ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ

Karnataka Farmers' Association and Green Army jointly appealed to Vijayapur District Collector T. Bh

ಕರ್ನಾಟಕ ರೈತ ಸಂಘ  ಹಾಗೂ ಹಸಿರು ಸೇನೆ ಜಂಟಿಯಾಗಿ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ

ವಿಜಯಪುರ 10: ಹಾನಿಗೊಳಗಾದ ತೊಗರಿ ಬೆಳೆ ವರದಿ ತಪ್ಪಾಗಿ ಕಳುಹಿಸಿದ್ದು, ತಪ್ಪು ವರದಿಯನ್ನು ಪರಿಗಣಿಸದೆ ಪುನಃ ಸಮೀಕ್ಷೆ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಹಾಗೂ ಹಸಿರು ಸೇನೆ ಜಂಟಿಯಾಗಿ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಜಂಟಿಯಾಗಿ ಮಾತನಾಡಿ, ವಿಜಯಪುರ ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಇದಕ್ಕೆ ಮೂಲ ಕಾರಣ ಕಳಪೆ ಬಿಆರ್‌ಜಿ 152 ಮತ್ತು 811 ಕಳಪೆ ಬೀಜವೇ ಮೂಲ ಕಾರಣ ಹಾಳಾದ ತೊಗರಿ ಬೆಳೆ ಪೆಂಡಿಯೊಂದಿಗೆ ಕೃಷಿ ಆಯುಕ್ತರಿಗೆ ಗಮನಕ್ಕೆ ತರಲು ಬೆಂಗಳೂರಿಗೆ ತೊಗರಿ ಪೆಂಡಿಯೊಂದಿಗೆ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿತ್ತು. ಇದನ್ನು ಅರಿತ ಸರಕಾರ ಮತ್ತು ಕೃಷಿ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಹಾಳಾದ ತೊಗರಿ ಬೆಳೆ ಸಮೀಕ್ಷೆ ನಡೆಸಿ ನೈಜ ಸ್ಥಿತಿ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ವಿಜ್ಞಾನಿಗಳಿಗೆ ನಿರ್ದೇಶನ ನೀಡಿದ ಪ್ರಯುಕ್ತ ತೊಗರಿ ಬೆಳೆ ಹಾನಿ ಕುರಿತು ಜಮೀನುಗಳಿಗೆ ತೆರಳಿ ಪರೀಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ರೈತ ಮುಖಂಡರು ಉಪಸ್ಥಿತರಿದ್ದು, ಸಮೀಕ್ಷೆ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ತೊಗರಿ ಹಾನಿ ಕುರಿತು ರೈತ ಮುಖಂಡರ ಮುಂದೆ ಕಳಪೆ ತೊಗರಿ ಬೀಜ ವಿತರಿಸಿದ ಕಾರಣ ತೊಗರಿ ಕಾಯಿ ಹಿಡಿದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಸರ್ಕಾರಕ್ಕೆ ವರದಿ ಕಳಿಸುವಾಗ ತೊಗರಿ ಬೀಜದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಹವಾಮಾನದ ವೈಪರಿತ್ಯ ಕಾರಣ ಹಾಗೂ ರೈತರು ತೊಗರಿ ಬಿತ್ತನೆ ಮಾಡುವಾಗ ಅಂತರದಲ್ಲಿ ಬಿತ್ತನೆ ಮಾಡದೇ ಅತೀ ಹತ್ತಿರದಲ್ಲಿ ಬಿತ್ತನೆ ಮಾಡಿದ್ದರಿಂದ ಕಾಯಿ ಹಿಡಿದಿಲ್ಲ ಎಂದು ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ.ಈ ರೀತಿ ಅಧಿಕಾರಿಗಳು ತಪ್ಪು ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಜಿಲ್ಲೆ ರೈತರನ್ನು ಕೊಲೆ ಮಾಡಲು ಹೊರಟಿದ್ದಾರೆ. ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳ ಪ್ರಕಾರ ಹವಾಮಾನ ವೈಪರಿತ್ಯ ಹಾಗೂ ಬಿತ್ತನೇ ಅಂತರವೇ ಕಾರಣವಾಗಿದ್ದರೇ ಪಕ್ಕದ ಹೊಲದಲ್ಲಿ ಬೇರೆ ತಳಿಯ ತೊಗರಿ ಬೀಜ ಬಿತ್ತನೆ ಮಾಡಿದ್ದಾರೆ. ಆ ತೊಗರಿ ಉತ್ತಮ ಇಳುವರಿ ಬಂದಿದೆ. ರೈತರು ಅಂತರದಿಂದ ಬಿತ್ತನೆ ಮಾಡಿಲ್ಲ, ಒದಕ್ಕೊಂದು ಹೊಂದಿಕೊಂಡು ಗಿಡಗಳು ಬೆಳೆದಿವೆ ಹವಾಮಾನ ವೈಪರಿತ್ಯ ಬಿ.ಆರ್‌.ಜಿ. 152 ಹಾಗೂ ಜಿ.ಆರ್‌.ಜಿ.811 ಈ ತೊಗರಿ ಬೀಜಕ್ಕೆ ಮಾತ್ರ ಹವಾಮಾನ ವೈಪರಿತ್ಯ ಅನ್ವಯವಾಗುತ್ತದೆಯೋ ಹೇಗೆ ? ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಆರ್ಥಿಕ ಹೊರೆ ಮಾಡಬಾರದೆಂದು ಹಾಗೂ ಸರ್ಕಾರವನ್ನು ಮೆಚ್ಚಿಸಲು ಅಧಿಕಾರಿಗಳು ತಪ್ಪು ವರದಿ ಕಳುಹಿಸಿದ್ದಾರೆ ಎಂದರು.ಇದರಿಂದ ತೊಗರಿ ಬೆಳೆ ಹಾಳಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಇದಕ್ಕೆ ಕಾರಣ ಬಿ.ಆರ್‌.ಜಿ. 152 ಹಾಗೂ ಬಿ.ಆರ್‌.ಜಿ 811 ಕಳಪೆ ಬೀಜವೇ ಕಾರಣ. ಕರ್ನಾಟಕ ಬೀಜ ಅಭಿವೃದ್ಧಿ ನಿಗಮದಿಂದ ಯಾವ ರೀತಿ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿ ಸರ್ಟಿಫೈ ಮಾಡಿದ್ದಾರೆ. ಇದು ರೈತರನ್ನು ಹಾಳು ಮಾಡುವ ಷಡ್ಯಂತ್ರ ಅಡಗಿದೆ.ರಾಜ್ಯ ಸರ್ಕಾರ ಮತ್ತೊಮ್ಮೆ ಬೆಂಗಳೂರಿನಿಂದಲೇ ವಿಶೇಷ ತಂಡ ರಚಿಸಿ ವಿಜಯಪುರಕ್ಕೆ ಕಳುಹಿಸಿ ರೈತ ಮುಖಂಡರ ಹಾಗೂ ತೊಗರಿ ಬೆಳೆ ಹಾಳಾದ ರೈತನ ಸಮ್ಮುಖದಲ್ಲಿ ಪರೀಕ್ಷಿಸಿ ಸೂಕ್ತ ವರದಿ ಕಳುಹಿಸಲು ಕ್ರಮ ಕೈಗೊಳ್ಳಬೇಕು ಮತ್ತು ವಿಮೆ ಹಣ ಕಟ್ಟದ ರೈತರಿಗೂ ಪರಿಹಾರ ಒದಗಿಸಬೇಕು ಹಿಂದೆ ಹಾಳಾದ ತೊಗರಿ ಬೆಳೆಗೂ ವಿಮೆ ಕಂಪನಿಯಿಂದ ಬಿಡಿಗಾಸು ಕೂಡ ಪರಿಹಾರ ಮಂಜೂರಾಗಿಲ್ಲ ಆದ್ದರಿಂದ ಕೂಡಲೆ ಮತ್ತೊಮ್ಮೆ ಸಮೀಕ್ಷೆ ನಡೆಸಿ ಹಾಳಾದ ತೊಗರಿಗೆ ಪ್ರತಿ ಎಕರೆಗೆ ಕನಿಷ್ಟ 25 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕೆಂದು ಕುಲಕರ್ಣಿ ಒತ್ತಾಯಿಸಿದರು. 

