ಡಿ.4ಕ್ಕೆ ಪರದೇಶಿ ಮಠದಲ್ಲಿ ಕಾರ್ತಿಕೋತ್ಸವ:ಶಿವಯೋಗಿಶ್ರೀ
Kartikotsava to be celebrated at Pardeshi Math on December 4: Shiva Yogi Shree
ದೇವರಹಿಪ್ಪರಗಿ 22: ಪಟ್ಟಣದ ಅವುಗೇಶ್ವರ ತಪೋಧಾಮ ಪರದೇಶಿ ಮಠದಲ್ಲಿ ಡಿಸೆಂಬರ್ 4ರಂದು ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶ್ರೀಮಠದ ಭಕ್ತರು ಕಾರ್ಯಕ್ರಮ ಯಶಸ್ವಿಗೆ ಶ್ರೀಮಠದ ಒಡೆಯರಾದ ಶಿವಯೋಗಿ ಮಹಾಸ್ವಾಮಿಗಳು ಕರೆ ನೀಡಿದ್ದಾರೆ. ಪಟ್ಟಣದ ಪರದೇಶಿ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಕಾರ್ತಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ವಿಗೆ ಶ್ರೀಮಠದ ವಿವಿಧ ಸೇವಾ ಸಮಿತಿ ನೂತನ ಸಮಿತಿಯ ರಚನೆ, ಕಾರ್ತಿಕೋತ್ಸವದ ದಿನದಂದು ಹೃದಯ ಗುರುಗಳ ಪತ್ರ ಪದ್ದು ಹೇಗೆ ಮಹಾ ರುದ್ರ ಅಭಿಷೇಕ, ಹೋಮ, ಮಹಾ ಮೃತ್ಯುಂಜಯ ಹೋಮ, ರಂಗೋಲಿ ಸ್ಪರ್ಧೆ ನೂತನ ಶ್ರೀಮಠದ ಕಟ್ಟಡದ ಅಡಿಗಲ್ಲು ಪೂಜಾ ಸಮಾರಂಭ ಸೇರಿದಂತೆ ದಿನಪೂರ್ತಿ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು ಹಾಗೂ ಸಾಯಂಕಾಲ 6ಗಂಟೆಗೆ ಧರ್ಮ ಸಭೆ ನಂತರ ಮಹಾಪ್ರಸಾದ ವ್ಯವಸ್ಥೆ ನಡೆಯಲಿದೆ.
ಶ್ರೀಮಠದ ಭಕ್ತರು ಕಾರ್ಯಕ್ರಮದ ಯಶಸ್ವಿಗೆ ತನು ಮನ ಧನದಿಂದ ಸಹಕಾರ ನೀಡಬೇಕು ಎಂದು ಹೇಳಿದರು.ಹಲವಾರು ಮುಖಂಡರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಲಹೆ ಸೂಚನೆಗಳನ್ನು ನೀಡಿದರು. ಪ.ಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ, ಸದಸ್ಯ ಕಾಸುಗೌಡ ಬಿರಾದಾರ ಜಲಕತ್ತಿ, ತಾಲೂಕು ಶಸಾಪ ಅಧ್ಯಕ್ಷ ಎಸ್.ಎನ್.ಬಸವರಡ್ಡಿ, ಮುಖಂಡರುಗಳಾದ ಮಹಾಂತೇಶ ವಂದಾಲ, ಶಂಕರಗೌಡ ಪಾಟೀಲ, ರಹೀಮಾನ ಕನಕಲ್, ಮುರುಗೇಂದ್ರಯ್ಯ ಇಂಡಿ, ಶಿವು ಅತನೂರ, ರಮೇಶ ಮಾಳನೂರ, ಕಾಸಯ್ಯ ಸದಯ್ಯನಮಠ, ನಾನಗೌಡ ಪಾಟೀಲ ಯರನಾಳ, ಸೋಮು ದೇವೂರ, ಬಸಪ್ಪ ದೇವಣಗಾಂವ, ಪ್ರಕಾಶ ಗುಡಿಮನಿ, ಪ್ರಕಾಶ ಮಲ್ಲಾರಿ, ಶಿವರಾಯ ಮಸಿಬಿನಾಳ, ಸಿದ್ದು ಆನಂದಿ, ಗೋವಿಂದ ಸಿಂಧೆ, ವೀರಭದ್ರಯ್ಯ ಇಂಡಿ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 