ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Dipotsava at Mallikarjuna Temple
ತಾಳಿಕೋಟಿ 28: ಪಟ್ಟಣದ ಅನಂತಪುರ ಪೇಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಸಕಾಲ ನಡೆದ ಕಾರ್ತಿಕ ದೀಪೋತ್ಸವ ಸಮಾರಂಭವು ಸೋಮವಾರ ಮುಕ್ತಾಯವಾಯಿತು. ದೇವಸ್ಥಾನವನ್ನು ಬಣ್ಣದ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ತಿಕ ನಿಮಿತ್ತ ಮಾಸದ ನಿಮಿತ್ತ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ನಿತ್ಯ ಪೂಜಾ ಕಾರ್ಯಗಳು ಭಜನೆ ದೀಪೋತ್ಸವ ಇತ್ಯಾದಿ ತಿಂಗಳ ಕಾಲ ನಡೆದು ಕೊನೆಯ ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಬಾತ್, ಪಲಾವ್ ಜೊತೆಗೆ ಅಂಬಲಿ ಪೇಯವನ್ನು ಭಕ್ತಾದಿಗಳಿಗೆ ಉಣಬಡಿಸಲಾಯಿತು.
ಅಧ್ಯಕ್ಷೆ ಬೋರಮ್ಮ ಕುಂಬಾರ, ಉಪಾಧ್ಯಕ್ಷೆ ನಿರ್ಮಲಾ ಕತ್ತಿ, ಶಾಂತಮ್ಮ ಹೊಟ್ಟಿ, ಮಾದೇವಿ ಕಸ್ತೂರಿ, ಬಸಮ್ಮ ಕಸ್ತೂರಿ, ದ್ರಾಕ್ಷಾಯಿಣಿ ದೇಗಿನಾಳ, ಗೀತಾ ಪಟ್ಟಣಶೆಟ್ಟಿ, ಸುಧಾ ಮಡ್ಡಿ, ಸಂಗೀತಾ ಗೋನಾಳ, ಅನ್ನಪೂರ್ಣ ಗೋನಾಳ, ಮಹಾದೇವಿ ಗೋನಾಳ, ಲತಾ ಮಡ್ಡಿ, ವಿದ್ಯಾ ಮಡ್ಡಿ, ಬೇಬಕ್ಕ ಬಳಗಾನೂರ ಇತರರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 