ಲಿ ಸಹ ಮಾಡಿಕೊಳ್ಳಬಹುದು. ಅಲ್ಲಿ ಜಾಹೀರಾತು ನೀಡಲು ಅನುಮತಿ ಪಡೆಯಬೇಕು. ನಾವು ಎಲ್ಲಾ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಚುನಾವಣಾಧಿಕಾರಿ ಎಚ್ಚರಿಸಿದರು.
ವಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಬಾರದು:
ಚುನಾವಣೆಗೆ ನಿಲ್ಲುವ ಅಭ್ಯಥರ್ಿ ಎದುರಾಳಿಯನ್ನು ವಯಕ್ತಿಕವಾಗಿ ನಿಂದಿಸಬಾರದು. ಕೌಟುಂಬಿಕ ವಿಷಯಗಳನ್ನು ಪ್ರಸ್ತಾಪಿಸಿ ಮಾನ ಹಾನಿ ಮಾಡಬಾರದು. ಧರ್ಮ ಜಾತಿಗಳ ವಿಷಯ ಪ್ರಸ್ತಾಪಿಸಿ ಟೀಕಿಸಬಾರದು. ಹಾಗೆ ಮಾಡಿದಲ್ಲಿ ಗೆದ್ದರೂ ಸಹ ಅವರನ್ನು ಅನರ್ಹಗೊಳಿಸುವ ಮತ್ತು ಮುಂದಿನ ಆರು ವರ್ಷ ಯಾವುದೇ ಚುನಾವಣೆಗಳಿಗೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ. ಇದು ಸೋತ ಅಭ್ಯಥರ್ಿಗೂ ಸಹ ಅನ್ವಯಿಸುತ್ತದೆ. ವಯಕ್ತಿಕ ಮತ್ತು ಮಾನಹಾನಿ ರೀತಿಯಲ್ಲಿ ನಿಂದಿಸಬಾರದು. ಕಾನೂನು ಅಡಿಯಲ್ಲಿ ಪ್ರಚಾರ ಮಾಡಲು ಅಡ್ಡಿಯಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ.ಹರೀಶ್ ಕುಮಾರ್ ವಿವರಿಸಿದರು.
ಸಿವಿಜಿಲ್ ಇನ್ವೆಸ್ಟಿಗೇಟರ್ ಮತ್ತು ಸುವಿಧಾ ಎಂಬ ತಂತ್ರಾಂಶಗಳನ್ನು ಸಾರ್ವಜನಿಕರು ಡೌನ್ಲೋಡ್ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಮತಗಟ್ಟೆಗಳನ್ನು ಖಚಿತಪಡಿಸಿಕೊಳ್ಳಬಹುದು. ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳ ಸಂಬಂಧ ಚುನಾವಣಾಧಿಕಾರಿಗೆ ದೂರು ಮೊಬೈಲ್ ಮೂಲಕವೇ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಸುವಿಧಾ ಆಫ್ ಮೂಲಕ ಹಿರಿಯ ನಾಗರಿಕರು ಮತದಾನ ಮಾಡಲು ಮತಗಟ್ಟೆ ತಲುಪುವ ಸಲುವಾಗಿ ವಾಹನ ನೆರವು ಕೋರುವ ಬೇಡಿಕೆಯನ್ನು ಮೊಬೈಲ್ ಮೂಲಕ ಮೊದಲೇ ತಿಳಿಸಬಹುದು. ಅಲ್ಲದೇ ಅಂಗವಿಕಲ ಮತದಾರರಿಗೆ ಸಹ ವಾಹನ ನೆರವಿನ ಸೌಲಭ್ಯ ಇದೆ ಎಂದರು.
ಚೆಕ್ಪೋಸ್ಟ್ಗಳಲ್ಲಿ 30 ಕಡೆ ಸಿಸಿ ಕ್ಯಾಮರಾ:
ಜಿಲ್ಲೆಯ ಚೆಕ್ ಪೋಸ್ಟಗಳಲ್ಲಿ 30 ಕಡೆ ಸಿಸಿ ಕ್ಯಾಮರಾ ಆಳವಡಿಸಲಾಗಿದೆ. ಅವುಗಳ ಕೇಂದ್ರ ವೀಕ್ಷಣಾ ಕೇಂದ್ರ ಜಿಲ್ಲಾಧಿಕಾರಿ ಕಚೇರಿಯಲ್ಲಿದೆ. ಒಂದು ವೇಳೆ ಸಂಪರ್ಕ ಕಡಿತವಾದರೂ, ಸಿಸಿ ವಿಟಿ ಫೂಟೇಜ್ 30 ದಿನ ಸ್ಟೋರೇಜ್ ಮಾಡುವಷ್ಟು ಸಾಮಥ್ರ್ಯ ಆಯಾ ಸಿಸಿ ಟಿವಿ ಕೇಂದ್ರಗಳ ಕಂಪ್ಯೂಟರ್ನಲ್ಲಿದೆ. ಅಲ್ಲದೇ ಜಿಲ್ಲೆಯ 12 ನಗರಗಳ 230 ಕಡೆ ಸಿಸಿ ಟಿವಿ ಅಳವಡಿಸಲಾಗಿದೆ. ಇದು ಚುನಾವಣಾ ಆಕ್ರಮಗಳನ್ನು ತಡೆಯಲು ಅನುಕೂಲವಾಗಲಿದೆ. ಪೊಲೀಸರಿಗೂ ಸಹ ಈ ವ್ಯವಸ್ಥೆಯಿಂದ ಅಪರಾಧ ಕೃತ್ಯಗಳನ್ನು ತಡೆಯಲು ನೆರವು ಸಿಗಲಿದೆ. ಚುನಾವಣೆಯ ನಂತರವೂ ನಗರಗಳಲ್ಲಿನ ಸಿಸಿಟಿವಿ ವ್ಯವಸ್ಥೆಯನ್ನು ನಗರಾಭಿವೃದ್ಧಿಕೋಶದ ಸುಪದರ್ಿಗೆ ನೀಡಲಾಗುವುದು. ಇದರಿಂದ ಸುಗಮ ಸಾಮಾಜಿಕ ವ್ಯವಸ್ಥೆಗೆ ನೆರವು ಸಿಗಲಿದೆ ಎಂದರು.
ಕಾರವಾರದಲ್ಲಿ 23, ಶಿರಸಿಯಲ್ಲಿ 18, ದಾಂಡೇಲಿಯಲ್ಲಿ 19, ಭಟ್ಕಳದಲ್ಲಿ 30, ಕುಮಟಾದಲ್ಲಿ 17, ಅಂಕೋಲಾದಲ್ಲಿ 9, ಹಳಿಯಾಳದಲ್ಲಿ 28, ಹೊನ್ನಾವರ 20, ಸಿದ್ದಾಪುರ 18, ಯಲ್ಲಾಪುರ 4, ಮುಂಡಗೋಡ 15, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5 , ಒಟ್ಟು 206 ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ ತಿಳಿಸಿದರು. ಪೌರಾಯುಕ್ತ ಎಸ್.ಯೋಗೇಶ್ವರ, ಐಎಎಸ್ ಪ್ರೋಬೆಷನರಿ ದಿಲೀಪ್ ಇದ್ದರು.