ಕಾರವಾರ: ಮತದಾರರ ಜಾಗೃತಿಗಾಗಿ ವಿಶೇಷ ಬೈಕ್ ಸವಾರಿ ಮಾಡಿದ ಜಿಲ್ಲಾಧಿಕಾರಿ

ಕಾರವಾರ 18: ಮತದಾರರ ಜಾಗೃತಿಗಾಗಿ ಮುಖ್ಯ ಚುನಾವಣಾಧಿಕಾರಿಯಿಂದ ಅನುಮತಿ ಪಡೆದಿರುವ ಸಮರ್ಥ ಕನ್ನಡಿಗರು ಸಂಸ್ಥೆಯ ಬಸವರಾಜ ಕಲ್ಲುಸಕ್ಕರೆ ಎಂಬುವವರು ಉತ್ತರ ಕನ್ನಡ ಕಾರವಾರದಲ್ಲಿ ಮತದಾರರಿಗೆ ಮತದಾನ ಮಾಡುವಂತೆ ಕರಪತ್ರ ಹಂಚಿದರು. ಸೋಮವಾರ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅವರನ್ನು ಕಂಡು  ಅಖಂಡ ಕನರ್ಾಟಕ ಪ್ರವಾಸದ ಉದ್ದೇಶ ವಿವರಿಸಿದರು. ಜಿಲ್ಲಾಧಿಕಾರಿಗಳನ್ನು ತಮ್ಮ ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಸ್ವಲ್ಪ ದೂರ ನಗರದಲ್ಲಿ ಸಂಚರಿಸಿ ಮತದಾನದ ಮಹತ್ವದ ಪ್ರಚಾರ ಮಾಡಿದರು.