ಬೆಳಗಾವಿಯಲ್ಲೂ ಐಟಿ-ಬಿಟಿ ಕಂಪನಿಗಳನ್ನು ಆರಂಭಿಸಲು ಒತ್ತಾಯಿಸಿ ಕರವೇ ಪ್ರತಿಭಟನೆ
Karave protests demanding the opening of IT-BT companies in Belgaum too
ಬೆಳಗಾವಿ 30: ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಅರ್ಿಸಿದರು.
ಐಟಿ-ಬಿಟಿ ಕಂಪನಿಗಳು ಇರದ ಕಾರಣ ಬೆಳಗಾವಿಯಿಂದ ಸುಮಾರು 20 ಸಾವಿರ ಉದ್ಯೋಗಾಕಾಂಕ್ಷಿಗಳು ನೌಕರಿಗಾಗಿ ಬೆಂಗಳೂರು ಮತ್ತು ಪುಣೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಬೆಳಗಾವಿಯಲ್ಲಿಯೂ ಐಟಿ-ಬಿಟಿ ಕಂಪನಿಗಳನ್ನು ನಿರ್ಮಾಣ ಮಾಡಿದರೇ, ಉದ್ಯೋಗ ಅರಸಿ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ತಂದೆ ತಾಯಿಯನ್ನು ಬಿಟ್ಟು ಬದುಕುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತದೆ. ಅಲ್ಲದೇ, ಬೆಳಗಾವಿಯೂ ಅಭಿವೃದ್ಧಿಯೂ ಆಗುತ್ತದೆ. ಆದ್ದರಿಂದ ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೇ, ಪ್ರಾಣ ತ್ಯಾಗಕ್ಕೂ ಸಿದ್ಧವಾಗಿದ್ದು, ಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದು ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಎಚ್ಚರಿಸಿದರು.
ಇಂಜಿನಿಯರ್ ಪದವಿ ಪಡೆದು ಆಟೋ ಓಡಿಸುತ್ತಿರುವ ಪದವಿಧರನೊಂದಿಗೆ ಇಂಜಿನಿಯರ್ ಸಮೋಸಾಗಳನ್ನು ಮಾರಾಟ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಕರವೇ ಪ್ರವೀಣ ಶೆಟ್ಟಿ ಬಣದ ನಗರಾಧ್ಯಕ್ಷ ರಾಜು ಕಲ್ಪತ್ರಿ, ಜಿಲ್ಲಾ ಉಪಾಧ್ಯಕ್ಷ ಕಣ್ಣಪ್ಪ ಬಡಕನ್ನವರ, ಜಿಲ್ಲಾ. ಪ್ರಧಾನ ಕಾರ್ಯದರ್ಶಿ ರಾಜು ಗಲಗಲಿ, ಅರುಣ, ಪಾಟೀಲ, ಬಾಳಾಸಾಹೇಬ ಉದಗಟ್ಟಿ, ಗುರುಗೌಡಾ ಪಾಟೀಲ, ಗಿರಿಜಾ, ಜೋಯಲ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 