ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
ಕೊಪ್ಪಳ 07 : ಹನಮಸಾಗರ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ಶುಕ್ರವಾರ ಸಂಜೆ ಹಚ್ಚಲಾಯಿತು. ಬೆಳ್ಗಗೆಯಿಂದ ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ನೈವೇದ್ಯ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಹೀಗೆ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಗಳು ಜರುಗಿದವು. ಸಂಜೆ ವೇಳೆಗೆ ಮೆುತ್ತೈದೆ ಮಹಿಳೆಯರು, ಪುರುಷರು, ಮಕ್ಕಳು ದೇವಸ್ಥಾನಕ್ಕೆ ಆಗಮಿಸಿ ಕಾರ್ತಿಕವನ್ನು ಹಚ್ಚಿದರು. ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರ್ಫ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ರಾಮಣ್ಣ ಸಿನ್ನೂರ, ಕುಡ್ಲೆಪ್ಪ ಸಿನ್ನೂರ, ರಾಮನಗೌಡ ಸಿನ್ನೂರ, ಬಸವಂತಪ್ಪ ಸಿನ್ನೂರ, ಅಶೋಕ ಸಿನ್ನೂರ, ಹನುಮಂತ ಸಿನ್ನೂರ, ರಾಘವೇಂದ್ರ ಸಿನ್ನೂರ, ವಿಶಾಲ ಸಿನ್ನೂರ, ಮಹೇಶ ಸಿನ್ನೂರ ಶಿವು ಎರಗಲ್ಲ. ಏಕನಾಥ ಮೆದಿಕೇರಿ, ಅನೀಲ ಸಿನ್ನೂರ, ಶಂಕರ ಹುಲಮನಿ, ವಿಜಯಲಕ್ಷೀ, ಗಾಯತ್ರಿ ಸಿನ್ನೂರ, ವಿದ್ಯಾಶ್ರೀ ಸಪ್ಪಂಡಿ, ವತ್ಸಲಾ ಸಿನ್ನೂರ, ಅಶ್ವಿನಿ ಕುದಿರಿಮೋತಿ, ಸರಸ್ವತಿ ಸಿನ್ನೂರ, ಗೌರವ್ವ ಶಿಲವಂತರ, ಲಕ್ಷ್ಮೀ ಸಪ್ಪಂಡಿ, ರಾಜಲಕ್ಷ್ಮೀ ಸಪ್ಪಂಡಿ ಇತರರು ಇದ್ದರು ಹನುಮಸಾಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಕಾರ್ತಿಕವನ್ನು ಹಚ್ಚಲಾಯಿತು.