ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಜರುಗಿದ ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ

ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಜರುಗಿದ ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ Karnataka State Climate Change Action Plan Training Program

ಲೋಕದರ್ಶನ ವರದಿ 

ಧಾರವಾಡ   11: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಯು, ಅರಣ್ಯ, ಪರಿಸರ ಮತ್ತು ಜೀವಿಶಾಸ್ರ್ತ ಇಲಾಖೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಹವಾಮಾನ ಬದಲಾಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ಯನ್ನು ತಯಾರಿಸಿ, 2024ರಲ್ಲಿ  ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾಣೆ ಮಂತ್ರಾಲಯದಿಂದ ಅನುಮೋದನೆಗೊಂಡಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ  ಪಾಟೀಲ ಅವರು ಹೇಳಿದರು.  

ಅವರು ಮೇ 08, 2026 ರಂದು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಜರುಗಿದ ಕ್ರಿಯಾ ಯೋಜನೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಹವಾಮಾನ ಬದಲಾಣೆಯ ವರದಿಯಲ್ಲಿನ ಕಾರ್ಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಇಲಾಖೆಗಳು ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು 2025-2030ರ ಅವಧಿಗೆ ಗುರಿಗಳೊಂದಿಗೆ ನಿಗದಪಡಿಸಿವೆ. ಸೂಚಕಗಳ ಅನುಷ್ಠಾನ ಕುರಿತು ಜಿಲಾಮಟ್ಟದ ಅಧಿಕಾರಿ ವರ್ಗ ಹಾಗೂ ಇತರೆ ಸಂಘ ಸಂಸ್ಥೆಗಳ ಸಾಮರ್ಥ್ಯ ಬೆಳವಣಿಗೆ ಉದ್ದೇಶದೊಂದಿಗೆ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯವರ ಸಹಯೋಗದೊಂದಿಗೆ ಸಂಸ್ಥೆಯು 2026-27 ನೇ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸದರಿ ವಿಷಯವನ್ನು ವಿಸ್ತೃತಗೊಳಿಸಿದೆ ಎಂದು ಅವರು ಹೇಳಿದರು. 

 ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ ಹಲವು ಕ್ಷೇತ್ರಗಳ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಪಾಲುದಾರುಗಳ ಪ್ರತಿನಿಧಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಪೋದಾರ್, ಡಾ. ಪ್ರಕಾಶ್ ಭಟ್, ಹವಾಮಾನ ಬದಲಾವಣೆ ಕೇಂದ್ರ (ಎಂಪ್ರಿ) ಹಿರಿಯ ಸಮಾಲೋಚಕ ಡಾ. ಬಿ. ಸರಿತ, ಬೆಂಗಳೂರು ಜಲ ಸಂಪನ್ಮೂಲ ಇಲಾಖೆ ಪರಿಣಿತೆ ಡಾ. ಉಷಾ ಅವರು ಮಾತನಾಡಿದರು.  

ಕಾರ್ಯಕ್ರಮದಲ್ಲಿ ತರಬೇತಿ ಸಹಾಯಕರಾದ ಜಗದಾಂಬ.ಬಿ.ಆರ್ ಮತ್ತು  ವಿವಿಧ 34 ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಲವು ಕ್ಷೇತ್ರಗಳ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಪಾಲುದಾರ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ತರಬೇತಿ ಆಯೋಜನೆಗೆ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರ ಅಧಿಕಾರಿ ಪ್ರತಿಭಾ ವಿ ಹುಬ್ಬಳ್ಳಿ ಅವರು ಸಹಕಾರ ನೀಡಿದರು. ಸಂಸ್ಥೆಯ ಸಿಬ್ಬಂದಿ ಲತ. ಎಂ.ಹೆಚ್, ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.