ಕಾರ ಹುಣ್ಣಿಮೆ: ಹುಲೂರಿನಲ್ಲಿ ಬಿಳಿ ಹೋರಿ ಪ್ರಥಮ
Kara full moon: First white bull seen in Hulur
ಲಕ್ಷ್ಮೇಶ್ವರ 30: ತಾಲ್ಲೂಕಿನಾದ್ಯಂತಸೋಮವಾರ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿಯನ್ನು ಓಡಿಸಿ ಅವುಗಳಲ್ಲಿ ಪ್ರಥಮ ಬಂಧ ಎತ್ತನ್ನು ಕರಿಹರಿದ ಎತ್ತು ಎಂದು ಎತ್ತಿನ ಮೆರವಣಿಗೆಯನ್ನು ಮಾಡಿ ಸಂಭ್ರಮಿಸುವುದು ವಾಡಿಕೆಯಿಂದ ನಡೆದುಕೊಂಡು ಬಂದಿದೆ ಅದರಂತೆ ಸೋಮವಾರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಗ್ರಾಮದ ಎಲ್ಲ ರೈತರು ತಮ್ಮ ಎತ್ತುಗಳನ್ನು ಶೃಂಗಾರ ಗೊಳಿಸಿ ಪೂಜಿಸುವುದರೊಂದಿಗೆ ಸಂಜೆ ಕರಿ ಹರಿಯಲು ಬಿಟ್ಟರುಅದರಲ್ಲಿ ಗ್ರಾಮದ ಬಸನಗೌಡ್ರು ಪಾಟೀಲ್ ಅವರ ಬಿಳಿ ಹೋರಿ ಎಲ್ಲ ಎತ್ತುಗಳ ಗಿಂತ ಎಲ್ಲಾ ಹೋರಿಗಳಿಗಿಂತ ಮುಂದೆ ಓಡಿ ಬಂದು ಬೇನಸೊಪ್ಪಿನ ಹಗ್ಗ ಹರಿಯುವ ಮೂಲಕ ಕರಿ ಹರಿಯುತು ಕರಿಹರಿದ ಎತ್ತನ್ನು ನೋಡಿ ಎಲ್ಲಾ ರೈತ ಬಾಂಧವರು ಕೇಕೆ ಹೊಡೆದು ಸಂಭ್ರಮಿಸಿದರು ನಂತರ ಗ್ರಾಮದಲ್ಲಿ ಸಂಭ್ರಮದೊಂದಿಗೆ ಕರಿಹರಿದ ಹೋರಿಯನ್ನು ಮೆರವಣಿಗೆ ಮಾಡಿದರು ಅದರಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಲ್ಲಾ ರೈತ ಬಾಂಧವರು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿದರು.
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 