ಜಿಲ್ಲಾ ಸಂಚಾಲಕರಾದ ಪಾಂಡು ಹ್ಯಾಟಿ, ಸಂತೋಷ  ಬಿರಾದಾರ, ಗುರಲಿಂಗಪ್ಪ ಪಡಸಲಗಿ, ಬಸನಗೌಡ ಚೌಧರಿ, ಮಹಾಂತೇಶ ಪಡಗಾನೂರ, ಬಸವರಾಜ ವಾಲಿ, ಶಿವಪ್ಪ ಹಡಪದ, ಮಾನಪ್ಪ ಪತ್ತಾರ, ಶೇಷಪ್ಪ ದೇಗಿನಾಳ, ಶೇಷಪ್ಪ ಪಡಗಾನೂರ, ಭೀಮರಾಯ ಪಡಾಗನೂರ, ಅಶೋಕ ಪೂಜಾರಿ, ನಾಗರಾಜ ವಂದಾಲ, ವೀರಭದ್ರ ಮಠ, ಶಿವಾನಂದ ಚೌಧರಿ, ಪ್ರಕಾಶ ಕೇರಟಗಿ, ಮಹಾದೇವಪ್ಪ ಹಳ್ಳಿ, ಹೊನಕೇರೆಪ್ಪ ತೆಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ,  ಜಿಲ್ಲಾ ಸಂಚಾಲಕರಾದ ಸತೀಶ್ ಪಾಟೀಲ, ಸಂಗಪ್ಪ ಟಕ್ಕೆ, ಸೋಮು ಬಿರಾದಾರ, ಮುತ್ತು ಬಿರಾದಾರ, ಬಸು ನ್ಯಾಮಗೋಂಡ, ಸುಭಾಸ ಹಿಟ್ಟನಳ್ಳಿ, ಶರಣಪ್ಪ ಜಮಖಂಡಿ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.