ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ​‍್ಡ

ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ​‍್ಡ Karave left the Praveen Shetty faction and joined the Shivaramegowda faction

ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ​‍್ಡ 

ಬೆಳಗಾವಿ 27: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಅಥಣಿ, ರಾಮದುರ್ಗ, ಖಾನಾಪೂರ ತಾಲೂಕಿನ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿ ಶಿವರಾಮೇಗೌಡ ಬಣಕ್ಕೆ ಸೇರೆ​‍್ಡಯಾದರು.  ಸೇರೆ​‍್ಡಯಾದ ಕಾರ್ಯಕರ್ತರನ್ನು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಅವರು ಸ್ವಾಗತಿಸಿ ಮಾತನಾಡಿ ಎಂ.ಇ.ಎಸ್ ಕರಾಳದಿನವನ್ನು ಆಚರಿಸಲು ಮುಂದಾದರೇ, ಅದೇ ಜಾಗದಲ್ಲಿ ಕರವೇ ಶಿವರಾಮೇಗೌಡ ಬಣದ ಹುಲಿಗಳು ಹೋಗಿ ರಾಜ್ಯೋತ್ಸವವನ್ನು ಆಚರಿಸಲಿವೆ. ಎಂ.ಇ.ಎಸ್‌. ಪುಂಡರನ್ನು ಹೊರ ಹಾಕಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿವೆ ಎಂದು ಹಿರೇಕೂಡಿ ಎಚ್ಚರಿಕೆಯನ್ನು ನೀಡಿದರು. 

ನಮ್ಮ ಸಂಘಟನೆಯೂ ನೀಡಿದ ಬಲವನ್ನು ಪ್ರಯೋಗಿಸಿ ನಾಡು ನುಡಿ ರಕ್ಷಣೆಗಾಗಿ ಶ್ರಮಿಸಬೇಕು. ಈ ಬಾರಿ ಎಂ.ಇ.ಎಸ್‌. ಮತ್ತೇ ಕರಾಳ ದಿನವನ್ನು ಆಚರಿಸಿದರೇ, ಆ ಭಾಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಭೇಟಿ ನೀಡಿ, ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಜಿಲ್ಲಾಡಳಿತ ಕರಾಳ ದಿನಕ್ಕೆ ಅನುಮತಿ ನೀಡಿದರೇ, ತೀವ್ರ ಪ್ರತಿಭಟನೆಯನ್ನು ನಡೆಸುತ್ತೇವೆ. ಎಂ.ಇ.ಎಸ್‌. ಪುಂಡರನ್ನು ಹೊರ ಹಾಕುವ ಕೆಲಸವನ್ನು ಕರವೇ ಶಿವರಾಮೇಗೌಡ ಬಣದ ಹುಲಿಗಳು ಮಾಡಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿಲಿದ್ದೇವೆ. ಕರಾಳ ದಿನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರೇ ಬೆಳಗಾವಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು. ಅಣ್ಣಾಸಾಹೇಬ್ ತೆಲಸಂಗ, ಮೊಹ್ಮದ್ ಸನದಿ, ಅಕೀಲಾ ಪಠಾಣ್, ರೇಷ್ಮಾ ಕಿತ್ತೂರ್, ವಿದ್ಯಾ ಸತ್ಯಾಯಗೋಳ, ಬಾಬು ಮಡಾಕರ, ಬಸವರಾಜ್ ಬೇಕಣಿ, ಮುನೀರ್ ಶಮಶೇರ್, ಶೌಕತ್ ಅಲಿ ಬಿಷಣ್ಣವರ, ಬಾಲಚಂದ್ರ ಹೂಲಿಕಟ್ಟಿ, ನಝೀರ್ ಹೊನ್ನಾಪೂರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.