ವೃತ್ತಿಯನ್ನು ಗೌರವದಿಂದ ನಡೆಸಿದ ಕಾಯಕ ಶರಣರು ಎಲ್ಲರಿಗೂ ಆದರ್ಶ: ಮಾರುತಿ

ಕೊಪ್ಪಳ 22: ವೃತ್ತಿಯನ್ನು ಗೌರವದಿಂದ ನಡೆಸಿ ಮಹಾನಿಯರಾದ ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಹೇಳಿದರು.  

ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರದಂದು (ಫೆ.21) ಆಯೋಜಿಸಲಾದ ``ಕಾಯಕ ಶರಣರ ಜಯಂತಿ'' ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ವಚನ' ಎಂದರೆ ಒಂದು ಮಾತು.  ಇದಕ್ಕೆ ಕಾವ್ಯ, ಮಹಾ ಕಾವ್ಯ, ಪುರಾಣ ಇಂತಹ ಹೆಸರು ಬಂದಿಲ್ಲ, ಏಕೆಂದರೆ ಶರಣರ ನಡೆ, ನುಡಿ, ಆಚಾರ, ವಿಚಾರ, ಕಾಯಕ ಒಂದೇಯಾಗಿತ್ತು ಆದ್ದರಿಂದ ವಚನಗಳು ಎಂದು ಕರೆಯಲ್ಪಟ್ಟವು.  12ನೇ ಶತಮಾನವು ಧಾಮರ್ಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿಯನ್ನುಂಟು ಮಾಡಿದೆ.  ಇವತ್ತಿನ ನಮ್ಮ ಸಂವಿಧಾನದ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು.  ಯಾರನ್ನು ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನಿಯರಾಗಿದ್ದಾರೆ.  ವಚನಗಳು ಹಾಗೂ ಬೋಧನೆಗಳನ್ನು ಸ್ಮರಿಸಲು ಹಾಗೂ ಜನರಲ್ಲಿ ತಿಳಿಸಲು ಇಂತಹ ಮಹನಿಯರ ಜಂಯಂತಿಗಳನ್ನು ಸಕರ್ಾರದ ವತಿಯಿಂದ ಆಚರಿಸಲಾಗುತ್ತಿದೆ.  ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಕಾಯಕ ಶರಣರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದ ಕೊಪ್ಪಳದ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಅವರು ಮಾತನಾಡಿ,  ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ, ಇವರುಗಳು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿ, ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಮೂಲಕ ತಮ್ಮ ಆದರ್ಶಗಳನ್ನು ಮುಂದಿಟ್ಟ ಮಹಾಪುರುಷರುಗಳಾಗಿದ್ದಾರೆ.  ವಚನಗಳು ಬದುಕಿನ ಶ್ರೇಷ್ಠ ಮಾನವೀಯ ಮೌಲ್ಯಗಳು ಹಾಗೂ ಸಹೋದರತೆ, ಸಮಾನತೆ ಸಾರುವ ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಪದಗಳಾಗಿದ್ದು, ಇವುಗಳ ಮೂಲಕ 12ನೇ ಶತಮಾನದಲ್ಲಿ ಅನೇಕ ಮಹನಿಯರು, ಶಿವ ಶರಣರು ಕಲ್ಯಾಣ ಕ್ರಾಂತಿಯನ್ನುಂಟು ಮಾಡಿದ್ದಾರೆ.  ಯಾರಿಗೆ ವೇದದ ಅಧ್ಯಯನವನ್ನು ತಿರಸ್ಕರಿಸಲಾಗಿತ್ತು, ಸಮಾಜದಿಂದ ಅವರಿಗೆ ಅಸಮಾನತೆಯಿಂದ ನೋಡಲಾಗುತ್ತಿತ್ತು. ಅಂತಹ ವ್ಯವಸ್ಥೆಯನ್ನು ಬದಲಾಯಿಸಿದ್ದು ಬಸವೇಶ್ವರರ ನೇತೃತ್ವದ ಶರಣ ಪಡೆ.  ಬಸವಣ್ಣನವರ ಅನುಭವ ಮಂಟಪದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಧೂಳಯ್ಯ, ಸೂಳೆ ಸಂಕವ್ವೆ, ಆಯ್ದಕ್ಕಿ ಮಾರಯ್ಯಗೆ ಸ್ಥಾನ ನೀಡುವ ಮೂಲಕ ಸರ್ವ ಜನಾಂಗದವರಿಗೂ ವಚನ ಸಾಹಿತ್ಯ ರಚನೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು.  ಉರಿಲಿಂಗಪೆದ್ದಿ ಅವರು 12ನೇ ಶತಮಾನದಲ್ಲಿಯೇ ಪಿಠಾಧೀಶರಾಗಿದ್ದು ಹಾಗೂ ಅಂತರ್ ಜಾತಿ ವಿವಾಹ ಮಾಡಿಸಿದ್ದು ಮಾದರಿಯಗಿದೆ.  ಶರಣರು ಹೇಳಿದ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಜಾತಿ, ಧರ್ಮ, ಭೇಧ-ಭಾವ ಮಾಡದೇ ಎಲ್ಲರೊಂದಿಗೆ ಸೇರಿ ಮೊದಲು ನಾವು ಮನುಷ್ಯರಾಗಿ ಬಾಳಬೇಕು ಎಂಬುವುದು ಶರಣರ ಪ್ರಮುಖ ಆಶಯವಾಗಿದೆ.  ಉರಿಲಿಂಗಪೆದ್ದಿರವರ 366 ವಚನಗಳು, ಡೋಹರ ಕಕ್ಕಯ್ಯನವರ 06 ವಚನಗಳು, ಮಾದಾರ ಧೂಳಯ್ಯನವರ 106 ವಚನಗಳು ಲಭ್ಯ ಇವೆ.  ಸಮಗಾರ ಹರಳಯ್ಯ ನವರ ವಚನಗಳು ಲಭ್ಯವಿಲ್ಲ.  ಆದರೂ ಸಹ ವಚನ ಕಾಂತ್ರಿಯನ್ನುಂಟು ಮಾಡಿದ್ದಾರೆ ಎಂದು ತಿಳಿಯುತ್ತದೆ.  ಇಂತಹ ಮಹನಿಯರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ಕಾರ್ಯಕ್ರಮದ ಪೂರ್ವದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.  ಸಮಾರಂಭದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಕೊಪ್ಪಳದ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.  ತಹಶೀಲ್ದಾರ ಜೆ.ಬಿ. ಮಜ್ಜಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ದೊಡ್ಡಬಸಪ್ಪ, ಸಮಾಜದ ಮುಖಂಡರಾದ ಡಾ. ಜ್ಞಾನಸುಂದರ, ರಾಮಣ್ಣ ಕಂದರಿ, ಬಸವರಾಜ ಚಿಲವಾಡಗಿ ಹಾಗೂ ಹಲವು ಗಣ್ಯರು ಮತ್ತು ಜಿಲ್ಲಾಧಿಕಾರಿ ಕಾಯರ್ಾಲಯದ ಮಹಾವೀರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಸಿ.ವಿ. ಜಡಿಯವರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.