ಕರಿಲಕ್ಷ್ಮೀ ದೇವಿ ದೇವಸ್ಥಾನ ವಾಸ್ತುಶಾಂತಿ ಹಾಗೂ ವಿವಿಧ ಕಾರ್ಯಕ್ರಮ

ಕರಿಲಕ್ಷ್ಮೀ ದೇವಿ ದೇವಸ್ಥಾನ ವಾಸ್ತುಶಾಂತಿ ಹಾಗೂ ವಿವಿಧ ಕಾರ್ಯಕ್ರಮ Karilakshmi Devi temple architecture and various programs

ಬೆಳಗಾವಿ 08 : ಕಣಬರ್ಗಿ ಗ್ರಾಮದ ಸಾಗರ ನಗರದಲ್ಲಿ ನೂತನವಾಗಿ ನಿರ್ಮಿಸಿದ ಕರಿಲಕ್ಷ್ಮೀ ದೇವಿ ದೇವಸ್ಥಾನ ವಾಸ್ತುಶಾಂತಿ ಹಾಗೂ ಕಳಸಾರೋಹನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಏಪ್ರಿಲ್ 13 2026 (ಸೋಮವಾರ) ರಂದು ನಡೆಯಲಿದೆ. ಅಂಕಲಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಕುಂದರಗಿ ಇವರ ಶುಭಹಸ್ತದಿಂದ ಕಳಸಾ ಧ್ವಜಾರೋಹನ ಮಧ್ಯಾಹ್ನ 1 ಗಂಟೆಗೆ ನೆರವೇರುವುದು.  

ಕಾರ್ಯಕ್ರಮದ ವಿವರ:ಇದಕ್ಕೂ ಮುಂಚೆ ಏಪ್ರಿಲ್ 10 2026 ರಂದು ಬೆಳಿಗ್ಗೆ 8 ಗಂಟೆಗೆ ಗೋಮಾತಾ ಪೂಜೆ ಹಾಗೂ 8:30ಕ್ಕೆ ಕುಂಭ ಕಳಸ ಪೂಜೆ, ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯವರೆಗೆ ವಾಸ್ತು ಹೋಮ, ಮದ್ಯಾಹ್ನ 1:30 ರಿಂದ ಅನ್ನ ಸಂತರೆ​‍್ಣ ನಡೆಯಲಿದೆ. ಅದೇ ರೀತಿಯಲ್ಲಿ ಏ.11 ರಂದು ಶ್ರೀ ಕರಿಲಕ್ಷ್ಮೀ ದೇವಿ ಮೂರ್ತಿ ಮೆರವಣಿಗೆ ಕಣಬರ್ಗಿ ಬಸ್ ನಿಲ್ದಾಣದಿಂದ ಮಹಾಲಕ್ಷ್ಮೀ ಮಂದಿರದವರೆಗೆ ನಡೆಯಲಿದೆ.

ಏ. 12 ರಂದು ಮಹಾಲಕ್ಷ್ಮೀ ಮಂದಿರದಿಂದ ಕಣಬರ್ಗಿ ಮಾರ್ಗವಾಗಿ ಕಲಖಾಂಬ ಸಾಗರ ನಗರದವರೆಗೆ ಮೂರ್ತಿ ಮೆರವಣಿಗೆ ಜರುಗುವುದು. ಅದೇ ದಿವಸ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಾಜಂತ್ರಿ, ಕರಡಿ ಮಜಲು ರಾತ್ರಿ 8 ಗಂಡೆಗೆ ಅನ್ನಸಂತರೆ​‍್ಣ ರಾತ್ರಿ 9 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಬುಡ್ಗ ಜಂಗಮ್ ಕಲಾವಿದರಿಂದ ಭಜನಾ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಕರಿಲಕ್ಷ್ಮೀ ದೇವಿ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.