ಆಳಮೇಲಿನಲ್ಲಿ ಕಾರಹುಣ್ಣಿಮೆ ಸಂಭ್ರಮ: ಎತ್ತುಗಳ ಸ್ಪರ್ಧೆ, ರೈತರ ಉತ್ಸಾಹ

ಆಳಮೇಲಿನಲ್ಲಿ ಕಾರಹುಣ್ಣಿಮೆ ಸಂಭ್ರಮ: ಎತ್ತುಗಳ ಸ್ಪರ್ಧೆ, ರೈತರ ಉತ್ಸಾಹ  Karahunnim celebrations in the hills: Bulls compete, farmers are enthusiastic

ಲೋಕದರ್ಶನ ವರದಿ 

   ಆಲಮೇಲ 30 :  ಪಟ್ಟಣದಲ್ಲಿ ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಶಮುಖ ದೇಶಪಾಂಡೆ ಮನೆತನದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರು ಎತ್ತುಗಳ ಸ್ಪರ್ಧೆ ಆಯೋಜಿಸಿ ಸಂಭ್ರಮಿಸಿದರು. ಮಾರುತಿ ಲಾವಟೆ, ಬಸವರಾಜ ಹೊಸಮನಿ, ಮಹಿಬೂಬ್ ಸೌದೆಗಾರ ಸೇರಿದಂತೆ ಹಲವು ರೈತರು ತಮ್ಮ ಎತ್ತುಗಳನ್ನು ಸ್ಪರ್ಧೆಗೆ ಇಳಿಸಿದರು. ಗ್ರಾಮದ ಆವರಣದಲ್ಲಿ ಐದು ಸುತ್ತಿನ ಸ್ಪರ್ಧೆ ನಡೆದಿದ್ದು, ಬಳಿಕ ಗ್ರಾಮೀಣ ಜಾನಪದ ಕಾರ್ಯಕ್ರಮಗಳು ಹಾಗೂ ದೇವರ ಅಗಸಿಯಲ್ಲಿ ಕರಿ ಹರಿಯುವ ಸಂಪ್ರದಾಯ ನೆರವೇರಿತು.  ಕಾರ್ಯಕ್ರಮದಲ್ಲಿ ಸುಭಾಷ ಸಾಲಕ್ಕಿ, ಅಶೋಕ ಕೋಳಾರಿ, ಬಿ.ಆರ್‌. ಎಂಟಮನ್, ದೇವಪ್ಪ ಗುಣಾರಿ, ಗುರು ಸಿದ್ದ ಲೋಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಾವಿರಾರು ರೈತರು ಹಾಗೂ ಸಾರ್ವಜನಿಕರು ಎತ್ತುಗಳ ಸ್ಪರ್ಧೆ ವೀಕ್ಷಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.