ದಿ. 29ರಂದು ಕರುನಾಡ ಉತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

ಅನುಷಾ ಕರಿಬಸಯ್ಯ ಹಿರೇಮಠ

ಬೆಳಗಾವಿ 27: ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಭವನ ಬೆಳಗಾವಿ ಇವರ ಸಹಯೋಗದಲ್ಲಿ ಕರುನಾಡ ಉತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿ. 29ರಂದು ಸಾಯಂಕಾಲ 4ಘಂಟೆಗೆ ನೆಹರು ನಗರ ರಾಮದೇವ ಹೊಟೇಲ್ ಹತ್ತಿರ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಹಲವಾರು ಜಾನಪದ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ವಹಿಸುವರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟೆ ರಾಣಿ ಕಿತ್ತೂರ ಚೆನ್ನಮ್ಮಾ ವಸತಿ ಶಾಲೆ ಎಂಟನೆ ತರಗತಿ ಪ್ರತಿಭಾವಂತ ವಿದ್ಯಾರ್ಥಿ, ಮಹಾ ವಾಗ್ಮಿ ಅನುಷಾ ಕರಿಬಸಯ್ಯ ಹಿರೇಮಠ ರಾಜ್ಯೋತ್ಸವ ಕುರಿತು ಮಾತನಾಡಲಿದ್ದಾರೆ. 

ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಸುನೀತಾ ಪಾಟೀಲ, ಕಾರ್ಯದರ್ಶಿ ಶಾರದಾ ಪಾಟೀಲ, ಸಹಕಾರ್ಯದರ್ಶಿ ವಿದ್ಯಾ ಗೌಡರ, ಮುಂದಾಳತ್ವ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.