ಸಿದ್ಧೇಶ್ವರ ಸಂಸ್ಥೆ, ಎಬಿವಿ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ
Kargil Vijay Day celebrated at Siddheshwar Institute, ABV School
ಸಿದ್ಧೇಶ್ವರ ಸಂಸ್ಥೆ, ಎಬಿವಿ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ
ವಿಜಯಪುರ 29 : ಎಬಿವಿ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ ಸಿದ್ಧೇಶ್ವರ ಸಂಸ್ಥೆ, ವಿಜಯಪುರ ಇದರ ಅಡಿಯಲ್ಲಿರುವ ಎಬಿವಿ ಶಾಲೆಯಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿನವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ತೋರಿದ ಶೌರ್ಯ ಮತ್ತು ತ್ಯಾಗ ಬಲಿದಾನವನ್ನು ಗೌರವಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪುಷ್ಪಾರ್ಚನೆ ಮೂಲಕ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಎಲ್ಲರೂ ಮೌನಾಚರಣೆ ಮೂಲಕ ಯೋಧರನ್ನು ಸ್ಮರಿಸಿದರು. ಶ್ರದ್ಧಾಂಜಲಿ ದ್ಯೋತಕವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೀಪ ಬೆಳಗಿಸಿದರು. ದೀಪದ ಬೆಳಕು ಶಾಲಾಆವರಣದಲ್ಲಿ ಆಕರ್ಷಕವಾಗಿ ಅದು ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ಸಂಗಮರವರು ಕಾರ್ಯಕ್ರಮ ಉದ್ಘಾಟಿಸಿ, ಕಾರ್ಗಿಲ್ ಯುದ್ಧದ ಹಿನ್ನೆಲೆ, ಯೋಧರ ಧೈರ್ಯ ತ್ಯಾಗ ಮತ್ತು ದೇಶ ಪ್ರೇಮದ ಮಹತ್ವದ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಯ ಭಾಷಣ ಯೋಧರ ತ್ಯಾಗ ಬಲಿದಾನವನ್ನು ಇನ್ನಷ್ಟು ಗೌರವಿಸಿತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತಿನ ಮಹತ್ವ ಮತ್ತು ಯೋಧರ ಬಗೆಗಿನ ಗೌರವವನ್ನು ತೋರಿಸಲಾಯಿತು. ಕಾರ್ಗಿಲ್ ವಿಜಯ್ ದಿನಾಚರಣೆ ಅಂಗವಾಗಿ ಶಾಲೆಯಲ್ಲೆಲ್ಲಾ ಬೆಳಗಿಸಿದ ಕ್ಯಾಂಡಲ್ಗಳು, ವಿದ್ಯಾರ್ಥಿಗಳ ಶ್ರದ್ಧೆಯ ಭಾಗವಹಿಸುವಿಕೆ ಈ ಆಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಿತು. ಈ ಮೇಲಿನ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸಲಾಗಿದೆ ತಮ್ಮ ವಿಶ್ವಾಸಿ ಬಸಯ್ಯ ಎಸ್ ಹಿರೇಮಠ ಚೇರಮನ್,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 